ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕಾದ ಮಾಜಿ ಕ್ರಿಕೆಟಿಗ ಮುರಳೀಧರನ್ ಬಯೋಪಿಕ್ '800' ಒಟಿಟಿಗೆ

Published 21 ನವೆಂಬರ್ 2023, 10:47 IST
Last Updated 21 ನವೆಂಬರ್ 2023, 10:47 IST
ಅಕ್ಷರ ಗಾತ್ರ

ಬೆಂಗಳೂರು: ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರ ಜೀವನಾಧಾರಿತ ‘800’ ಸಿನಿಮಾ ಡಿಸೆಂಬರ್‌ 2ರಂದು ಜಿಯೋ ಸಿನಿಮಾದ ಮೂಲಕ ಒಟಿಟಿಗೆ ಬರಲು ಸಜ್ಜಾಗಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ‘ಎಕ್ಸ್‌‘ನಲ್ಲಿ ಜಿಯೋ ಸಿನಿಮಾ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಧಿಕೃತವಾಗಿ ಮಾಹಿತಿ ನೀಡಿದೆ.

‘800’ ಚಿತ್ರ ಅಕ್ಟೋಬರ್‌ 6ರಂದು ವಿಶ್ವದಾದ್ಯಂತ ಹಲವು ಕಡೆ ಬಿಡುಗಡೆಯಾಗಿತ್ತು.

ಶ್ರೀಲಂಕಾದ ಮುತ್ತಯ್ಯ ಮುರಳೀದರನ್ ಅವರು ವಿಶ್ವ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿದ್ದರು. ಟೆಸ್ಟ್ ಕ್ರಿಕೆಟ್‌ನಲ್ಲಿ 800, ಏಕದಿನ ಕ್ರಿಕೆಟ್‌ನಲ್ಲಿ 534, ಟಿ20 ಕ್ರಿಕೆಟ್‌ನಲ್ಲಿ 13 ವಿಕೆಟ್‌ ಪಡೆದಿದ್ದಾರೆ. ಅವರ ಜೀವನಾಧಾರಿತ ಚಿತ್ರಕ್ಕೂ 800 ಎಂದೇ ಹೆಸರಿಡಲಾಗಿದೆ. ಮುತ್ತಯ್ಯ ಮುರಳೀಧರನ್​ ಬಡ ಕುಟುಂಬದ ಹಿನ್ನೆಲೆಯಿಂದ ಬಂದವರು. ಕ್ರಿಕೆಟರ್ ಆಗಬೇಕು ಎನ್ನುವ ಕನಸು ಕಂಡಿದ್ದರು. ಎಲ್ಲ ಅಡೆತಡೆಗಳನ್ನು ದಾಟಿ ಅವರು ಬೆಳೆದರು. ಮುತ್ತಯ್ಯ ಮುರಳೀಧರನ್ ಕ್ರಿಕೆಟ್ ಬದುಕು ರೋಚಕ ಅಂಶಗಳಿಂದ ಕೂಡಿದೆ. ಸಾಕಷ್ಟು ವಿವಾದಗಳನ್ನು ಅವರು ಮೈಮೇಲೆ ಎಳೆದುಕೊಂಡಿದ್ದರು. ಪಾಕಿಸ್ತಾನದಲ್ಲಿ ಇವರಿದ್ದ ಬಸ್‌ ಮೇಲೆ ಗುಂಡಿನ ದಾಳಿ ನಡೆದಿತ್ತು ಈ ಎಲ್ಲಾ ಅಂಶಗಳು ಚಿತ್ರದಲ್ಲಿವೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿತ್ತು.  

ಈ ಸಿನಿಮಾವನ್ನು ಎಂ.ಎಸ್​. ಶ್ರೀಪತಿ ನಿರ್ದೇಶನ ಮಾಡಿದ್ದಾರೆ. ಬಾಲಿವುಡ್‌ ನಟ ಮಧುರ್​ ಮಿತ್ತಲ್​ಮುತ್ತಯ್ಯ ಮುರಳೀಧರನ್ ಪಾತ್ರದಲ್ಲಿ ನಟಿಸಿದ್ದಾರೆ.  ಅವರ ಪತ್ನಿಯ ಪಾತ್ರದಲ್ಲಿ ಮಹಿಮಾ ನಂಬಿಯಾರ್​ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಗಿಬ್ರಾನ್‌ ಅವರ ಸಂಗೀತ ಇದೆ. ವಿವೇಕ್‌ ರಂಗಚಾರಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಸಿನಿಮಾವನ್ನು ತಮಿಳಿನಲ್ಲಿ ನಿರ್ಮಾಣ ಮಾಡಲಾಗಿದ್ದು ಹಿಂದಿ, ತೆಲುಗು, ಇಂಗ್ಲಿಷ್‌ಗೆ ಡಬ್‌ ಮಾಡಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT