ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟಿ ಕಾಜೋಲ್, ಕೃತಿ ಸನೂನ್ ಅಭಿನಯದ 'ದೋ ಪತ್ತೀ' ಚಿತ್ರ ಒಟಿಟಿಗೆ

Published 19 ಡಿಸೆಂಬರ್ 2023, 11:35 IST
Last Updated 19 ಡಿಸೆಂಬರ್ 2023, 11:35 IST
ಅಕ್ಷರ ಗಾತ್ರ

ಮುಂಬೈ: ದಿಲ್‌ ವಾಲೇ ಸಿನಿಮಾದ ಬಳಿಕ ಬಾಲಿವುಡ್‌ ನಟಿ ಕಾಜೋಲ್ ಹಾಗೂ ಕೃತಿ ಸನೂನ್ ಒಟ್ಟಿಗೆ ಕಾಣಿಸಿಕೊಂಡಿರುವ 'ದೋ ಪತ್ತೀ‘( do patti) ಸಿನಿಮಾ 2024ರಲ್ಲಿ ಒಟಿಟಿ ವೇದಿಕೆ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ನೆಟ್‌ಫ್ಲಿಕ್ಸ್, ಉತ್ತರ ಭಾರತದ ಬೆಟ್ಟಗಳಲ್ಲಿ ಚಿತ್ರೀಕರಿಸಲಾಗಿರುವ 'ದೋ ಪತ್ತೀ' ಚಿತ್ರವು ಥ್ರಿಲ್ಲರ್‌ ಹಾಗೂ ನಿಗೂಢ ಕಥಾಹಂದರ ಹೊಂದಿದೆ. ಈ ಚಿತ್ರ ಮುಂದಿನ ವರ್ಷ ಬಿಡುಗಡೆಗೆ ಸಜ್ಜಾಗಿದೆ ಎಂದು ಮಾಹಿತಿ ನೀಡಿದೆ.

'ದೋ ಪತ್ತೀ' ಸಿನಿಮಾವನ್ನು ಶಶಾಂಕ ಚರ್ತುರ್ವೇದಿ ನಿರ್ದೇಶಿಸಿದ್ದಾರೆ. ಮೊದಲ ಬಾರಿಗೆ ಬ್ಲೂ ಬಟರ್‌ಫ್ಲೈ ಫಿಲ್ಮ್ಸ್ ಮತ್ತು ಕಥಾ ಪಿಕ್ಚರ್ಸ್‌ ಬ್ಯಾನರ್‌ನಡಿ ಈ ಚಿತ್ರ ನಿರ್ಮಾಣವಾಗಿದೆ.

ಓಂ ರಾವತ್‌ ನಿರ್ದೇಶನದ ಆದಿಪುರುಷ್‌ ಸಿನಿಮಾದಲ್ಲಿ ನಟ ಪ್ರಭಾಸ್‌ ಜತೆಗೆ ಕೃತಿ ಸನೂನ್ ತೆರೆ ಮೇಲೆ ಕಾಣಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT