ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೈನಥಾನ್’   ಮಳೆಯಲ್ಲಿ ಹುರುಪಿನ ಹಜ್ಜೆ

Published 21 ಜುಲೈ 2023, 23:40 IST
Last Updated 21 ಜುಲೈ 2023, 23:40 IST
ಅಕ್ಷರ ಗಾತ್ರ

ಮಳೆಯಲ್ಲಿ ಸ್ವಲ್ಪ ಹೊತ್ತು ನೆನೆದರೂ ಶೀತ ಆಗಬಹುದೆಂಬ ಭಯ ಕೆಲವರಲ್ಲಿರಬಹುದು.  ಆದರೆ ಮಳೆಗೆ  ಸಂಪೂರ್ಣವಾಗಿ ತೊಯ್ದು ತೊಪ್ಪೆಯಾಗಿ ನಡೆಯುವ ಕಲ್ಪನೆ ಮಾಡಿಕೊಂಡರೆ ಆ ಕಲ್ಪನೆಯೇ ಚಂದ ಅಲ್ವಾ. ಈ ವಿಶಿಷ್ಟ  ಕಲ್ಪನೆಯೊಂದಿಗೆ ಬೆಂಗಳೂರಿನ ರೈನಥಾನ್ ತಂಡ ಪ್ರತಿ ಮಳೆಗಾಲದಲ್ಲಿಯೂ ಈ ಕಾರ್ಯಕ್ರಮ ಆಯೋಜಿಸುತ್ತಿದೆ.  


ರೈನಥಾನ್ ಎಂದರೇನು?

 ಕೊಡೆ, ರೈನ್ ಕೋಟ್ , ಟೋಪಿ ಯಾವುದರ ಹಂಗಿಲ್ಲದೇ ಒಂದಿಡೀ ದಿನ ಮಳೆಯಲ್ಲಿ ನೆನೆಯುತ್ತಾ  18- 20 ಕಿ.ಮೀ ನಿಗದಿತ ದೂರ ತಲುಪುವುದು.  12 ವರ್ಷಗಳಿಂದ ಆಯೋಜನೆಯಾಗುತ್ತಿರುವ ಈ ರೈನಥಾನ್‌ನಲ್ಲಿ ನಡಿಗೆಯ ಜತೆ ಮನರಂಜನೆಯೂ ಉಂಟು. 

ಸದ್ಯಕ್ಕೆ ಆಗಸ್ಟ್‌ 5ರಂದು ದಕ್ಷಿಣ ಕನ್ನಡದ ಕುಕ್ಕೆ ಸಮೀಪ ಬಿಳಿನೆಲೆ ಗೋಪಾಲಕೃಷ್ಣ ದೇವಸ್ಥಾನದಿಂದ ಕೊಂಬಾರುವರೆಗೆ 15. ಕಿ.ಮೀ ‘ರೈನಥಾನ್‘ ಮಾಡುವ ಉದ್ದೇಶವಿದೆ. ಮಳೆಯಲ್ಲಿ ಹೆಜ್ಜೆ ಹಾಕುತ್ತಲೇ ಬೀಜಗಳ ಬಿತ್ತನೆ ಮಾಡುವ ಇರಾದೆಯೂ ಇದೆ. ಜತೆಗೆ ದಾರಿಯಲ್ಲಿ ಸಿಗುವ ಮಣ್ಣು, ಕಲ್ಲು ಬಳಸಿ ದೇಸಿ ಆಟ ಆಡಲಾಗುವುದು ಎನ್ನುತ್ತಾರೆ ರೈನಥಾನ್‌ ಆಯೋಜಕ ಕಿಶೋರ್‌ ಪಟವರ್ಧನ್. 

ಸದ್ಯಕ್ಕೆ ಬೆಂಗಳೂರಿನಿಂದ 50 ಜನ, ಅಲ್ಲೇ ಸ್ಥಳೀಯವಾಗಿ 20 ಜನ ಬರುವ ನಿರೀಕ್ಷೆ ಇದೆ. ಈ ರೈನಥಾನ್‌ನಲ್ಲಿ ಸ್ಥಳೀಯ ಸಾಧಕರನ್ನು ಸನ್ಮಾನಿಸುವ ಆಲೋಚನೆಯೂ ಇದೆ. ತಂಡದ ಗುರುತಿಗೆ ಟೀ ಶರ್ಟ್ ಹಾಗೂ ಬ್ಯಾಗ್‌ ನೀಡಲಾಗುವುದು.  ಪರಿಸರದ ನಡುವೆ ಮಳೆಯಲ್ಲಿ ಹೆಜ್ಜೆ ಹಾಕುವವರಿಗೆ ಬಾಣಸಿಗರ ತಂಡ ಬಿಸಿ ಚಹಾ, ತಿಂಡಿ ಹಾಗೂ ಮಧ್ಯಾಹ್ನದ ಭೋಜನವನ್ನು ಅಲ್ಲಿಗೇ ತಂದು ಬಡಿಸುತ್ತಾರೆ.  

ಪಾಲ್ಗೊಳ್ಳಲು ಆಸಕ್ತರು www.rainathon.com ಸಂಪರ್ಕಿಸಬಹುದು.

rainthon 2
rainthon 2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT