ಆರೋಪಿಯನ್ನು ನೇಪಾಳದ ಪರ್ಸಾ ಜಿಲ್ಲೆಯ 26 ವರ್ಷದ ಯುವಕ ಎಂದು ಗುರುತಿಸಲಾಗಿದೆ.
ಆರೋಪಿಯು ಹಿಮಾಚಲ ಪ್ರದೇಶದಲ್ಲಿ ಕೆಲಸ ಮಾಡುತ್ತಿದ್ದ. ಸಾಮಾಜಿಕ ಮಾಧ್ಯಮವೊಂದರಲ್ಲಿ ಸಂತ್ರಸ್ತೆಯೊಂದಿಗೆ ಸ್ನೇಹ ಬೆಳಸಿದ್ದ ಆರೋಪಿ, ಕೆಲವು ದಿನಗಳ ನಂತರ ಆಕೆಯ ಗ್ರಾಮದಲ್ಲಿಯೇ ಭೇಟಿ ಮಾಡುವುದಾಗಿ ತಿಳಿಸಿದ್ದಾನೆ.
ಭೇಟಿ ವೇಳೆ ಆಕೆಯನ್ನು ಅಪಹರಿಸಿ, ಹಿಮಾಚಲ ಪ್ರದೇಶಕ್ಕೆ ಕರೆದೊಯ್ದು ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ ಎಂದು ಸಂತ್ರಸ್ತೆ ತಿಳಿಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ರಂಜನ್ ವರ್ಮ ಮಾಹಿತಿ ನೀಡಿದ್ದಾರೆ.