ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

KKR ಮಾಜಿ ಕೋಚ್‌ ಪಂಡಿತ್‌ ಕಾರ್ಯಶೈಲಿಗೆ ವಿದೇಶಿ ಆಟಗಾರರು ಬೇಸರ : ಡೇವಿಡ್ ವೈಸ್

Published 28 ಮಾರ್ಚ್ 2024, 16:16 IST
Last Updated 28 ಮಾರ್ಚ್ 2024, 16:16 IST
ಅಕ್ಷರ ಗಾತ್ರ

ವದೆಹಲಿ: ಐಪಿಎಲ್‌ನ ಹಿಂದಿನ ಆವೃತ್ತಿಯಲ್ಲಿ ಕೋಲ್ಕತ ನೈಟ್ ರೈಡರ್ಸ್ ತಂಡದ ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ ಅವರ ಕಠಿಣ ಕಾರ್ಯ ಶೈಲಿಯಿಂದ ಹಲವಾರು ವಿದೇಶಿ ಕ್ರಿಕೆಟಿಗರು ನಿರಾಸೆಗೊಂಡಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದ ಮಾಜಿ ಆಲ್ ರೌಂಡರ್ ಡೇವಿಡ್ ವೈಸ್ ಹೇಳಿದ್ದಾರೆ.

2023 ರಲ್ಲಿ ಕೆಕೆಆರ್ ಪರ ಮೂರು ಐಪಿಎಲ್ ಪಂದ್ಯಗಳನ್ನು ಆಡಿದ 38 ವರ್ಷದ ಆಲ್‌ರೌಂಡರ್‌, ವಿದೇಶಿ ಕ್ರಿಕೆಟಿಗರು ಹೇಗೆ ವರ್ತಿಸಬೇಕು ಅಥವಾ ಏನು ಧರಿಸಬೇಕು ಎಂಬುದರ ಬಗ್ಗೆ ತರಬೇತುದಾರರಿಂದ ತರಬೇತಿ ಪಡೆದಿರುವುದಕ್ಕೆ ಸಂತೋಷವಾಗಿಲ್ಲ ಎಂದರು.

‘ಅವರು (ಪಂಡಿತ್) ಭಾರತದಲ್ಲಿ ಉಗ್ರಗಾಮಿ ಧೋರಣೆ ತರಬೇತುದಾರ ಎಂದು ಕರೆಯಲ್ಪಡುತ್ತಾರೆ. ಅವರು ತುಂಬಾ ಕಟ್ಟುನಿಟ್ಟು ಮತ್ತು ಶಿಸ್ತಿನ ವ್ಯಕ್ತಿ. ಕೆಲವೊಮ್ಮೆ ಫ್ರ್ಯಾಂಚೈಸಿ ಕ್ರಿಕೆಟ್‌ನಲ್ಲಿ ವಿದೇಶಿ ಆಟಗಾರರನ್ನು ಹೊಂದಿರುವಾಗ, ಅವರು ಹೇಗೆ ವರ್ತಿಸಬೇಕು, ಅವರು ಏನು ಧರಿಸಬೇಕು ಮತ್ತು ಇಡೀ ಸಮಯ ಏನು ಮಾಡಬೇಕು ಎಂಬುದನ್ನು ಯಾರೂ ಬಂದು ಹೇಳುವ ಅಗತ್ಯವಿಲ್ಲ. ಆದ್ದರಿಂದ, ಅದು ಕಠಿಣವಾಗಿತ್ತು’ ಎಂದು ವೈಸ್ ಇತ್ತೀಚೆಗೆ ಪಾಡ್‌ಕಾಸ್ಟ್‌ನಲ್ಲಿ ಹೇಳಿದರು.

ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್ಕಲಂ 2022ರಲ್ಲಿ ಕೋಚ್ ಹುದ್ದೆಯಿಂದ ಕೆಳಗಿಳಿದ ಬಳಿಕ ಪಂಡಿತ್ ಕೆಕೆಆರ್ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಭಾರತ ಪರ ಐದು ಟೆಸ್ಟ್ ಪಂದ್ಯಗಳನ್ನು ಆಡಿದ ಕೋಚ್, 2018 ಮತ್ತು 2019ರಲ್ಲಿ ಸತತ ರಣಜಿ ಟ್ರೋಫಿ ಪ್ರಶಸ್ತಿಗಳಿಗೆ ವಿದರ್ಭ ತಂಡಕ್ಕೆ ತರಬೇತುದಾರರಾಗಿದ್ದರು. ನಂತರ ಅವರು 2022 ರಲ್ಲಿ ಮಧ್ಯಪ್ರದೇಶವನ್ನು ಚೊಚ್ಚಲ ರಣಜಿ ಪ್ರಶಸ್ತಿಗೆ ಮುನ್ನಡೆಸಿದರು.

2022ರ ಟಿ20 ವಿಶ್ವಕಪ್ ಆಡಿದ ನಮೀಬಿಯಾ ತಂಡದ ಭಾಗವಾಗಿದ್ದ ವೈಸ್, ‘ಪಂಡಿತ್ ಅವರ ಕೋಚಿಂಗ್ ಶೈಲಿಯ ಬಗ್ಗೆ ಆಟಗಾರರು ಅಸಮಾಧಾನ ಹೊಂದಿರುವುದನ್ನು ನೋಡಿದ್ದೇನೆ. ಎರಡು ಬಾರಿಯ ಚಾಂಪಿಯನ್ ಕೆಕೆಆರ್, ಕಳೆದ ವರ್ಷ ನಿರಾಶಾದಾಯಕ ಪ್ರದರ್ಶನದೊಂದಿಗೆ ಏಳನೇ ಸ್ಥಾನ ಪಡೆದಿತ್ತು ಮತ್ತು ತನ್ನ ಪ್ರತಿಭೆ ಪ್ರದರ್ಶಿಸಲು ಹೆಚ್ಚಿನ ಅವಕಾಶಗಳು ಸಿಗದ ಕಾರಣ ನಿರಾಸೆಗೊಂಡಿದ್ದೇನೆ’ ಎಂದರು. 

 ‘ನಾನು ಒಂದೆರಡು ಸಿಕ್ಸರ್‌ಗಳ್ನು ಬಾರಿಸಿದ್ದೇನೆ. ಆದರೆ, ಅಲ್ಲಿ ನನ್ನ ಕೌಶಲ  ಪ್ರದರ್ಶಿಸಲು ನಿಜವಾಗಿಯೂ ಅವಕಾಶ ಸಿಗಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. 

ಚಂದ್ರಕಾಂತ್ ಪಂಡಿತ್ ಕೆಕೆಆರ್ ಮುಖ್ಯ ಕೋಚ್ ಆಟಗಾರ ಫಿಲ್ ಸಾಲ್ಟ್ ಜೊತೆ ಅಭ್ಯಾಸದ ವೇಳೆ . ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್
ಚಂದ್ರಕಾಂತ್ ಪಂಡಿತ್ ಕೆಕೆಆರ್ ಮುಖ್ಯ ಕೋಚ್ ಆಟಗಾರ ಫಿಲ್ ಸಾಲ್ಟ್ ಜೊತೆ ಅಭ್ಯಾಸದ ವೇಳೆ . ಪ್ರಜಾವಾಣಿ ಚಿತ್ರ ಕಿಶೋರ್ ಕುಮಾರ್ ಬೋಳಾರ್

ಪಂಡಿತ್ ಪರ ರಸೆಲ್ ಬ್ಯಾಟಿಂಗ್ 

ಬೆಂಗಳೂರು: ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಮುಖ್ಯ ಕೋಚ್ ಚಂದ್ರಕಾಂತ್ ಪಂಡಿತ್ 'ಉಗ್ರಗಾಮಿ ಧೋರಣೆ’ಯಿಂದ ಫ್ರ್ಯಾಂಚೈಸಿಯಲ್ಲಿರುವ ವಿದೇಶಿ ಆಟಗಾರರು ಬೇಸತ್ತಿದ್ದಾರೆ ಎಂದು ಕ್ರಿಕೆಟಿಗ ಡೇವಿಡ್ ವೀಸ್ ಮಾಡಿರುವ ಆರೋಪವನ್ನು ಆ್ಯಂಡ್ರೆ ರಸೆಲ್ ಅಲ್ಲಗಳೆದಿದ್ದಾರೆ.

ಕೆಕೆಆರ್ ತಂಡದ ಮಾಜಿ ಆಟಗಾರ ಡೇವಿಡ್ ಅವರು ಸದ್ಯ ನಮಿಬಿಯಾ ಲೀಗ್‌ನಲ್ಲಿದ್ದಾರೆ.  ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಸೆಲ್ ‘ಹೋದ ವರ್ಷದಿಂದಲೂ ಅವರೊಂದಿಗೆ (ಪಂಡಿತ್) ಕಾರ್ಯನಿರ್ವಹಿಸುತ್ತಿದ್ದೇವೆ.

ಯಾರಾದರೂ ಹೊಸ ಕೋಚ್ ಜೊತೆಗೆ ಕಾರ್ಯನಿರ್ವಹಿಸುವಾಗ ಒಂದು ವಿಚಾರ ಸ್ಪಷ್ಟವಾಗಿರಬೇಕು. ಅವರ ನಿಯಮ ಮತ್ತು ಕೆಲವು ಪದ್ಧತಿಗಳಿಗೆ ನಾವೂ ಹೊಂದಿಕೊಳ್ಳಬೇಕು. ನಾವೆಲ್ಲರೂ ವೃತ್ತಿಪರರು.  ಸುಮ್ಮನೆ ದೂರುತ್ತ ಕೂರುವುದಲ್ಲ’ ಎಂದರು. 

‘ಈ ಫ್ರ್ಯಾಂಚೈಸಿಗೆ ಉತ್ತಮವಾಗಿರುವುದನ್ನು ಕೊಡುವುದು ನನ್ನ ಗುರಿ. ಅವರೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಾವೂ ಲಯಕ್ಕೆ ಮರಳುತ್ತಿದ್ದೇವೆ’ ಎಂದರು.  ಕಡುಶಿಸ್ತಿಗೆ ಹೆಸರಾಗಿರುವ ಪಂಡಿತ್ ಅವರು 2022ರಲ್ಲಿ ಕೆಕೆಆರ್‌ ಕೋಚ್ ಆಗಿ ನೇಮಕವಾಗಿದ್ದಾರೆ. ಆ ವರ್ಷ ಬ್ರೆಂಡನ್ ಮೆಕ್ಲಮ್ ಅವರು ಇಂಗ್ಲೆಂಡ್‌ಗೆ ಕೋಚ್ ಆಗಿ ತೆರಳಿದ್ದರಿಂದ ಕೆಕೆಆರ್ ತರಬೇತುದಾರ ಹುದ್ದೆ ಖಾಲಿಯಾಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT