ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಸ್ವಾತಂತ್ರ್ಯ ರಕ್ಷಿಸಿಕೊಳ್ಳಲು ನಾವೆಲ್ಲರೂ ಇಲ್ಲಿದ್ದೇವೆ: ಉಕ್ರೇನ್ ಅಧ್ಯಕ್ಷ

Last Updated 26 ಫೆಬ್ರುವರಿ 2022, 5:38 IST
ಅಕ್ಷರ ಗಾತ್ರ

ಕೀವ್: ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರು ಶುಕ್ರವಾರ ಸೆಂಟ್ರಲ್ ಕೀವ್‌ನಿಂದ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ರಷ್ಯಾದ ಆಕ್ರಮಣದ ವಿರುದ್ಧ ಹೋರಾಡಲು ರಾಜಧಾನಿಯಲ್ಲೇ ಉಳಿಯುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

'ನಾವೆಲ್ಲರೂ ಇಲ್ಲಿದ್ದೇವೆ. ನಮ್ಮ ಮಿಲಿಟರಿ ಇಲ್ಲಿದೆ. ನಾಗರಿಕರು ಇಲ್ಲಿದ್ದಾರೆ. ನಾವೆಲ್ಲರೂ ನಮ್ಮ ಸ್ವಾತಂತ್ರ್ಯವನ್ನು, ನಮ್ಮ ದೇಶವನ್ನು ರಕ್ಷಿಸುತ್ತಿದ್ದೇವೆ ಮತ್ತು ಅದು ಹೀಗೆಯೇ ಇರುತ್ತದೆ' ಎಂದು ಅಧ್ಯಕ್ಷರ ಕಟ್ಟಡದ ಹೊರಗೆ ನಿಂತು ಝೆಲೆನ್‌ಸ್ಕಿ ಹೇಳಿದರು.

ಸೇನಾ ಸಮವಸ್ತ್ರವನ್ನು ಹೋಲುವ ಆಲಿವ್ ಗ್ರೀನ್ ಬಣ್ಣದ ಉಡುಪುನ್ನು ಧರಿಸಿ ಪ್ರಧಾನ ಮಂತ್ರಿ, ಸಿಬ್ಬಂದಿ ಮುಖ್ಯಸ್ಥ ಮತ್ತು ಇತರ ಹಿರಿಯ ಸಹಾಯಕರೊಂದಿಗೆ ನಿಂತಿದ್ದ ಝೆಲೆನ್‌ಸ್ಕಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಒತ್ತಡಕ್ಕೆ ಪ್ರತಿಕ್ರಿಯಿಸಿರುವಂತೆ ಕಂಡುಬಂದಿದೆ.

ರಾಜಧಾನಿ ಕೀವ್‌ನಲ್ಲಿ ರಷ್ಯಾ ಹಾಗೂ ಉಕ್ರೇನ್ ಪಡೆಗಳು ಘರ್ಷಣೆ ನಡೆಸುತ್ತಿವೆ. ರಷ್ಯಾ ಸೇನೆ ಕೀವ್‌ ನಗರವನ್ನು ಸುತ್ತುವರಿದಿದ್ದು, ವೈಮಾನಿಕ ದಾಳಿಯಾಗುವ ಆತಂಕ ಎದುರಾಗಿದೆ.

ಉಕ್ರೇನ್‌ ನಾಯಕತ್ವವನ್ನು ಪದಚ್ಯುತಗೊಳಿಸುವಂತೆ ಅಲ್ಲಿನ ಸೇನೆಗೆ ‍ಪುಟಿನ್‌ ಕರೆ ಕೊಟ್ಟಿದ್ದಾರೆ. ಉಕ್ರೇನ್‌ ನಾಯಕತ್ವವನ್ನು ‘ಭಯೋತ್ಪಾದಕರು, ಡ್ರಗ್‌ ವ್ಯಸನಿಗಳು ಮತ್ತು ನವ ನಾಜಿಗಳು’ ಎಂದು ಕರೆದಿದ್ದಾರೆ.

ಪುಟಿನ್ ಆಕ್ರಮಣವನ್ನು ವಿರೋಧಿಸಲು ಝೆಲೆನ್‌ಸ್ಕಿ ಅನೇಕ ಪಾಶ್ಚಿಮಾತ್ಯ ನಾಯಕರಿಂದ ಬೆಂಬಲವನ್ನು ಪಡೆದಿದ್ದಾರೆ. ಯುರೋಪಿಯನ್ ಯೂನಿಯನ್ ಮುಖ್ಯಸ್ಥ ಚಾರ್ಲ್ಸ್ ಮೈಕೆಲ್ ಅವರು ಟ್ವೀಟ್‌ನಲ್ಲಿ ಉಕ್ರೇನಿಯನ್ ನಾಯಕನ ವಿಡಿಯೊವನ್ನು ಎಂಬೆಡ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT