ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕೋಬನಹಳ್ಳಿ ಚಾಂದ್ ಬಾಷ ಅವರ ಕವನ: ಜೋಡಿಸುವುದೆಂದರೆ.........?

Published 27 ಜನವರಿ 2024, 23:30 IST
Last Updated 27 ಜನವರಿ 2024, 23:30 IST
ಅಕ್ಷರ ಗಾತ್ರ

ಹರಿದ ನನ್ನಂಗಿ-ಲುಂಗಿ
ನಾನೇ ಹೊಲಿದುಕೊಳ್ಳಲು ನನಗೆ ತುಂಬಾ ಇಷ್ಟ
ಉಟ್ಟದ್ದು ನಾನೇ ಹರಿದದ್ದು ನಾನೇ
ಮೆತ್ತಗಾಗುವವರೆವಿಗೂ ಮಾನ
ಮುಚ್ಚಬಹುದೆಂಬ ಆಶಾಕಿರಣದಿಂದ
ಹರಿದ ಮನಸುಗಳ?

ನನ್ನ ಹರಿದ ಚಪ್ಪಲಿಯ ಉಂಗುಷ್ಟ 
ನಾನೇ ಹೊಲಿದುಕೊಳ್ಳಲು ನನಗೆ ತುಂಬಾ ಇಷ್ಟ
ಮೆಟ್ಟಿದ್ದು ನಾನೇ ಹರಿದದ್ದು ನಾನೇ
ಸವೆಯುವವರೆವಿಗೂ ಕಾಲ್ಬೆರಳೊಂದಿಗಿನ ಬಂಧ
ಗಟ್ಟಿಯಾಗಿರಬಹುದೆಂಬ ಆಶಾಭಾವನೆಯಿಂದ
ದೂರಾದ ಸಂಬಂಧಗಳ?

ಮುರಿದುಹೋದ ಕುರ್ಚಿಯ ಕಾಲುಗಳ
ನಾನೇ ಜೋಡಿಸಿಕೊಳ್ಳಲು ನನಗೆ ತುಂಬಾ ಇಷ್ಟ
ಕುಳಿತದ್ದು ನಾನೇ ಮುರಿದದ್ದು ನಾನೇ
ಕಾಲು ಹೋದಮೇಲೆ ಕೈ
ಹಿಡಿಯಬಹುದೆಂಬ ನಂಬಿಕೆಯಿಂದ
ಮುರಿದ ಬಾಂಧವ್ಯಗಳ?

ಒಡೆದ ಗಡಿಗೆಯ ಕಂಟ 
ನಾನೇ ಮರುಜೋಡಿಸಲು ನನಗೆ ತುಂಬಾ ಇಷ್ಟ
ಬಳಸಿದ್ದು ನಾನೇ ಒಡೆದದ್ದು ನಾನೇ
ತಾಪವಾದಾಗ ತಂಪು ನೀರು 
ಸಿಗಬಹುದೆಂಬ ಆಸೆಯಿಂದ
ಒಡೆದ ಹೃದಯಗಳ?

ಜೋಡಿಸುವುದೆಂದರೆ ನನಗೆ ತುಂಬಾ ಇಷ್ಟ
ಇರೋವರೆಗೂ.....
ನನಗೆ ನೀನು
ನಿನಗೆ ನಾನು
ಆಸರೆಯಾಗಬಹುದೆಂಬ ಅನುಬಂಧದಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT