2024ರ ಮೊದಲ ತ್ರೈಮಾಸಿಕದಲ್ಲಿ ಸ್ಟ್ರೀಟ್‌ಫೈಟರ್ ವಿ4 ಲ್ಯಾಂಬೊರ್ಗಿನಿ ಬಿಡುಗಡೆಯಾದರೆ, 2ನೇ ತ್ರೈಮಾಸಿಕದಲ್ಲಿ ಡೆಸರ್ಟ್‌ಎಕ್ಸ್ ರ‍್ಯಾಲಿ, ಹೈಪರ್‌ಮೋಟಾರ್ಡ್ 698 ಮೊನೊ, ನ್ಯೂ ಸ್ಟ್ರೀಟ್‌ಫೈಟರ್ ವಿ4 ರೇಂಜ್ ರಸ್ತೆಗಿಳಿಯಲಿವೆ.
ನಾಲ್ಕನೇ ತ್ರೈಮಾಸಿಕದಲ್ಲಿ ಮಲ್ಟಿಸ್ಟ್ರಾಡಾ ವಿ4 ಆರ್‌ಎಸ್ ಹಾಗೂ ಡಿಯಾವೆಲ್ ಫಾರ್ ಬೆಂಟ್ಲೆ ಬಿಡುಗಡೆಯಾಗಲಿದ್ದು, ಇವುಗಳ ಸಂಖ್ಯೆ ಕಡಿಮೆ ಇರಲಿದೆ ಎಂದು ಕಂಪನಿ ಹೇಳಿದೆ.
ಡುಕಾಟಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ವಿಫುಲ್ ಚಂದ್ರ ಅವರು ಮಾಹಿತಿ ನೀಡಿ, ‘2023ರ ಮೊದಲ ಮೂರು ತ್ರೈಮಾಸಿಕದಲ್ಲಿ ಜನಪ್ರಿಯ ಮಾದರಿಗಳನ್ನು ಪರಿಚಯಿಸದಿದ್ದರೂ, ಕಂಪನಿ ಇರುವ ಮಾದರಿಯಲ್ಲಿ ಉತ್ತಮ ವಹಿವಾಟು ನಡೆಸಿದೆ. ಇದರಲ್ಲಿ ಪ್ಯಾನಿಗಲಿ ವಿ4, ಮಲ್ಟಿಸ್ಟ್ರಾಡಾ ವಿ4 ಹಾಗೂ ಡಿಯಾವೆಲ್ ವಿ4ಗಳ ಮಾರಾಟ ಉತ್ತಮವಾಗಿದೆ’ ಎಂದಿದ್ದಾರೆ.
‘ನೂತನ ವರ್ಷದಲ್ಲಿ ಎಂಟು ಹೊಸ ಡುಕಾಟಿ ಬೈಕ್‌ಗಳನ್ನು ಹಾಗೂ ಎರಡು ಹೊಸ ಡೀಲರ್‌ಶಿಪ್‌ಗಳನ್ನು ಪರಿಚಯಿಸಲಾಗುತ್ತಿದೆ. ಭಾರತದಲ್ಲಿ ಈ ವರ್ಷ ಸಾಕಷ್ಟು ಭರವಸೆಗಳನ್ನು ಹೊಂದಿದ್ದೇವೆ’ ಎಂದಿದ್ದಾರೆ.