ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಟುಂಬಿಕ ಉಳಿತಾಯವು ಮೂರು ವರ್ಷದಲ್ಲಿ ₹9 ಲಕ್ಷ ಕೋಟಿ ಇಳಿಕೆ

Published 7 ಮೇ 2024, 16:05 IST
Last Updated 7 ಮೇ 2024, 16:05 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕೌಟುಂಬಿಕ ಉಳಿತಾಯವು ಮೂರು ವರ್ಷದಲ್ಲಿ ₹9 ಲಕ್ಷ ಕೋಟಿಯಷ್ಟು ಇಳಿಕೆಯಾಗಿದೆ. 

2020–21ರಲ್ಲಿ ₹23.29 ಲಕ್ಷ ಕೋಟಿಯಷ್ಟಿದ್ದ ಕೌಟುಂಬಿಕ ನಿವ್ವಳ ಉಳಿತಾಯವು, 2022–23ರ ಹಣಕಾಸು ವರ್ಷದ ವೇಳೆಗೆ ₹14.16 ಲಕ್ಷ ಕೋಟಿಗೆ ಇಳಿಕೆಯಾಗಿದೆ. ಇದು 2021–22ರಲ್ಲಿ ₹17.12 ಲಕ್ಷ ಕೋಟಿ ಇತ್ತು ಎಂದು ಕೇಂದ್ರದ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಇತ್ತೀಚಿನ ಅಂಕಿ ಅಂಶಗಳು ತಿಳಿಸಿವೆ.

ಮ್ಯೂಚುಯಲ್‌ ಫಂಡ್‌ಗಳಲ್ಲಿನ ಹೂಡಿಕೆಯು 2020–21ರಲ್ಲಿ ₹64,084 ಕೋಟಿಯಿತ್ತು. ಇದು 2022–23ರ ವೇಳೆಗೆ ₹1.79 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಷೇರುಗಳು ಮತ್ತು ಡಿಬೆಂಚರ್‌ಗಳಲ್ಲಿನ ಕೌಟುಂಬಿಕ ಹೂಡಿಕೆಯು ₹1.07 ಲಕ್ಷ ಕೋಟಿಯಿಂದ ₹2.06 ಲಕ್ಷ ಕೋಟಿಗೆ ಹೆಚ್ಚಳವಾಗಿದೆ. ಕುಟುಂಬಗಳಿಗೆ ನೀಡುವ ಬ್ಯಾಂಕ್ ಮುಂಗಡಗಳು (ಸಾಲಗಳು) ₹6.05 ಲಕ್ಷ ಕೋಟಿಯಿಂದ ₹11.88 ಲಕ್ಷ ಕೋಟಿಗೆ ಏರಿಕೆಯಾಗಿದೆ.

ಕಾರ್ಪೊರೇಷನ್‌ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಪಡೆಯುವ ಗೃಹ ಸಾಲವು ನಾಲ್ಕು ಪಟ್ಟು ಹೆಚ್ಚಳವಾಗಿದೆ. ₹93,723 ಕೋಟಿಯಿಂದ ₹3.33 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT