ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆಕ್ಕಲಕೋಟೆ: ಚುನಾವಣೆಗೆ ಸಜ್ಜುಗೊಳ್ಳದ ಮತಗಟ್ಟೆ ಕೇಂದ್ರ

Published 20 ಏಪ್ರಿಲ್ 2024, 15:39 IST
Last Updated 20 ಏಪ್ರಿಲ್ 2024, 15:39 IST
ಅಕ್ಷರ ಗಾತ್ರ

ತೆಕ್ಕಲಕೋಟೆ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದರೂ ಪಟ್ಟಣದ ಬಹುತೇಕ ಮತಗಟ್ಟೆಗಳು ಸಿದ್ದಗೊಳ್ಳದೆ, ಕೇಂದ್ರಗಳ ಸುತ್ತಲಿನ ಪರಿಸರ ಗಬ್ಬು ನಾರುತ್ತಿದ್ದು ಸಾರ್ವಜನಿಕರು ಆಕ್ರೋಶಕ್ಕೆ ಕಾರಣವಾಗಿದೆ.

ಪಟ್ಟಣದಲ್ಲಿ 20 ವಾರ್ಡಗಳಿದ್ದು 21 ಮತಗಟ್ಟೆಗಳಿವೆ, ಇವುಗಳಲ್ಲಿ ಬಹುತೇಕ ಕೇಂದ್ರಗಳು ಕುಡಿಯುವ ನೀರು, ವಿದ್ಯುತ್, ಶೌಚಾಲಯ, ಸ್ವಚ್ಛತೆ ಸಮಸ್ಯೆಗಳಿವೆ. ಈ ವರೆಗೆ ಯಾವುದೇ ಕ್ರಮ ಕೈಗೊಳ್ಳದ ಸ್ಥಳೀಯ ಹಾಗೂ ತಾಲ್ಲೂಕು ಆಡಳಿತದ ಬಗ್ಗೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ನಾಡಕಚೇರಿಯ ಮತಗಟ್ಟೆ ಸಂಖ್ಯೆ 162 ಸಾರ್ವಜನಿಕರ ಮೂತ್ರಾಲಯವಾಗಿ ಮಾರ್ಪಟ್ಟಿದ್ದು, ಮತದಾನದ ಕೇಂದ್ರದ ಮುಂದೆಯೇ ಕೊಳೆತ ಹಣ್ಣು ಮತ್ತು ತರಕಾರಿಗಳನ್ನು ದಿನಾಲು ಚೆಲ್ಲುತ್ತಿರುವುದರಿಂದ ಗಬ್ಬೆದ್ದು ನಾರುತ್ತಿದೆ. ಅಲ್ಲದೆ 6ನೇ ವಾರ್ಡಿನ ಗುಳೆರಾಯನ ಮಠದ ಹತ್ತಿರದ ಮತಗಟ್ಟೆ ಸಂಖ್ಯೆ 165 ರಲ್ಲಿ ಶೌಚಾಲಯವು ನಿರ್ಮಾಣದ ಹಂತದಲ್ಲಿ ಇದ್ದು ಚುನಾವಣೆಯ ಹೊತ್ತಿಗೆ ಮುಗಿಯುವ ಲಕ್ಷಣ ಕಂಡು ಬರುತ್ತಿಲ್ಲ ಹಾಗೂ ಅಗತ್ಯ ಸೌಲಭ್ಯಗಳಾದ ಕುಡಿಯುವ ನೀರು, ಅಂಗವಿಕಲರಿಗಾಗಿ ರ‍್ಯಾಪ್‌, ವಿದ್ಯುತ್ ವ್ಯವಸ್ಥೆ ಇನ್ನೂ ಕಲ್ಪಿಸಿಲ್ಲ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗುರುತಿಸಲಾದ ಸಖಿ ಮತಗಟ್ಟೆ ಕೇಂದ್ರ, ಯುವ ಮತದಾರರ ಕೇಂದ್ರ, ಸಾಂಪ್ರದಾಯಿಕ ಮತಗಟ್ಟೆ, ಮಾದರಿ ಮತಗಟ್ಟೆ ಕೇಂದ್ರ ಸೇರಿದಂತೆ ಯಾವುದೇ ವಿಶೇಷ ಮತಗಟ್ಟೆ ಕೇಂದ್ರಗಳ ಸಿದ್ದತಾ ಕಾರ್ಯ ನಡೆದಂತೆ ಕಂಡು ಬರುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ತೆಕ್ಕಲಕೋಟೆ ಪಟ್ಟಣದ ನಾಡಕಚೇರಿಯ ಮತಗಟ್ಟೆ ಸಂಖ್ಯೆ 162 ಬಯಲು ಮೂತ್ರಾಲಯವಾಗಿ ಮಾರ್ಪಟ್ಟಿದ್ದು ಗಬ್ಬೆದ್ದು ನಾರುತ್ತಿದೆ
ತೆಕ್ಕಲಕೋಟೆ ಪಟ್ಟಣದ ನಾಡಕಚೇರಿಯ ಮತಗಟ್ಟೆ ಸಂಖ್ಯೆ 162 ಬಯಲು ಮೂತ್ರಾಲಯವಾಗಿ ಮಾರ್ಪಟ್ಟಿದ್ದು ಗಬ್ಬೆದ್ದು ನಾರುತ್ತಿದೆ
ತೆಕ್ಕಲಕೋಟೆ ಪಟ್ಟಣದ ಗುಳೆರಾಯನ ಮಠದ ಮತಗಟ್ಟೆ ಸಂಖ್ಯೆ 165 ರಲ್ಲಿ ಅಪೂರ್ಣಗೊಂಡಿರುವ ಶೌಚಾಲಯ ಕಾಮಗಾರಿ
ತೆಕ್ಕಲಕೋಟೆ ಪಟ್ಟಣದ ಗುಳೆರಾಯನ ಮಠದ ಮತಗಟ್ಟೆ ಸಂಖ್ಯೆ 165 ರಲ್ಲಿ ಅಪೂರ್ಣಗೊಂಡಿರುವ ಶೌಚಾಲಯ ಕಾಮಗಾರಿ
ಪಂಚಾಯಿತಿ ವ್ಯಾಪ್ತಿಯಲ್ಲಿ 21 ಮತಗಟ್ಟೆಗಳನ್ನು ಗುರುತಿಸಲಾಗಿದ್ದು ಏಪ್ರಿಲ್ 22ರ ನಂತರ ವಿಶೇಷ ಹಾಗೂ ಇತರೆ ಮತಗಟ್ಟೆಗಳನ್ನು ಸಂಪೂರ್ಣವಾಗಿ ಸಜ್ಜು ಗೊಳಿಸಲಾಗುವುದು
ಶೋಭಾ ಪ್ರಭಾರ ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT