ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಡಿಕೇರಿ: ಗೆಲುವಿನ ನಾಗಾಲೋಟ ಮುಂದುವರಿಸಿದ ಎಲೈಟ್ ಕ್ರಿಕೆಟ್ ಕ್ಲಬ್ ಸ್ಕ್ವಾಡ್- 2

ಗೌಡ ಪ್ರೀಮಿಯರ್ ಲೀಗ್ ಕ್ರಿಕೆಟ್; ಸತತ 4ನೇ ಅರ್ಧ ಶತಕ ಗಳಿಸಿದ ರಾಹುಲ್
Published 24 ಏಪ್ರಿಲ್ 2024, 4:22 IST
Last Updated 24 ಏಪ್ರಿಲ್ 2024, 4:22 IST
ಅಕ್ಷರ ಗಾತ್ರ

ಮಡಿಕೇರಿ: ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಗೌಡ ಲೆದರ್‌ಬಾಲ್ ಪ್ರೀಮಿಯರ್ ಲೀಗ್‌ನಲ್ಲಿ ಮಂಗಳವಾರ ಎಲೈಟ್ ಕ್ರಿಕೆಟ್ ಕ್ಲಬ್ ಸ್ಕ್ವಾಡ್- 2 ತನ್ನ ಗೆಲುವಿನ ನಾಗಾಲೋಟ ಮುಂದುವರಿಸಿದರೆ, ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ಮತ್ತು ಕಾಫಿ ಕ್ರಿಕೆಟರ್ಸ್ ತಂಡಗಳು ಗೆಲುವಿನ ನಗೆ ಬೀರಿದವು. ರಾಹುಲ್ ತಮ್ಮ ಸತತ 4ನೇ  ಅರ್ಧ ಶತಕ‌ ಸಿಡಿಸಿ ಮಿಂಚಿದರು.

ದಿ ಮರಗೋಡಿಯನ್ಸ್ ತಂಡದ ವಿರುದ್ಧ ಎಲೈಟ್ ಕ್ರಿಕೆಟ್ ಕ್ಲಬ್ ಸ್ಕ್ವಾಡ್-2 ತಂಡವು 35 ರನ್‌ಗಳ ಭರ್ಜರಿ ಜಯ ಗಳಿಸಿತು. ಇದರೊಂದಿಗೆ ಆಡಿದ ಎಲ್ಲ 4 ಪಂದ್ಯಗಳನ್ನೂ ಗೆದ್ದ ಎಲೈಟ್ ತಂಡ ಬಿ-ಪೂಲ್‌ನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಎಲೈಟ್ ತಂಡ 10 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 126 ರನ್ ಕಲೆ ಹಾಕಿತು. ತಂಡದ ಪರ ರಾಹುಲ್ ಕೇವಲ 27 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್‌ಗಳನ್ನು ಒಳಗೊಂಡ ಅಮೋಘ 68 ರನ್ ಗಳಿಸಿದರು. ಮರಗೋಡಿಯನ್ಸ್ ಪರ ಶರ್ವಿನ್ 2 ವಿಕೆಟ್ ಪಡೆದರು. ಗುರಿ ಬೆನ್ನತ್ತಿದ ಮರಗೋಡಿಯನ್ಸ್ ತಂಡ 10 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 91 ರನ್‌ನ್ನಷ್ಟೇ ಗಳಿಸಿತು‌. ಎಲೈಟ್ ತಂಡದ ಪರ ಹುದೇರಿ ತಮ್ಮಣ್ಣ 3 ವಿಕೆಟ್, ಹೃತ್‌ಪೂರ್ವಕ್ ಕೂರನ 2 ವಿಕೆಟ್ ಪಡೆದರು‌‌.

ಇದಕ್ಕೂ ಮುನ್ನ ನಡೆದ ಪಂದ್ಯದಲ್ಲಿ ಪ್ಲಾಂಟರ್ಸ್ ಕ್ಲಬ್ ಬಿಳಿಗೇರಿ ತಂಡವು ಕಾಫಿ ಕ್ರಿಕೆಟರ್ಸ್ ವಿರುದ್ಧ 6 ವಿಕೆಟ್‌ಗಳ ಜಯ ಗಳಿಸಿತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಕಾಫಿ ಕ್ರಿಕೆಟರ್ಸ್ ತಂಡ ನಿಗದಿತ 10 ಓವರ್‌ಗಳಿಗೆ 7 ವಿಕೆಟ್ ನಷ್ಟಕ್ಕೆ 68 ರನ್ ಗಳಿಸಿತು. ದೀಪಕ್ 16 ಎಸೆತಗಳಿಗೆ 18 ರನ್ ಗಳಿಸಿದರು. ಪ್ಲಾಂಟರ್ಸ್ ಕ್ಲಬ್ ಪರ ಕೊಂಬಾರನ ರಂಜು ಮತ್ತು ತುಷಾರ್ ಮೂವನ ತಲಾ 2 ವಿಕೆಟ್‌ಗಳನ್ನು ಪಡೆದರು.

ಗುರಿ ಬೆನ್ನಟ್ಟಿದ ಪ್ಲಾಂಟರ್ಸ್ ಕ್ಲಬ್ 8.2 ಓವರಿನಲ್ಲಿ 69 ರನ್ ಗಳಿಸುವ ಮೂಲಕ ಜಯ ಗಳಿಸಿದರು. ರೋಹನ್ 26 ಎಸೆತಗಳಿಗೆ 43 ರನ್ ಪಡೆದರು.

ದಿನದ ಕೊನೆಯಲ್ಲಿ ನಡೆದ ಪಂದ್ಯದಲ್ಲಿ ಕಾಫಿ ಕ್ರಿಕೆಟರ್ಸ್ ತಂಡವು ಕೂರ್ಗ್ ಹಾಕ್ಸ್ ವಿರುದ್ಧ ರೋಚಕ 4 ರನ್‌ಗಳ ಜಯ ಗಳಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಕಾಫಿ ಕ್ರಿಕೆಟರ್ಸ್ ನಿಗದಿತ 10 ಓವರ್‌ಗಳಿಗೆ 4 ವಿಕೆಟ್ ನಷ್ಟಕ್ಕೆ 76 ರನ್ ಗಳಿಸಿತು. ಪವನ್ 29 ಎಸೆತಕ್ಕೆ 35 ರನ್ ಗಳಿಸಿದರು. ಕೂರ್ಗ್ ಹಾಕ್ಸ್ ಪರ ಹರ್ಷ ಕೊಂಬಾರನ 2 ವಿಕೆಟ್ ಪಡೆದರು.

ಗುರಿ ಬೆನ್ನಟ್ಟಿದ ಕೂರ್ಗ್ ಹಾಕ್ಸ್ 72 ರನ್ ಗಳಿಸಿ 4 ರನ್‌ಗಳಿಂದ ಸೋಲೊಪ್ಪಿಕೊಂಡಿತು. ಕೀರ್ತನ್ ಕಾಳೆಮನೆ 24 ಎಸೆತಕ್ಕೆ 34 ರನ್ ಪಡೆದರು. ಕಾಫಿ ಕ್ರಿಕೆಟರ್ಸ್ ಪರ ದೀಪಕ್, ತಳೂರು ವಿಕ್ಕಿ, ಪವನ್ ತಲಾ 1 ವಿಕೆಟ್ ಪಡೆದರು. ಕೂರ್ಗ್ ಹಾಕ್ಸ್ ತಂಡದಲ್ಲಿ ಮಹಿಳಾ ಆಟಗಾರ್ತಿ ಕುಕ್ಕೇರ ಬೆಳಕು ಬೊಳ್ಳಮ್ಮ ಆಡಿ ಗಮನ ಸೆಳೆದರು.

Highlights - ಕಾಫಿ ಕ್ರಿಕೆಟರ್ಸ್ ತಂಡಕ್ಕೆ 4 ರನ್‌ಗಳ ರೋಚಕ ಜಯ ಬಿ-ಪೂಲ್‌ನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದ ಎಲೈಟ್ ತಂಡ ಜಿದ್ದಾಜಿದ್ದಿನ ಹಣಾಹಣಿಗೆ ಸಾಕ್ಷಿಯಾದ ಮೈದಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT