ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಜಾನುವಾರು ಜಾತ್ರೆಗಿಲ್ಲ ಅವಕಾಶ

ಚರ್ಮಗಂಟು ರೋಗ; ಮುಂಜಾಗ್ರತಾ ಕ್ರಮ
Last Updated 4 ಜನವರಿ 2023, 5:38 IST
ಅಕ್ಷರ ಗಾತ್ರ

ಮೈಸೂರು: ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ‘ಚರ್ಮಗಂಟು ರೋಗ’ದಿಂದ ಈ ಬಾರಿಯೂ ಸಂಕ್ರಾಂತಿ ಹಬ್ಬದಲ್ಲಿ ಜಾನುವಾರು ಹಬ್ಬಕ್ಕೆ ನಿರ್ಬಂಧ ವಿಧಿಸಲಾಗಿದೆ. ಹೀಗಾಗಿ ಜಿಲ್ಲೆಯ ಜಾತ್ರೆಗಳು ಧಾರ್ಮಿಕ ಆಚರಣೆಗಷ್ಟೇ ಸೀಮಿತವಾಗಲಿದೆ.

ಜ.1ರಿಂದ 15ರವರೆಗೆ ಸಾಲಿಗ್ರಾಮ ತಾಲ್ಲೂಕಿನ ಚುಂಚನಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಜಾನುವಾರು ಜಾತ್ರೆ ನಡೆಯುತ್ತಿತ್ತು. ಹಿಂದೂ ಮುಸಲ್ಮಾನರ ಭಾವೈಕ್ಯತೆಯ ತಾಣ ವಾದ ರತ್ನಾಪುರಿಯಲ್ಲಿ ಫೆಬ್ರುವರಿ ಯಲ್ಲಿ ಜಾತ್ರೆ ನಡೆಯುತ್ತಿತ್ತು. ಆದರೆ, ಚುಂಚನಕಟ್ಟೆಯಲ್ಲಿ ರೋಗದ ಭಯದಿಂದ ಇದುವರೆಗೂ ರೈತರು ಜಾತ್ರೆ ಯತ್ತ ಜಾನುವಾರುಗಳನ್ನು ಕರೆತಂದಿಲ್ಲ.

‘ಜಿಲ್ಲೆಯಲ್ಲಿ ಚರ್ಮಗಂಟು ರೋಗವು ನಿಯಂತ್ರಣದಲ್ಲಿದ್ದರೂ ಜಾನುವಾರು ಜಾತ್ರೆಗೆ ಅವಕಾಶ ನೀಡು ವುದಿಲ್ಲ’ ಎಂದು ಮೈಸೂರು ಜಿಲ್ಲಾ ಪಶು ಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ.ಬಿ.ಎನ್‌. ಷಡಕ್ಷರಮೂರ್ತಿ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

‘ಸಂಕ್ರಾಂತಿ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಜಾನುವಾರು ಜಾತ್ರೆಗಳು ನಡೆಯುತ್ತವೆ. ಒಮ್ಮೆ ಅವಕಾಶ ನೀಡಿದರೆ, ಮತ್ತೆ ರೋಗ ಉಲ್ಬಣವಾಗುವ ಸಾಧ್ಯತೆಯಿದೆ’ ಎಂದು ಪ್ರತಿಪಾದಿಸಿದರು. ₹9.75 ಲಕ್ಷ ಪರಿಹಾರ: ‘ಚರ್ಮಗಂಟು ರೋಗ ನಿಯಂತ್ರಿಸಲು ಜಾನುವಾರುಗಳಿಗೆ ಕ್ಷಿಪ್ರಗತಿಯಲ್ಲಿ ಲಸಿಕೆ ಹಾಕಲಾಗುತ್ತಿದೆ. ಹೊಸ ಪ್ರಕರಣಗಳು ದಾಖಲಾಗುತ್ತಿದ್ದು ಜಾತ್ರೆಗೆ ಅವಕಾಶ ನೀಡಿದರೆ ಮತ್ತಷ್ಟು ಹರಡುವ ಅಪಾಯಗಳಿವೆ. ಕಾಯಿಲೆಯಿಂದ ಜಿಲ್ಲೆಯಲ್ಲಿ ಇದುವರೆಗೂ 210 ಜಾನುವಾರುಗಳು ಮೃತಪಟ್ಟಿದ್ದು, ₹9.75 ಲಕ್ಷ ಪರಿಹಾರ ನೀಡಲಾಗಿದೆ’ ಎಂದು ಹೇಳಿದರು.

ಸಂತೆಗಿಲ್ಲ ಅವಕಾಶ: ‘ಕಾಯಿಲೆ ಕಂಡುಬಂದ ತಕ್ಷಣ ಇಡೀ ಜಿಲ್ಲೆಯಲ್ಲಿ ‘ಜಾನುವಾರು ಸಂತೆ’ಯನ್ನು ನಿಷೇಧಿಸ ಲಾಗಿದೆ. ನಂಜನಗೂಡು, ಎಚ್‌.ಡಿ.ಕೋಟೆ, ತಿ.ನರಸೀಪುರ, ಕೆ.ಆರ್‌.ನಗರದಲ್ಲಿ ಪ್ರತಿವಾರ ನಡೆಯುತ್ತಿದ್ದ ಜಾನುವಾರ ಸಂತೆಯನ್ನು ಈಗಾಗಲೇ ನಿಷೇಧಿಸಲಾಗಿದೆ. ರೋಗ ನಿಯಂತ್ರಣಕ್ಕೆ ಬರುವವರೆಗೂ ನಿರ್ಬಂಧ ಮುಂದು ವರಿಯಲಿದೆ’ ಎಂದು ಸ್ಪಷ್ಟಪಡಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT