ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಮೊಗ್ಗ | ಅರಮನೆ ಮಾದರಿ ಮತಗಟ್ಟೆ- ರಾಜ ಮನೆತನದವರ ಪೋಷಾಕಿನಲ್ಲಿ ಸಿಬ್ಬಂದಿ

ಮತ ಹಾಕಿದವರಿಗೆ ಕಿರೀಟ ಧಾರಣೆ
Published 7 ಮೇ 2024, 14:15 IST
Last Updated 7 ಮೇ 2024, 14:15 IST
ಅಕ್ಷರ ಗಾತ್ರ

ಶಿವಮೊಗ್ಗ: ಇಲ್ಲಿನ ಕುವೆಂಪು ರಸ್ತೆಯ ಜಿಲ್ಲಾ ಪಂಚಾಯಿತಿ ಆಡಳಿತ ಕಚೇರಿಯಲ್ಲಿನ ಮತಗಟ್ಟೆ (ಸಂಖ್ಯೆ 283)ಯನ್ನು ಅರಮನೆ ಮಾದರಿಯಲ್ಲಿ ವಿನ್ಯಾಸಗೊಳಿಸಿರುವುದು ಮತದಾರರ ಮತದಾರರ ಗಮನ ಸೆಳೆಯಿತು.

ಸ್ವೀಪ್ ಸಮಿತಿಯು ರೂಪಿಸಿದ್ದ ವಿಶಿಷ್ಟ ವಿನ್ಯಾಸದಡಿ ಮತಗಟ್ಟೆ ಅಣಿಗೊಂಡಿದ್ದು, ಮತಗಟ್ಟೆ ಸಿಬ್ಬಂದಿ ಪೌರಾಣಿಕ ಸಿನೆಮಾದಲ್ಲಿನ ರಾಜ ಮನೆತನದವರಂತೆ ಪೋಷಾಕು ಧರಿಸಿದ್ದರು. ಇಡೀ ದಿನ ಅವರು ಅದೇ ಪೋಷಾಕಿನಲ್ಲಿದ್ದುಕೊಂಡೇ ಕರ್ತವ್ಯ ನಿರ್ವಹಿಸಿದರು.

ಸ್ವತಃ ರಾಣಿ ವೇಷಧಾರಿ ಆಗಿದ್ದ ಬಿಎಲ್‌ಒ ಜಯಲಕ್ಷ್ಮೀ ಮತಗಟ್ಟೆಗೆ ಬಂದ ಮತದಾರರನ್ನು ಸ್ವಾಗತಿಸಿದರು. ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯ್ತಿ ಸಿಇಒ ಸ್ನೇಹಲ್ ಲೋಖಂಡೆ, ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್ ಮತಗಟ್ಟೆಗೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.

ಮತದಾನ ಮಾಡಿದವರಿಗೆ ಸಿಂಹಾಸನದಲ್ಲಿ ಕೂರಿಸಿ, ಕಿರೀಟ ಹಾಕಿ ಫೋಟೊ ಕ್ಲಿಕ್ಕಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿತ್ತು. ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರನೇ ಮಹಾರಾಜ’ ಎಂಬ ಆಶಯದಡಿ ಈ ವ್ಯವಸ್ಥೆ ಮಾಡಿದ್ದೇವೆ’ ಎಂದು ಬಿಎಲ್‌ಒ ಜಯಲಕ್ಷ್ಮೀ ಮಾಹಿತಿ ನೀಡಿದರು.

ಶಿವಮೊಗ್ಗದ ಜಿಲ್ಲಾ ಪಂಚಾಯ್ತಿ ಕಚೇರಿ ಆವರಣದಲ್ಲಿನ ಮತಗಟ್ಟೆಯಲ್ಲಿ ಮಂಗಳವಾರ ಚುನಾವಣಾ ಕಾರ್ಯಕ್ಕೆ ನಿಯುಕ್ತರಾಗಿದ್ದ ಸಿಬ್ಬಂದಿ ರಾಜ ಮನೆತನದವರಂತೆ ಪೋಷಾಕು ಧರಿಸಿ ಕೆಲಸ ಮಾಡಿದರು
ಶಿವಮೊಗ್ಗದ ಜಿಲ್ಲಾ ಪಂಚಾಯ್ತಿ ಕಚೇರಿ ಆವರಣದಲ್ಲಿನ ಮತಗಟ್ಟೆಯಲ್ಲಿ ಮಂಗಳವಾರ ಚುನಾವಣಾ ಕಾರ್ಯಕ್ಕೆ ನಿಯುಕ್ತರಾಗಿದ್ದ ಸಿಬ್ಬಂದಿ ರಾಜ ಮನೆತನದವರಂತೆ ಪೋಷಾಕು ಧರಿಸಿ ಕೆಲಸ ಮಾಡಿದರು
ಶಿವಮೊಗ್ಗದ ಜಿಲ್ಲಾ ಪಂಚಾಯ್ತಿ ಕಚೇರಿ ಆವರಣದಲ್ಲಿ ಸಿದ್ಧಗೊಂಡಿದ್ದ ಅರಮನೆ ಮಾದರಿಯ ಮತಗಟ್ಟೆಯಲ್ಲಿ ಮಂಗಳವಾರ ಮತದಾನ ಮಾಡಿ ಬಂದ ಸಾರ್ವಜನಿಕರು ಸಂಭ್ರಮಿಸಿದ್ದು ಹೀಗೆ.
ಶಿವಮೊಗ್ಗದ ಜಿಲ್ಲಾ ಪಂಚಾಯ್ತಿ ಕಚೇರಿ ಆವರಣದಲ್ಲಿ ಸಿದ್ಧಗೊಂಡಿದ್ದ ಅರಮನೆ ಮಾದರಿಯ ಮತಗಟ್ಟೆಯಲ್ಲಿ ಮಂಗಳವಾರ ಮತದಾನ ಮಾಡಿ ಬಂದ ಸಾರ್ವಜನಿಕರು ಸಂಭ್ರಮಿಸಿದ್ದು ಹೀಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT