ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಧಿಕಾ ಖೇರಾ ಬಿಜೆಪಿಗೆ ಸೇರ್ಪಡೆ

Published 7 ಮೇ 2024, 16:06 IST
Last Updated 7 ಮೇ 2024, 16:06 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಎಐಸಿಸಿ ಮಾಜಿ ವಕ್ತಾರೆ ರಾಧಿಕಾ ಖೇರಾ ಹಾಗೂ ಕಿರುತೆರೆ ನಟ ಶೇಖರ್ ಸುಮನ್‌ ಅವರು ಮಂಗಳವಾರ ಬಿಜೆಪಿಗೆ ಸೇರ್ಪಡೆಗೊಂಡರು.

ರಾಧಿಕಾ ಅವರು ಈಚೆಗೆ ಕಾಂಗ್ರೆಸ್‌ ತೊರೆದಿದ್ದರು. ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಿದ ವಿಚಾರದಲ್ಲಿ ತಮ್ಮನ್ನು ಟೀಕಿಸಲಾಗಿದೆ ಎಂದು ರಾಧಿಕಾ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸಿದ್ದ ರಾಜೀನಾಮೆ ಪತ್ರದಲ್ಲಿ ಆರೋಪಿಸಿದ್ದರು.

ರಾಧಿಕಾ ಮತ್ತು ಶೇಖರ್‌ ಸುಮನ್‌ ಅವರನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್‌ ತಾವ್ಡೆ ಪಕ್ಷಕ್ಕೆ ಬರಮಾಡಿಕೊಂಡರು.

ಕಿರುತೆರೆಯ ಜೊತೆಗೆ ಬಾಲಿವುಡ್‌ ಸಿನಿಮಾಗಳಲ್ಲೂ ನಟಿಸಿರುವ ಸುಮನ್‌ ಅವರು, 15 ವರ್ಷಗಳ ಬಳಿಕ ರಾಜಕೀಯಕ್ಕೆ ಮರಳಿದ್ದಾರೆ. 2009ರ ಚುನಾವಣೆಯಲ್ಲಿ ಬಿಹಾರದ ಪಟ್ನಾ ಸಾಹಿಬ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಸೋತಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಶತ್ರುಘ್ನ ಸಿನ್ಹಾ ಅವರು ಗೆದ್ದಿದ್ದರು.

‘ಕಾಂಗ್ರೆಸ್‌ ಪಕ್ಷವು ಸನಾತನ ವಿರೋಧಿ, ಹಿಂದೂ ವಿರೋಧಿ ಮತ್ತು ರಾಮನ ವಿರೋಧಿ’ ಎಂದು ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ರಾಧಿಕಾ ಅವರು ಆರೋಪಿಸಿದರು.

‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸುಭದ್ರ ಸರ್ಕಾರದಿಂದಾಗಿ ನಾನು ಇಲ್ಲಿಗೆ ತಲುಪಿದೆ. ಛತ್ತೀಸಗಢದ ಬಿಜೆಪಿ ಸರ್ಕಾರ ನನಗೆ ರಕ್ಷಣೆ ನೀಡದಿದ್ದರೆ ಇಲ್ಲಿಗೆ ಬರಲು ಸಾಧ್ಯವಾಗುತ್ತಿರಲಿಲ್ಲ’ ಎಂದರು.

‘ಮಹಾತ್ಮ ಗಾಂಧಿ ಅವರ ಕಾಂಗ್ರೆಸ್‌ ಈಗ ಉಳಿದಿಲ್ಲ. ನಾನು ಸನಾತನಿ, ಹಿಂದೂ ಮತ್ತು ರಾಮನ ಭಕ್ತೆಯಾಗಿದ್ದಕ್ಕೆ ಅಲ್ಲಿ ಶಿಕ್ಷೆಗೊಳಗಾಗಿದ್ದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT