ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಯಾರಿಕೆಯಲ್ಲಿ ದೋಷ ಪತ್ತೆ: ಅಮೆರಿಕದಿಂದ ಔಷಧ ಹಿಂಪಡೆದ ಸಿಪ್ಲಾ, ಗ್ಲೆನ್‌ಮಾರ್ಕ್‌

Published 5 ಮೇ 2024, 15:53 IST
Last Updated 5 ಮೇ 2024, 15:53 IST
ಅಕ್ಷರ ಗಾತ್ರ

ನವದೆಹಲಿ: ಔಷಧ ತಯಾರಿಕಾ ಸಂಸ್ಥೆಗಳಾದ ಸಿಪ್ಲಾ ಮತ್ತು ಗ್ಲೆನ್‌ಮಾರ್ಕ್‌ ತಮ್ಮ ಉತ್ಪನ್ನಗಳನ್ನು ಅಮೆರಿಕದ ಮಾರುಕಟ್ಟೆಯಿಂದ ಹಿಂಪಡೆದಿವೆ. ಉತ್ಪನ್ನದ ತಯಾರಿಕೆಯಲ್ಲಿ ದೋಷ ಪತ್ತೆಯಾದ ಕಾರಣ ಈ ಕ್ರಮ ಕೈಗೊಂಡಿವೆ ಎಂದು ಅಮೆರಿಕದ ಆರೋಗ್ಯ ನಿಯಂತ್ರಕರು ತಿಳಿಸಿದ್ದಾರೆ.

ಅಮೆರಿಕದ ಆಹಾರ ಮತ್ತು ಔಷಧ ಮಂಡಳಿಯ (ಯುಎಸ್‌ಎಫ್‌ಡಿಎ) ವರದಿ ಪ್ರಕಾರ,  ಸಿಪ್ಲಾದ ಅಧೀನ ಸಂಸ್ಥೆಯು ಇಪ್ರಾಟ್ರೊಪಿಯಂ ಬ್ರೊಮೇಡ್‌ ಮತ್ತು ಅಬ್ಲುಟೆರೋಲ್ ಸಲ್ಫೇಟ್‌ ಇನ್ಹೇಲೇಷನ್ ಸಲ್ಯೂಷನ್‌ನ 59,244 ಪ್ಯಾಕೆಟ್‌ಗಳನ್ನು ವಾಪಸ್‌ ಪಡೆದಿದೆ.

ಕಂಪನಿಯ ಇಂದೋರ್‌ ಎಸ್‌ಇಝಡ್‌ ಘಟಕದಲ್ಲಿ ಈ ಪ್ಯಾಕೆಟ್‌ಗಳನ್ನು ತಯಾರಿಸಲಾಗಿತ್ತು. ಈ ಔಷಧವನ್ನು ಆಸ್ತಮಾ ಸೇರಿದಂತೆ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳ ಚಿಕಿತ್ಸೆಗೆ ಬಳಸಲಾಗುತ್ತದೆ.

ರೆಪ್ಸೂಲ್‌ನಲ್ಲಿ (ಔಷಧದ ಡಬ್ಬಿ)  ಕಡಿಮೆ ‍ಪ್ರಮಾಣದ ಔಷಧ ತುಂಬಲಾಗಿದೆ ಎಂಬ ದೂರುಗಳು ಕೇಳಿಬಂದ ಕಾರಣ ಔಷಧಗಳನ್ನು ವಾಪಸ್‌ ಕಳುಹಿಸಲಾಗಿದೆ ಎಂದು ಯುಎಸ್‌ಎಫ್‌ಡಿಎ ತಿಳಿಸಿದೆ.

ಗ್ಲೆನ್‌ಮಾರ್ಕ್‌ ಸಂಸ್ಥೆಯೂ ಅಧಿಕ ರಕ್ತದೊತ್ತಡ ಚಿಕಿತ್ಸೆಗೆ ಬಳಸುವ 3,264 ಬಾಟಲಿ ಔಷಧವನ್ನು ವಾಪಸ್‌ ಪಡೆದಿದೆ ಎಂದು ತಿಳಿಸಿದೆ. h 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT