ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿನಿ ತುಪ್ಪ ಪೂರೈಸಿರುವುದು 20ವರ್ಷದಲ್ಲಿ ಒಂದೇ ಬಾರಿ!KMF ವಿರುದ್ಧ TTD ಹೇಳಿಕೆ

ಸರಕುಗಳನ್ನು ಸಮಯಕ್ಕೆ ತಲುಪಿಸಲು ಕೆಎಂಎಫ್ ವಿಫಲವಾಗಿದೆ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮಾ ರೆಡ್ಡಿ ಹೇಳಿದ್ದಾರೆ
Published 2 ಆಗಸ್ಟ್ 2023, 13:25 IST
Last Updated 2 ಆಗಸ್ಟ್ 2023, 13:25 IST
ಅಕ್ಷರ ಗಾತ್ರ

ತಿರುಪತಿ: ‘ಎಲ್‌1 ಬಿಡ್‌ದಾರರಾಗಿ ಎಂದಿಗೂ ಅರ್ಹತೆ ಪಡೆಯದ ಕೆಎಂಎಫ್‌ ಕಳೆದ 20 ವರ್ಷಗಳಲ್ಲಿ ಒಂದು ಬಾರಿ ಮಾತ್ರ ತುಪ್ಪವನ್ನು ಪೂರೈಸಿದೆ. ಜತೆಗೆ, ಸರಕುಗಳನ್ನು ಸಮಯಕ್ಕೆ ತಲುಪಿಸಲು ವಿಫಲವಾಗಿದೆ’ ಎಂದು ಶ್ರೀ ವೆಂಕಟೇಶ್ವರ ದೇವಸ್ಥಾನದ ಆಡಳಿತ ಮಂಡಳಿ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮಾ ರೆಡ್ಡಿ ಬುಧವಾರ ಹೇಳಿದ್ದಾರೆ. 

ತಿರುಪತಿ ದೇವಾಲಯದ ಸಂಸ್ಥೆಯು ಕಡಿಮೆ ಗುಣಮಟ್ಟದ ತುಪ್ಪ ಖರೀದಿಸುತ್ತಿದೆ ಎಂದು ನಂದಿನಿ ಬ್ರ್ಯಾಂಡ್ ಹಾಲು ಉತ್ಪಾದಕ  ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಅಧ್ಯಕ್ಷ ಭೀಮಾ ನಾಯ್ಕ್ ಅವರು ಮಾಡಿದ್ದ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ. ಧರ್ಮಾ ರೆಡ್ಡಿ ಅವರು, ಕಟ್ಟುನಿಟ್ಟಿನ ಇ-ಟೆಂಡರ್ ಪ್ರಕ್ರಿಯೆಯ ಮೂಲಕ, ಗುಣಮಟ್ಟದಲ್ಲಿ ರಾಜಿಯಾಗದ, ಸಿಎಫ್‌ಟಿಆರ್‌ಐನಂತಹ ಪ್ರಯೋಗಾಲಯಗಳ ಅವಳಿ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಮತ್ತು ಕಡಿಮೆ ವೆಚ್ಚದ (ಎಲ್ 1 ಬಿಡ್ಡರ್) ಪೂರೈಕೆದಾರರಿಂದ ಮಾತ್ರ ದೇವಾಲಯವು ಹಸುವಿನ ತುಪ್ಪವನ್ನು ಖರೀದಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.  

ಗುಣಮಟ್ಟವಿಲ್ಲದ 42 ಟ್ರಕ್‌ ಹಸುವಿನ ತುಪ್ಪ ತಿರಸ್ಕೃತ

ಕಳೆದ ಒಂದು ವರ್ಷದಲ್ಲಿ ಪರಿಶುದ್ಧತೆ– ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿರದ 42 ಟ್ರಕ್ ಲೋಡ್ ಹಸುವಿನ ತುಪ್ಪವನ್ನು ತಿರಸ್ಕರಿಸಲಾಗಿದೆ ಎಂದು ಟಿಟಿಡಿ ಪ್ರಧಾನ ವ್ಯವಸ್ಥಾಪಕ (ಖರೀದಿ ವಿಭಾಗ) ಪಿ.ಮುರಳಿಕೃಷ್ಣ ತಿಳಿಸಿದ್ದಾರೆ.

‘2022ರ ಜುಲೈ 22ರಿಂದ 2023ರ ಜೂನ್‌ 30ರ ನಡುವೆ, ತಲಾ 18 ಟನ್ನಿನ 42 ಟ್ರಕ್‌ ಲೋಡ್‌ ಹಸುವಿನ ತುಪ್ಪವನ್ನು ಗುಣಮಟ್ಟದ ನಮ್ಮ ಮಾನದಂಡಗಳಿಗೆ ಅನುಗುಣವಾಗಿಲ್ಲದ ಕಾರಣಕ್ಕೆ ತಿರಸ್ಕರಿಸಲಾಗಿದೆ’ ಎಂದು ಅವರು ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT