ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಸಂಸ್ಥೆ ಭದ್ರತಾ ಮಂಡಳಿ ಸುಧಾರಣೆ: ಭಾರತದ ನಿಲುವಿಗೆ ಅಮೆರಿಕ ಸಹಮತ

Published 19 ಏಪ್ರಿಲ್ 2024, 15:47 IST
Last Updated 19 ಏಪ್ರಿಲ್ 2024, 15:47 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ವಿಶ್ವಸಂಸ್ಥೆ ಭದ್ರತಾ ಮಂಡಳಿ (ಯುಎನ್ಎಸ್‌ಸಿ) ಚಿಂತನೆ 70 ವರ್ಷ ಹಳೆಯ
ದಾಗಿದ್ದು, ಸದ್ಯದ ವಸ್ತುಸ್ಥಿತಿ ಬಿಂಬಿಸುವುದಿಲ್ಲ ಎಂಬ ಭಾರತದ ನಿಲುವನ್ನು ಅಮೆರಿಕ ಬೆಂಬಲಿಸಿದೆ.

‘ಜಿ–4 ಸದಸ್ಯ ರಾಷ್ಟ್ರಗಳು ವಿಶ್ವಸಂಸ್ಥೆ ಭದ್ರತಾ ಮಂಡಳಿ ಶಾಶ್ವತ ಸದಸ್ಯತ್ವ ಪಡೆಯಬೇಕು ಎಂಬ ನಿಲುವಿಗೆ ಜೋ ಬೈಡನ್ ಆಡಳಿತ ಬೆಂಬಲಿಸಲಿದೆ’ ಎಂದು ಅಮೆರಿಕದ ಹಿರಿಯ ರಾಯಭಾರಿ ಹೇಳಿದ್ದಾರೆ.

ಸದ್ಯ ಟೋಕಿಯೊ ಪ್ರವಾಸದಲ್ಲಿರುವ, ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ ಲಿಂಡಾ ಥಾಮಸ್‌ ಗ್ರೀನ್‌ಫೀಲ್ಡ್‌ ಅವರು, ’ಭದ್ರತಾ ಮಂಡಳಿ ಸುಧಾರಣೆಗೆ ಸದ್ಯ ಚೀನಾ, ರಷ್ಯಾ ವಿರೋಧಿಸುತ್ತಿವೆ’ ಎಂದರು.

‘ಈ ಹಿಂದೆ ಅಮೆರಿಕ, ಚೀನಾ, ರಷ್ಯಾ ಭದ್ರತಾ ಮಂಡಳಿಯಲ್ಲಿಯಾವುದೇ ಬದಲಾವಣೆ ಬೇಡ ಎಂಬ ನಿಲುವು ತಳೆದಿದ್ದವು. ಇದರಿಂದ,  2021ರಲ್ಲಿ ಅಮೆರಿಕ ಹಿಂದೆ ಸರಿಯಿತು’ ಎಂದು ಲಿಂಡಾ ಹೇಳಿದರು.

ಜಿ4 ಶೃಂಗದ ಸದಸ್ಯ ರಾಷ್ಟ್ರಗಳಾದ ಜಪಾನ್‌, ಜರ್ಮನಿ, ಭಾರತ, ಬ್ರೆಜಿಲ್‌ ಜೊತೆಗಿನ ಚರ್ಚೆಯಲ್ಲೂ ಇವು ಯುಎನ್ಎಸ್‌ಸಿ ಶಾಶ್ವತ ಸದಸ್ಯರಾಗಬೇಕು ಎಂದು ಅಮೆರಿಕ ನಿಲುವು ಸ್ಪಷ್ಟಪಡಿಸಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT