ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟೀಲು: ದಾಂಪತ್ಯ ಜೀವನಕ್ಕೆ ಕಾಲಿರಿಸಿದ 74 ಜೋಡಿ

Published 28 ಏಪ್ರಿಲ್ 2024, 16:00 IST
Last Updated 28 ಏಪ್ರಿಲ್ 2024, 16:00 IST
ಅಕ್ಷರ ಗಾತ್ರ

ಮೂಲ್ಕಿ: ಜಿಲ್ಲೆಯ ಧಾರ್ಮಿಕ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸರಳ ವಿವಾಹದ ಹರಕೆಯೊಂದಿಗೆ 74 ಜೋಡಿ ವಧು ವರರು ಹಸೆ ಮಣೆ ಏರಿ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಕೋವಿಡ್‌ ಬಳಿಕ ಇಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಇದೇ ಮೊದಲಬಾರಿ ಇಷ್ಟೊಂದು ಸಂಖ್ಯೆಯಲ್ಲಿ ಮದುವೆಗಳಾಗಿವೆ ಎಂದು ಕಟೀಲು ದೇವಸ್ಥಾನದ ಮೂಲಗಳು ತಿಳಿಸಿವೆ.

ನೂತನ ವಧು ವರರ ಸಂಬಂಧಿಕರು ಪರಸ್ಪರ ದಿಬ್ಬಣವನ್ನು ಮುಖಾಮುಖಿಯಾಗಲು ದೇವಳದ ಹೊರಭಾಗದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ದೇವಳದ ಮುಂಭಾಗದ ಅಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಅರ್ಚಕರು ಮಂತ್ರ ಪಠಿಸಿದಂತೆ ವರ ವಧುವಿಗಿಗೆ ಮಾಂಗಲ್ಯ ಧಾರಣೆ ಮಾಡಿದರು.

ವಧು–ವರರ ಜತೆಗೆ ಅವರ ಸಂಬಂಧಿಕರೂ ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರಿಂದ ಜನ ದಟ್ಟಣೆ ಹೆಚ್ಚಾಗಿತ್ತು. ದೇವಳದ ವತಿಯಿಂದ ಸರದಿ ಸಾಲಿನ ವ್ಯವಸ್ಥೆ ಹಾಗೂ ಕ್ರಮ ಸಂಖ್ಯೆಯ ಆಧಾರದಲ್ಲೇ ಮದುವೆಗೆ ಅವಕಾಶ ನೀಡಿದ್ದರಿಂದ ನೂಕು ನುಗ್ಗಲು ಉಂಟಾಗಲಿಲ್ಲ. 

ದೇವಿಯ ಸನ್ನಿಧಿಯಲ್ಲಿ ತಾಳಿ ಕಟ್ಟುವ ಸಂಕಲ್ಪ: ‘ಕಟೀಲು ದೇವಿಯ ಆರಾಧಕನಾಗಿರುವುದರಿಂದ ಇದೇ ಸನ್ನಿಧಾನದಲ್ಲಿ ಬಾಳ ಸಂಗಾತಿಗೆ ತಾಳಿ ಕಟ್ಟಬೇಕು ಎಂಬುದು ನನ್ನ ಆಸೆಯಾಗಿತ್ತು. ಅದರಂತೆ ಎಲ್ಲರ ಸಮ್ಮತಿಯಂತೆ ಸರಳವಾಗಿ ಮದುವೆಯಾಗಿದ್ದೇವೆ. ರಜಾ ದಿನವಾಗಿರುವುದರಿಂದ ಭಕ್ತರು ಹೆಚ್ಚಿದ್ದು, ಅನೇಕ ಜೋಡಿಗಳಿದ್ದರಿಂದ ಜನ ಸೇರಿದ್ದರೂ ಎಲ್ಲವೂ ಸಮಯಕ್ಕೆ ಸರಿಯಾಗಿ ಸುಸೂತ್ರವಾಗಿ ಆಗಿದೆ. ದೇವಸ್ಥಾನದವರು ಉತ್ತಮ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ’ ಎಂದು ವರ, ಮಂಗಳೂರಿನ ಹರೀಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT