ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಮತದಾನ ತಪ್ಪಿಸದಂತೆ ಚಂದ್ರಚೂಡ್ ಮನವಿ

Published 20 ಏಪ್ರಿಲ್ 2024, 14:17 IST
Last Updated 20 ಏಪ್ರಿಲ್ 2024, 14:17 IST
ಅಕ್ಷರ ಗಾತ್ರ

ನವದೆಹಲಿ: ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡುವ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ ಎಂದು ಮನವಿ ಮಾಡಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ‘ಅದು ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರ ಆದ್ಯ ಕರ್ತವ್ಯ’ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ‘ನನ್ನ ಮತ ನನ್ನ ಧ್ವನಿ’ ಕಾರ್ಯಕ್ರಮದ ಭಾಗವಾಗಿ ವಿಡಿಯೊ ಸಂದೇಶ ಕಳಿಸಿರುವ ಅವರು, ನಾವು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಪ್ರಜೆಗಳಾಗಿದ್ದೇವೆ ಎಂದಿದ್ದಾರೆ. 

‘ಸಂವಿಧಾನವು ನಮಗೆ ಅನೇಕ ಹಕ್ಕುಗಳನ್ನು ನೀಡಿದೆ. ಅದೇ ರೀತಿ ಪ್ರತಿಯೊಬ್ಬರೂ ತಮಗೆ ವಹಿಸಿದ ಕರ್ತವ್ಯ ನಿಭಾಯಿಸಬೇಕೆಂದು ಬಯಸುತ್ತದೆ. ಅದರ ಪೈಕಿ ಮುಖ್ಯವಾದದ್ದು ಮತದಾನ ಮಾಡುವುದು’ ಎಂದು ತಿಳಿಸಿದರು.

‘ಮತದಾನ ಮಾಡುವಂತೆ ನಾನು ಪ್ರತಿಯೊಬ್ಬರಲ್ಲೂ ಮನವಿ ಮಾಡುತ್ತೇನೆ. ನಮ್ಮ ಶ್ರೇಷ್ಠ ತಾಯ್ನೆಲದ ಪ್ರಜೆಗಳಾಗಿ ಮತ ಹಾಕುವ ಅವಕಾಶವನ್ನು ಕಳೆದುಕೊಳ್ಳಬೇಡಿ. ನಮ್ಮ ದೇಶಕ್ಕಾಗಿ ಪ್ರತಿ ಐದು ವರ್ಷಗಳಿಗೊಮ್ಮೆ ಐದು ನಿಮಿಷ.. ಅದು ಸಾಧ್ಯ. ಹೌದೋ ಅಲ್ಲವೋ? ಹೆಮ್ಮೆಯಿಂದ ಮತ ಚಲಾಯಿಸೋಣ. ನನ್ನ ಮತ, ನನ್ನ ಧ್ವನಿ’ ಎಂದು ಸಿಜೆಐ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT