ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಚಂದ್ರಬಾಬು ನಾಯ್ಡು ಆಸ್ತಿ ₹810 ಕೋಟಿ

Published 19 ಏಪ್ರಿಲ್ 2024, 14:02 IST
Last Updated 19 ಏಪ್ರಿಲ್ 2024, 14:02 IST
ಅಕ್ಷರ ಗಾತ್ರ

ಅಮರಾವತ: ಟಿಡಿಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಕುಟುಂಬದ ಆಸ್ತಿ ಕಳೆದ ಐದು ವರ್ಷಗಳಲ್ಲಿ ಶೇ 41 ರಷ್ಟು ಹೆಚ್ಚಳವಾಗಿದೆ. 

ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕುಪ್ಪಂ ಕ್ಷೇತ್ರದಿಂದ ಕಣಕ್ಕಿಳಿದಿರುವ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ್ದು, ₹ 810.42 ಕೋಟಿ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ. ಚಂದ್ರಬಾಬು ಅವರ ಪರವಾಗಿ ಪತ್ನಿ ಎನ್‌.ಭುವನೇಶ್ವರಿ ಅವರು ನಾಮಪತ್ರ ಸಲ್ಲಿಸಿದರು. ವಿಧಾನಸಭಾ ಚುನಾವಣೆ ಮೇ 13 ರಂದು ನಡೆಯಲಿದೆ.

ಕಳೆದ ಚುನಾವಣೆ ಸಮಯದಲ್ಲಿ ನಾಯ್ದು ಅವರು ₹ 574.3 ಕೋಟಿ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದರು. ಭುವನೇಶ್ವರಿ ಅವರು ಹೆರಿಟೇಜ್‌ ಫುಡ್ಸ್‌ ಲಿಮಿಟೆಡ್‌ ಕಂಪನಿಯ 2.26 ಕೋಟಿ ಷೇರುಗಳನ್ನು ಹೊಂದಿದ್ದು, ಇದರ ಮಾರುಕಟ್ಟೆ ಮೌಲ್ಯ ₹ 764 ಇದೆ ಎಂದು ಪ್ರಮಾಣದಲ್ಲಿ ಹೇಳಿಕೊಂಡಿದ್ದಾರೆ. 2019ರಲ್ಲಿ ಈ ಷೇರುಗಳ ಮೌಲ್ಯ ₹ 545.76 ಕೋಟಿಯಷ್ಟಿತ್ತು.

ನಾಯ್ಡು ಅವರು ₹ 4.80 ಲಕ್ಷ ಮೌಲ್ಯದ ಚರಾಸ್ತಿ ಮತ್ತು ₹ 36.31 ಲಕ್ಷ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಭುವನೇಶ್ವರಿ ಬಳಿ 3.4 ಕೆ.ಜಿ. ಚಿನ್ನ ಹಾಗೂ 41.5 ಕೆ.ಜಿ. ಬೆಳ್ಳಿ ಇದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT