ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

TN | ಪರಂದೂರು ವಿಮಾನ ನಿಲ್ದಾಣಕ್ಕೆ ವಿರೋಧ: ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ

Published 19 ಏಪ್ರಿಲ್ 2024, 13:25 IST
Last Updated 19 ಏಪ್ರಿಲ್ 2024, 13:25 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ಪರಂದೂರಿನಲ್ಲಿ ನಿರ್ಮಿಸಲಾಗುತ್ತಿರುವ ಚೆನ್ನೈ ಗ್ರೀನ್‌ಫೀಲ್ಡ್‌ ವಿಮಾನ ನಿಲ್ದಾಣ ನಿರ್ಮಾಣವನ್ನು ವಿರೋಧಿಸಿ ಪದುಕ್ಕೋಟ್ಟೈ ಜಿಲ್ಲೆಯ ವೆಂಗೈವಾಯಲ್ ಗ್ರಾಮಸ್ಥರು ಲೋಕಸಭಾ ಚುನಾವಣೆಯ ಮತದಾನವನ್ನು ಬಹಿಷ್ಕರಿಸಿದ್ದಾರೆ.

ಈ ಗ್ರಾಮದಲ್ಲಿ 2022ರಲ್ಲಿ ನಡೆದ ಓವರ್‌ ಹೆಡ್ ಟ್ಯಾಂಕ್‌ನಲ್ಲಿ ಮಾನವರ ಮಲ ಬೆರೆಸಿದ ಪ್ರಕರಣ ಇಡೀ ರಾಜ್ಯದ ಗಮನ ಸೆಳೆದಿತ್ತು. ಇದೀಗ ಮತದಾನ ಬಹಿಷ್ಕಾರದ ಮೂಲಕ ವೆಂಗೈವಾಯಲ್ ಮತ್ತೆ ಸುದ್ದಿಯಲ್ಲಿದೆ.

ವೆಂಗೈವಾಯಲ್ ಗ್ರಾಮಸ್ಥರೊಂದಿಗೆ ವಿಮಾನ ನಿಲ್ದಾಣ ನಿರ್ಮಾಣ ವಿರೋಧಿಸಿ ಶ್ರೀಪೆರಂಬದೂರು ಸಮೀಪದ ಏಕನಾಪುರಂ, ನಾಗಪಟ್ಟು ಹಾಗೂ ಇತರ ಸುತ್ತಮುತ್ತಲಿನ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸಿದ್ದಾರೆ.

ಕಂದಾಯ ಇಲಾಖೆ ಅಧಿಕಾರಿಗಳು ಈ ಗ್ರಾಮಗಳಿಗೆ ಭೇಟಿ ನೀಡಿ ಮತದಾರರ ಮನವೊಲಿಸುವ ಯತ್ನ ನಡೆಸಿದರು. ಅಧಿಕಾರಿಗಳನ್ನು ಸುತ್ತುವರಿದ ಗ್ರಾಮಸ್ಥರು, ಇದನ್ನು ವಿರೋಧಿಸಿದರು.

ಗ್ರಾಮಸ್ಥರು ತೋಳಿಗೆ ಕಪ್ಪು ಪಟ್ಟಿ ಧರಿಸಿ, ಕೆಲವರು ಬಾಯಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಪ್ರತಿಭಟಿಸಿದರು. ನ್ಯಾಯಕ್ಕಾಗಿ ಬೇಡಿಕೆ ಇಟ್ಟು ಅಧಿಕಾರಿಗಳಿಗೆ ಕಪ್ಪು ಬಾವುಟ ಪ್ರದರ್ಶಿಸಿದರು. 

ಇದೇ ಗ್ರಾಮದಲ್ಲಿ 2022ರಲ್ಲಿ ಸಂಭವಿಸಿದ ಕುಡಿಯುವ ನೀರಿಗೆ ಮಲ ಬೆರೆಸಿದ ಪ್ರಕರಣ ಈಗಲೂ ತನಿಖೆಯ ಹಂತದಲ್ಲಿದೆ. 

ಇದೇ ರೀತಿ ಸ್ಥಳೀಯ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ತಮಿಳುನಾಡಿನ ಶ್ರೀರಂಗಂಪಟ್ಟಿ, ದಿಂಡಿಗಲ್ ಜಿಲ್ಲೆಯ ಕೆಲ ಗ್ರಾಮಗಳು, ತೂತುಕುಡಿ ಜಿಲ್ಲೆಯ ಕೆಲ ಗ್ರಾಮಗಳ ಮತದಾರರು ಚುನಾವಣೆ ಬಹಿಷ್ಕರಿಸಿದ್ದಾರೆ. ಕೆಲವೆಡೆ ಪೊಲೀಸ್ ಮೇಲೆ ಕಲ್ಲು ತೂರಾಟವೂ ನಡೆದಿರುವ ಕುರಿತು ವರದಿಯಾಗಿದೆ.

ಮತದಾರರ ಪಟ್ಟಿಯಿಂದ ಹೆಸರು ಬಿಟ್ಟುಹೋಗಿರುವ ಪ್ರಕರಣಗಳ ಕುರಿತು ಮಹತಾನಪುರಂ ಎಂಬಲ್ಲಿ ದೂರು ಸಲ್ಲಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT