ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಮೊದಲ ಹಳ್ಳಿಗೆ ತಲುಪಿದ ದೂರಸಂಪರ್ಕ ಜಾಲ

Published 18 ಏಪ್ರಿಲ್ 2024, 6:33 IST
Last Updated 18 ಏಪ್ರಿಲ್ 2024, 6:33 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಮೊದಲ ಹಳ್ಳಿ ಎಂದು ಗುರುತಿಸಲಾಗಿರುವ ಕೌರಿಕ್ ಮತ್ತು ಗುಯೆಗೆ ದೂರಸಂಪರ್ಕ ಜಾಲ (ಟೆಲಿಕಾಂ ಸಂಪರ್ಕ) ಕಲ್ಪಿಸಲಾಗಿದೆ.

ಹಿಮಾಚಲ ಪ್ರದೇಶದ ಲಾಹೋಲ್ ಮತ್ತು ಸ್ಪಿತಿ ಜಿಲ್ಲೆಯ ಈ ಹಳ್ಳಿಗಳು ಸಮುದ್ರ ಮಟ್ಟದಿಂದ ಸುಮಾರು 14,931 ಅಡಿ ಎತ್ತರದಲ್ಲಿವೆ.

ಟೆಲಿಕಾಂ ಸಂಪರ್ಕ ಸಿಕ್ಕಿರುವ ಸಂಗತಿಯನ್ನು ಕೇಂದ್ರ ದೂರಸಂಪರ್ಕ ಇಲಾಖೆ 'ಎಕ್ಸ್' ಪೋಸ್ಟ್‌ನಲ್ಲಿ ತಿಳಿಸಿದೆ.

ಕೌರಿಕ್ ಹಳ್ಳಿಯು ಟಿಬೆಟ್ ಗಡಿಗೆ ಹತ್ತಿರದಲ್ಲಿದೆ. ಸ್ಪಿತಿ ನದಿ ಸಂಗಮವಾಗುವ ಮೊದಲು ಪರಂಗ್ ಅಥವಾ ಪರೆ ಚು ನದಿಯ ಕಣಿವೆಯಲ್ಲಿ ಈ ಹಳ್ಳಿ ಇದೆ. ಗುಯೆ ಸ್ಪಿತಿ ನದಿ ಕಣಿವೆಯಲ್ಲಿರುವ ಒಂದು ಹಳ್ಳಿಯಾಗಿದೆ. ಇದು ಭಾರತ-ಚೀನಾ ಗಡಿಯಿಂದ ಕೆಲವು ಕಿಲೋ ಮೀಟರ್ ದೂರದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT