ಈ ಪಂದ್ಯವನ್ನು ನವೆಂಬರ್ 20ರಿಂದ ಡಿಸೆಂಬರ್ 15ರವರೆಗೆ ನಿಗದಿಪಡಿಸಲು ಯೋಜಿಸಲಾಗಿದೆ. ಚೆಸ್ನ ಜಾಗತಿಕ ಆಡಳಿತ ಮಂಡಳಿ (ಫಿಡೆ) ಶನಿವಾರ ಸಂಭಾವ್ಯ ಬಿಡ್ದಾರರಿಂದ ಟೆಂಡರ್ಗಳನ್ನು ಆಹ್ವಾನಿಸಿದೆ. ಎಐಸಿಎಫ್ನ ನೂತನ ಕಾರ್ಯದರ್ಶಿ ದೇವ್ ಪಟೇಲ್ ಗುರುವಾರ ಗ್ರ್ಯಾಂಡ್ ಫಿನಾಲೆ ಆಯೋಜಿಸಲು ರಾಷ್ಟ್ರೀಯ ಸಂಸ್ಥೆಯ ಇಚ್ಛೆ ವ್ಯಕ್ತಪಡಿಸಿದರು. ಗುಕೇಶ್ ಆಡುವುದರಿಂದಾಗಿ ಈ ಪಂದ್ಯ ಮಹತ್ವ ಪಡೆದಿದೆ.