ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರವಾಡ ಕ್ಷೇತ್ರ: 18.31 ಲಕ್ಷ ಮತದಾರರು

ಲೋಕಸಭೆ ಚುನಾವಣೆ: ಮತದಾರರ ಅಂತಿಮಪಟ್ಟಿ ಪ್ರಕಟ
Published 27 ಏಪ್ರಿಲ್ 2024, 5:23 IST
Last Updated 27 ಏಪ್ರಿಲ್ 2024, 5:23 IST
ಅಕ್ಷರ ಗಾತ್ರ

ಧಾರವಾಡ: ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಧಾರವಾಡ ಲೋಕಸಭಾ ಕ್ಷೇತ್ರದ ಮತದಾರರ ಅಂತಿಮ ಪಟ್ಟಿಯನ್ನು ಏಪ್ರಿಲ್ 19ರಂದು ಪ್ರಕಟಿಸಲಾಗಿದೆ. ಕ್ಷೇತ್ರದಲ್ಲಿ ಪುರುಷರು 9,17,926, ಮಹಿಳೆಯರು 9,13,949 ಹಾಗೂ ಲಿಂಗತ್ವ ಅಲ್ಪಸಂಖ್ಯಾತರು 100 ಒಟ್ಟು 18,31,975 ಮತದಾರರು ಇದ್ಧಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ತಿಳಿಸಿದ್ದಾರೆ.

‌ಹೊಸದಾಗಿ ನೋಂದಾಯಿತ ಯುವ ಮತದಾರರು 47,204, ಅಂಗವಿಕಲರು 25,787 ಹಾಗೂ 85 ವರ್ಷ ತುಂಬಿದ ಹಿರಿಯ ನಾಗರಿಕರು 18,626 ಮತದಾರರು ಇದ್ದಾರೆ.

ಹಾವೇರಿ ಜಿಲ್ಲೆಯ ಶಿಗ್ಗಾವಿ ಸಹಿತ ಎಂಟು ವಿಧಾನಸಭಾ ಕ್ಷೇತ್ರಗಳು ಧಾರವಾಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇವೆ. ಕ್ಷೇತ್ರವಾರು ಯುವ ಮತದಾರರು ನವಲಗುಂದ 5,361, ಕುಂದಗೋಳ 5,398 (ಲಿಂಗತ್ವ ಅಲ್ಪಸಂಖ್ಯಾತ 1, ಧಾರವಾಡ 6,000, ಹುಬ್ಬಳ್ಳಿ-ಧಾರವಾಡ ಪೂರ್ವ 5,066 (ಲಿಂಗತ್ವ ಅಲ್ಪಸಂಖ್ಯಾತ 3), ಹುಬ್ಬಳ್ಳಿ -ಧಾರವಾಡ ಕೇಂದ್ರ 5,491, ಹುಬ್ಬಳ್ಳಿ -ಧಾರವಾಡ ಪಶ್ಚಿಮ 5,947 ಕಲಘಟಗಿ 6,556, ಹಾವೇರಿ ಜಿಲ್ಲೆಯ ಶಿಗ್ಗಾವಿ 7,385 (ಲಿಂಗತ್ವ ಅಲ್ಪಸಂಖ್ಯಾತ 1) ಮಂದಿ ಇದ್ಧಾರೆ.

47,204 ಯುವ ಮತದಾರರಲ್ಲಿ 25,005 ಯುವಕರು, 22,194 ಯುವತಿಯರು ಮತ್ತು 5 ಲಿಂಗತ್ವ ಅಲ್ಪಸಂಖ್ಯಾತರು ಇದ್ದಾರೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT