ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯದ ಅಭಿವೃದ್ದಿಗೆ ವಿಶ್ವೇಶ್ವರಯ್ಯರ ಕೊಡುಗೆ ಅಪಾರ: ರಾಮ್‌ ಪ್ರಸಾತ್‌ ಮನೋಹತ್

ಜಲಮಂಡಳಿಯಲ್ಲಿ ‘ಅಭಿಯಂತರರ ದಿನಾಚರಣೆ’ ಕಾರ್ಯಕ್ರಮ
Published : 4 ಅಕ್ಟೋಬರ್ 2024, 16:09 IST
Last Updated : 4 ಅಕ್ಟೋಬರ್ 2024, 16:09 IST
ಫಾಲೋ ಮಾಡಿ
Comments

ಬೆಂಗಳೂರು: ದೇಶ ಕಟ್ಟುವಲ್ಲಿ ಎಂಜಿನಿಯರ್‌ಗಳ ಪಾತ್ರ ಹಿರಿದಾಗಿದೆ. ರಾಜ್ಯವನ್ನು ಸಮೃದ್ದವನ್ನಾಗಿಸುವ, ಅಭಿವೃದ್ದಿಯ ಪಥದಲ್ಲಿ ಸಾಗುವಂತೆ ಮಾಡಿದ ಕೀರ್ತಿ ಸರ್‌ ಎಂ. ವಿಶ್ವೇಶ್ವರಯ್ಯ ಅವರಿಗೆ ಸಲ್ಲುತ್ತದೆ ಎಂದು ಜಲಮಂಡಳಿ ಅಧ್ಯಕ್ಷ ರಾಮ್‌ ಪ್ರಸಾತ್‌ ಮನೋಹತ್ ತಿಳಿಸಿದರು.

ಜಲಮಂಡಳಿ ಅಭಿಯಂತರರ ಸಂಘದ ವತಿಯಿಂದ ಆಯೋಜಿಸಿದ್ದ ‘ಅಭಿಯಂತರರ ದಿನಾಚರಣೆ’ ಉದ್ಘಾಟಿಸಿ ಮಾತನಾಡಿದರು.

ಮೈಸೂರು ಮಹಾರಾಜರ ನಾಯಕತ್ವದಲ್ಲಿ ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಯೋಜನೆಗಳಿಂದಾಗಿ ರಾಜ್ಯ ಬಹಳಷ್ಟು ಕ್ಷೇತ್ರಗಳಲ್ಲಿ ಮೊದಲನೇ ಸ್ಥಾನದಲ್ಲಿದೆ. ಸರ್ ಎಂ.ವಿ ಅವರ ದೂರದೃಷ್ಟಿಯ ಪರಿಣಾಮದಿಂದಾಗಿ ಬೆಂಗಳೂರು ನಗರಕ್ಕೆ ಸಮರ್ಪಕ ನೀರು ಸರಬರಾಜು ಆಗುತ್ತಿದೆ ಎಂದು ಹೇಳಿದರು.

ಅಂತರ್ಜಲ ಕುಸಿತದಿಂದ ಬೇಸಿಗೆಯಲ್ಲಿ ಉಂಟಾಗಿದ್ದ ನೀರಿನ ಕೊರತೆಯನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಜಲಮಂಡಳಿ ಯಶಸ್ವಿಯಾಯಿತು ಎಂದರು.

ಇತಿಹಾಸಕಾರ ಧರ್ಮೇಂದ್ರ ಕುಮಾರ್‌ ಮಾತನಾಡಿ, ಸರ್‌ ಎಂವಿ ಅವರು ತಮ್ಮ ಕಾಲಾವಧಿಯಲ್ಲಿ ಹಲವಾರು ದೂರದೃಷ್ಟಿಯ ಕಾರ್ಯಗಳನ್ನು ಕೈಗೊಂಡು ಅನುಷ್ಠಾನಗೊಳಿಸಿದರು. ಬೆಂಗಳೂರು ನಗರ, ಮೈಸೂರು ರಾಜ್ಯ, ಕರ್ನಾಟಕ ರಾಜ್ಯ ಅಭಿವೃದ್ದಿಗೊಳ್ಳಲು ಸಮರ್ಥ ಯೋಜನೆಯನ್ನು ರೂಪಿಸಿದರು’ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದೆ ಸುಧಾ ಬರಗೂರು, ಬೆಂಗಳೂರು ಜಲಮಂಡಳಿ ಅಭಿಯಂತರರ ಸಂಘದ ಅಧ್ಯಕ್ಷ ಬಿ.ಸಿ ಗಂಗಾಧರ, ಉಪಾಧ್ಯಕ್ಷ ಬಿ. ಸುರೇಶ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT