ಸಾಗರ/ ಕಾರ್ಗಲ್: ಮಂಗನ ಕಾಯಿಲೆ ಎಂದಾಕ್ಷಣ ಇದು ಕೇವಲ ಮಲೆನಾಡಿನ ಕೆಲವು ತಾಲ್ಲೂಕುಗಳಿಗೆ ಸೀಮಿತವಾಗಿದೆ ಎಂಬ ಭಾವನೆ ಇದೆ. ಆದರೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದೆ.

ಕಳೆದ ಡಿಸೆಂಬರ್‌ನಲ್ಲಿ ಅರಲಗೋಡು ಪಂಚಾಯಿತಿ ವ್ಯಾಪ್ತಿಯಲ್ಲಿ ಮಾತ್ರ ಮಂಗಗಳು ಸಾಯುತ್ತಿದ್ದವು. ನಂತರ ತಾಲ್ಲೂಕಿನ ಇತರ ಭಾಗಗಳಲ್ಲೂ ಮಂಗಗಳ ಶವ ಕಾಣಿಸಿಕೊಳ್ಳುತ್ತಿದ್ದು, ಇವುಗಳಲ್ಲೂ ಕೆ.ಎಫ್.ಡಿ ವೈರಸ್ ಪತ್ತೆಯಾಗಿರುವುದು ರೋಗ ಹರಡುವ ಸಂಬಂಧ ಆತಂಕ ಸೃಷ್ಟಿಯಾಗಿದೆ.

ಇದನ್ನೂ ಓದಿ:ಸರ್ಕಾರಕ್ಕೆ ‘ಮಂಗ’ನ ಜಾಡ್ಯ

ಮಂಗನ ಕಾಯಿಲೆಯಿಂದ ಕಳೆದ ಡಿಸೆಂಬರ್ 26ರಿಂದ 10 ದಿನಗಳ ಅವಧಿಯಲ್ಲಿ ಒಂದೇ ಪಂಚಾಯಿತಿ ವ್ಯಾಪ್ತಿಯ 6 ಜನರು ಮೃತಪಟ್ಟಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು. ಅದರಲ್ಲೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೂವರು ಸೂಕ್ತ ಚಿಕಿತ್ಸೆ ದೊರಕದೆ ಮೃತಪಟ್ಟಿದ್ದಾರೆ ಎಂಬ ಸುದ್ದಿ ಅಸಮಾಧಾನದ ಸ್ಫೋಟ ಎಬ್ಬಿಸಿತು.

ಬದುಕಿನ ಬಗ್ಗೆ ಹಲವು ಕನಸುಗಳನ್ನು ಹೊತ್ತಿದ್ದ ಪಿಯು ವಿದ್ಯಾರ್ಥಿನಿ ಶ್ವೇತಾ ಜೈನ್ ಕಳೆದ ಜ.5 ರಂದು ಮೃತಪಟ್ಟಿದ್ದು ಜನರ ರೋಷ ಹೆಚ್ಚಿಸಿತ್ತು.

ರಾಜ್ಯದಲ್ಲಿ ದಾಖಲಾದ ಕೆ.ಎಫ್.ಡಿ ಪ್ರಕರಣಗಳು

* 2010-11ರಲ್ಲಿ 17

* 11-12ರಲ್ಲಿ 97

* 12-13ರಲ್ಲಿ 13

* 13-14ರಲ್ಲಿ 166

* 14-15ರಲ್ಲಿ 50

* 15-16ರಲ್ಲಿ 23

* 16-17ರಲ್ಲಿ 38

* 17-18ರಲ್ಲಿ 13

ಮಾಹಿತಿ...

ಇದನ್ನೂ ಓದಿ:ಕಿಮ್ಮತ್ತು ಕಳೆದುಕೊಂಡ ಮಲೆನಾಡಿನ ಸಂಪತ್ತು

* ಮಂಗನ ಕಾಯಿಲೆಯಿಂದ ಮೃತಪಟ್ಟವರ ಸಂಬಂಧ ಆರೋಗ್ಯ ಇಲಾಖೆಯಲ್ಲಿ 2011-12ನೇ ಸಾಲಿನಿಂದ ಮಾತ್ರ ಅಧಿಕೃತ ಮಾಹಿತಿ ಇದೆ. ಈ ಪ್ರಕಾರ ಈವರೆಗೆ 16 ಮಂದಿ ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ.

* ಸಾಗರ ತಾಲ್ಲೂಕಿನಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ 90 ಜನರಿಗೆ, ತೀರ್ಥಹಳ್ಳಿ ತಾಲ್ಲೂಕಿನಲ್ಲಿ 6 ಜನರಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ.

* ಸಾಗರ ತಾಲ್ಲೂಕಿನಲ್ಲಿ ಕಳೆದ ಎರಡು ತಿಂಗಳಿನಲ್ಲಿ ಸುಮಾರು 91 ಮಂಗಗಳ ಶವ ಪತ್ತೆಯಾಗಿದ್ದು, 10 ಮಂಗಗಳಲ್ಲಿ ಕಾಯಿಲೆಯ ವೈರಸ್ ಇರುವುದು ದೃಢಪಟ್ಟಿದೆ.

ಮಂಗನ ಕಾಯಿಲೆ ಹರಡಿದ ಹಾದಿ....

ಶಿವಮೊಗ್ಗ ಜಿಲ್ಲೆಯ ಸಾಗರ, ತೀರ್ಥಹಳ್ಳಿ, ಹೊಸನಗರ, ಸೊರಬ, ಶಿಕಾರಿಪುರ, ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ, ಹೊನ್ನಾವರ, ಭಟ್ಕಳ, ಶಿರಸಿ, ಜೋಯಿಡಾ, ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ಶೃಂಗೇರಿ, ಎನ್.ಆರ್.ಪುರ, ಕೊಪ್ಪ, ಮೂಡಿಗೆರೆ ತಾಲ್ಲೂಕುಗಳಲ್ಲಿ ಮಂಗನ ಕಾಯಿಲೆ ಬಂದಿರುವುದು ವರದಿಯಾಗಿದೆ.

ಇದಲ್ಲದೆ ಕರಾವಳಿಯ ಉಡುಪಿ, ಕುಂದಾಪುರ, ಕಾರ್ಕಳ, ಬೆಳ್ತಂಗಡಿ, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ, ಬೆಳಗಾವಿ ಜಿಲ್ಲೆಯ ಖಾನಾಪುರ, ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲ್ಲೂಕುಗಳಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದೆ.

ಇವುಗಳನ್ನೂ ಓದಿ

ಗ್ರಾಮಗಳಲ್ಲಿ ಅವ್ಯಕ್ತ ದುಗುಡ

ಕರಾವಳಿಗೂ ಕಾಲಿಟ್ಟ ಕಾಯಿಲೆ

ಜೈವಿಕ ಅಸ್ತ್ರ ಎಂಬುದು ಸುಳ್ಳು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.