ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಎಂಟಿಸಿ | ರಿಯಾಯಿತಿ ರದ್ದು: ಬಾಡಿಗೆದಾರರ ಆಕ್ಷೇಪ

Published : 13 ಸೆಪ್ಟೆಂಬರ್ 2024, 16:26 IST
Last Updated : 13 ಸೆಪ್ಟೆಂಬರ್ 2024, 16:26 IST
ಫಾಲೋ ಮಾಡಿ
Comments

ಬೆಂಗಳೂರು: ಬಿಎಂಟಿಸಿಯ ವಾಣಿಜ್ಯ ಮಳಿಗೆದಾರರಿಗೆ ಕೋವಿಡ್‌ ಕಾರಣಕ್ಕಾಗಿ 2021ರ ಏಪ್ರಿಲ್‌ನಿಂದ ಜೂನ್‌ವರೆಗೆ ನೀಡಿದ್ದ ರಿಯಾಯಿತಿಯನ್ನು ಈಗ ರದ್ದುಪಡಿಸಿದ್ದಲ್ಲದೇ ಏಳು ದಿನಗಳ ಒಳಗೆ ಆ ಹಣವನ್ನು ಪಾವತಿ ಮಾಡುವಂತೆ ನೋಟಿಸ್‌ ನೀಡಲಾಗಿದೆ.

‘ಆಡಳಿತಾತ್ಮಕ ಕಾರಣಗಳಿಗಾಗಿ ರಿಯಾಯಿತಿ ಹಿಂಪಡೆಯಲಾಗಿದೆ. ಮೂರು ತಿಂಗಳ ಬಾಡಿಗೆಯನ್ನು ಏಳು ದಿನಗಳ ಒಳಗೆ ಕಟ್ಟದೇ ಇದ್ದರೆ ಭದ್ರತಾ ಠೇವಣಿಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಲಾಗುವುದು’ ಎಂದು ಬಿಎಂಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕರು ಡಿಮಾಂಡ್ ನೋಟೀಸ್ ಕಳುಹಿಸಿದ್ದಾರೆ.

‘ಆಡಳಿತಾತ್ಮಕ ಕಾರಣ ಏನು? ಅದಕ್ಕೂ ಬಾಡಿಗೆದಾರರಿಗೂ ಯಾವ ಸಂಬಂಧ ಎಂಬುದನ್ನು ಸ್ಪಷ್ಟಪಡಿಸದೇ, ಬಾಡಿಗೆದಾರರ ಅಭಿಪ್ರಾಯ ಪಡೆಯದೇ ನೋಟಿಸ್‌ ನೀಡಲಾಗಿದೆ. ಒಮ್ಮೆಲೇ ₹ 39 ಸಾವಿರ ಕಟ್ಟಲು ಸಾಧ್ಯವಿಲ್ಲ. ಭದ್ರತಾ ಠೇವಣಿಯನ್ನು ಇಂಥ ಕಾರಣಗಳಿಗೆ ಹೊಂದಾಣಿಕೆ ಮಾಡಲು ಕಾನೂನಿನಲ್ಲಿ ಅವಕಾಶವಿಲ್ಲ’ ಎಂದು ಬಾಡಿಗೆದಾರ ಪಿ.ಸಿ. ಅಜಿತ್‌ ಗೌಡ ಈ ನೋಟಿಸ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT