ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲ್ಲೂಕಿನ ಬಳ್ಳೆ ಹಾಡಿಯಲ್ಲಿರುವ ಆದಿವಾಸಿಗಳ ಮನೆಗಳ ಸ್ಥಿತಿ ಹೀಗಿದೆ
ಮೈಸೂರು ಜಿಲ್ಲೆಯ ಬಳ್ಳೆ ಹಾಡಿಯಲ್ಲಿ ತೀರಾ ಶಿಥಿಲಗೊಂಡಿರುವ ಮನೆಯ ಎದುರು ಅಲ್ಲಿನ ಮಹಿಳೆ
ಮೈಸೂರು ಜಿಲ್ಲೆಯ ಸೊಳ್ಳೇಪುರ ಹಾಡಿಯಲ್ಲಿ ಬಿದಿರಿನಿಂದ ಆಹಾರ ಪದಾರ್ಥ ತಯಾರಿಸಲು ಸಿದ್ಧತೆ ಮಾಡಿಕೊಳ್ಳುತ್ತಿರುವ ಆದಿವಾಸಿ ಮಹಿಳೆಯರು– ಪ್ರಜಾವಾಣಿ ಚಿತ್ರ: ಸತೀಶ್ ಆರಾಧ್ಯ
ಮೈಸೂರು ಜಿಲ್ಲೆಯ ಸೊಳ್ಳೇಪುರ ಹಾಡಿಯ ನೋಟ– ಪ್ರಜಾವಾಣಿ ಚಿತ್ರ: ಸತೀಶ್ ಆರಾಧ್ಯ
ಮೈಸೂರು ಜಿಲ್ಲೆಯ ಸೊಳ್ಳೇಪುರ ಹಾಡಿಯ ನೋಟ– ಪ್ರಜಾವಾಣಿ ಚಿತ್ರ: ಸತೀಶ್ ಆರಾಧ್ಯ
ಮೈಸೂರು ಜಿಲ್ಲೆಯ ಸೊಳ್ಳೇಪುರ ಹಾಡಿಯ ನೋಟ–ಪ್ರಜಾವಾಣಿ ಚಿತ್ರ: ಸತೀಶ್ ಆರಾಧ್ಯ
ಮೈಸೂರು ಜಿಲ್ಲೆಯ ಬಳ್ಳೆ ಹಾಡಿಯಲ್ಲಿರುವ ಈ ಮನೆಗೆ ಹಳೆಯ ಸೀರೆಗಳೇ ಗೋಡೆಗಳಾಗಿವೆ
ಮಲೆಕುಡಿಯರು ವಾಸಸ್ಥಳ ತೊರೆಯಲು ಬಯಸುವುದಿಲ್ಲ. ಅವರು ಇರುವಲ್ಲೇ ರಸ್ತೆ ವಿದ್ಯುತ್ ಸೌಕರ್ಯ ಅತ್ಯವಶ್ಯಕ
–ಜಯರಾಮ ದಿಡುಪೆ ಬೆಳ್ತಂಗಡಿಆದಿವಾಸಿಗಳಿಗೆ ತಲಾ 3 ಎಕರೆ ಜಮೀನು ಸಿಗಬೇಕು. ವಿದ್ಯಾರ್ಹತೆ ಆಧಾರಿಸಿ ಸರ್ಕಾರಿ ನೌಕರಿ ಕೊಡಬೇಕು. ಮೂಲ ಬುಡಕಟ್ಟು ಜನರಿಗೆ ಪ್ರತ್ಯೇಕ ಯೋಜನೆ ಆಗಬೇಕು; ಒಳಮೀಸಲಾತಿ ದೊರೆಯಬೇಕು. ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪನೆಯಾಗಬೇಕು
– ಸೋಮಣ್ಣ ಆದಿವಾಸಿಗಳ ಪರ ಹೋರಾಟಗಾರ ಎಚ್.ಡಿ. ಕೋಟೆ ಮೈಸೂರು ಜಿಲ್ಲೆನೆಲ ಜಲ ಮತ್ತು ಕಾಡು ನಮ್ಮ ಹಕ್ಕು ಹಾಗೂ ಸ್ವಾಭಿಮಾನದ ಪ್ರಶ್ನೆ. ಅರಣ್ಯ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಿ ಕಾಡಿನಲ್ಲಿರುವವರಿಗೆ ಹಕ್ಕುಪತ್ರ ನೀಡಬೇಕು. ಪ್ರೊ. ಮುಜಾಫರ್ ಅಸ್ಸಾದಿ ವರದಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಬೇಕು.
– ಶಾಂತರಾಮ ಸಿದ್ದಿ ವಿಧಾನಪರಿಷತ್ ಸದಸ್ಯಬುಡಕಟ್ಟು ಜನರ ನೆರವಿಗಾಗಿ ಆಗಾಗ ಲೋಕಾಯುಕ್ತ ಅಧಿಕಾರಿಗಳನ್ನು ಕರೆದೊಯ್ದು ವಿವಿಧ ಇಲಾಖೆಗಳಿಗೆ ನಿರ್ದೇಶನ ಕೊಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕೆಲವರ ಪಡಿತರ ಚೀಟಿಗಳು ಮದ್ಯ ಅಕ್ರಮ ಮಾರಾಟಗಾರರ ಪಾಲಾಗಿವೆ. ಅದನ್ನು ತಡೆಯಬೇಕು.
– ಪ್ರಸನ್ನ ರಾಜ್ಯ ಉಪಾಧ್ಯಕ್ಷ ಜನಸಂಗ್ರಾಮ ಪರಿಷತ್ಚಾಮರಾಜನಗರದಲ್ಲಿ ಸ್ಪಂದನೆ
ಯೋಜನೆಗೆ ಚಾಮರಾಜನಗರ ಜಿಲ್ಲೆಯಲ್ಲಿ ಸ್ಪಂದನೆ ಕಂಡುಬಂದಿದೆ. ‘ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ಮುಖ್ಯವಾಹಿನಿಯಿಂದ ದೂರ ಉಳಿದ ಜೇನು ಕುರುಬರನ್ನು ನೈಜ ಬುಡಕಟ್ಟು ಸಮುದಾಯ ಎಂದು ಗುರುತಿಸಲಾಗಿದೆ. ಗುಡ್ಡೆಕೇರೆ ಆಡಿನಕಣಿವೆ ಅಣಜಿಹುಂಡಿ ಕೆರೆಮಾಳ ನವಿಲುಗುಂಡಿ ಮದ್ದೂರು ಕಾಲೊನಿ ಉಪ್ಕರ ಕಾಲೊನಿ ಮುಕ್ತಿ ಕಾಲೊನಿ ಮಗುವಿನಹಳ್ಳಿ ಮೆಲಕಮ್ಮನಹಳ್ಳಿ ಕಾಲೊನಿ ದೇಶಿಪುರ ಕಾಲೊನಿ ಹಗ್ಗದಹಳ್ಳದ 439 ಕುಟುಂಬಗಳ 1096 ಮಂದಿಯನ್ನು ಗುರುತಿಸಲಾಗಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಮಂಜುಳಾ ಮಾಹಿತಿ ನೀಡಿದರು. ‘ಆಧಾರ್ ಸೇರಿದಂತೆ ಗುರುತಿನ ಚೀಟಿಗಳನ್ನು ವಿತರಿಸಲಾಗುತ್ತಿದೆ. 27 ಕುಟುಂಬಗಳಿಗೆ ಮನೆ ನಿರ್ಮಿಸಿಕೊಳ್ಳಲು ತಲಾ ₹ 2.39 ಲಕ್ಷ ಜಮೆ ಮಾಡಲಾಗಿದೆ. 23 ಮನೆಗಳ ನಿರ್ಮಾಣ ನಡೆದಿದೆ’ ಎಂದರು.
ವರದಿಯಲ್ಲಿ ಏನಿದೆ?
ಮೈಸೂರು ವಿಶ್ವವಿದ್ಯಾಲಯದ ಸಾಮಾಜಿಕ ಹೊರಗುಳಿಯುವಿಕೆ ಮತ್ತು ಒಳಗೊಳ್ಳುವಿಕೆ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಡಿ.ಸಿ.ನಂಜುಂಡ ಮತ್ತು ಮಂಡ್ಯ ಸ್ನಾತಕೋತ್ತರ ಕೇಂದ್ರದ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೇಮಕುಮಾರ್ ಜಿ.ಎಸ್. ನೇತೃತ್ವದ ಸಂಶೋಧನಾ ತಂಡವು ಸಮೀಕ್ಷೆ ನಡೆಸಿ ‘ಬುಡಕಟ್ಟು ಮಾನವ ಅಭಿವೃದ್ಧಿ ವರದಿ’ ಸಿದ್ಧಪಡಿಸಿದೆ. ರಾಜ್ಯದ 50 ಬುಡಕಟ್ಟು ಸಮುದಾಯಗಳ 5 ಸಾವಿರಕ್ಕೂ ಹೆಚ್ಚಿನ ಜನರನ್ನು ಭೇಟಿಯಾಗಿ ದತ್ತಾಂಶ ಸಂಗ್ರಹಿಸಲಾಗಿದೆ. ಬುಡಕಟ್ಟು ಸಮುದಾಯದ ಆರೋಗ್ಯ ಶಿಕ್ಷಣ ಮತ್ತು ಉದ್ಯೋಗದ (ಜೀವನೋಪಾಯ) ಸ್ಥಿತಿಗತಿಗೆ ಆದ್ಯತೆ ನೀಡಿದೆ. ಸಚಿವಾಲಯದ ಕೋರಿಕೆಯಂತೆ ಲಿಂಗ ಭಾಗವಹಿಸುವಿಕೆ ಹೊರಗುಳಿಯವಿಕೆ ಮೊದಲಾದ ಅಂಶಗಳ ಆಧಾರದಲ್ಲೂ ಸಮೀಕ್ಷೆ ನಡೆದಿದೆ. ಈ ವಿಷಯಗಳಲ್ಲಿ ಬುಡಕಟ್ಟು ಜನ ಬಹಳ ಹಿಂದುಳಿದಿರುವುದನ್ನು ಗುರುತಿಸಲಾಗಿದೆ. ಗ್ರಾಮೀಣ ಹಾಗೂ ಅರಣ್ಯದ ಬುಡಕಟ್ಟು ಜನರ ಮಾನವ ಅಭಿವೃದ್ಧಿಯ ಅಂತರ ಹೆಚ್ಚಿರುವುದನ್ನು ಗುರುತಿಸಲಾಗಿದೆ. ಬಹಳಷ್ಟು ಮಂದಿಗೆ ಮತದಾರರ ಗುರುತಿನ ಚೀಟಿ ದೊರೆತಿಲ್ಲ. ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಸಿಕ್ಕಿಲ್ಲ. ಯೋಜನೆಗಳು ಎಲ್ಲರಿಗೂ ತಲುಪಿಲ್ಲ. ಉದ್ಯೋಗ ಸಿಕ್ಕಿಲ್ಲ. ಶಾಲೆಯಿಂದ ಹೊರಗುಳಿದಿರುವ ಮಕ್ಕಳು ಗಣನೀಯವಾಗಿ ಹೆಚ್ಚಿರುವುದನ್ನು ಗುರುತಿಸಲಾಗಿದೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಪ್ರಾಯೋಜಕತ್ವದಲ್ಲಿ 2021ರಿಂದ 2023ರವರೆಗೆ ನಡೆದ ಈ ಸಮೀಕ್ಷೆಗೆ ಸಚಿವಾಲಯದಿಂದ ₹30 ಲಕ್ಷ ನೆರವು ದೊರೆತಿತ್ತು.
ಬಹು ಉದ್ದೇಶದ ಕೇಂದ್ರಗಳು (ಎಂಪಿಸಿ)
ಜಿಲ್ಲೆ;ಗುರಿ;ಸಾಧನೆ ಮೈಸೂರು;33;0 ಚಾಮರಾಜನಗರ;6;0 ಕೊಡಗು;13;0 ಉಡುಪಿ;18;0 ದಕ್ಷಿಣ ಕನ್ನಡ;4;0 (ಎಲ್ಲ ಜಿಲ್ಲೆಗಳಲ್ಲೂ ಪ್ರಗತಿಯು ಡಿಪಿಆರ್ ತಯಾರಿಕೆ ಹಂತದಲ್ಲೇ ಇದೆ) –––––––– ವನ–ಧನ ವಿಕಾಸ ಕೇಂದ್ರ (ವಿಡಿವಿಕೆ) ಜಿಲ್ಲೆ; ಗುರಿ; ಸಾಧನೆ ಮೈಸೂರು;21;ತರಬೇತಿ ಪೂರ್ಣ ಸಮೀಕ್ಷೆ ಪ್ರಗತಿಯಲ್ಲಿದೆ ಕೊಡಗು;12;ತರಬೇತಿ ಆರಂಭವಾಗಬೇಕಿದೆ
ಅಗತ್ಯವಿದ್ದರೆ....
ಬುಡಕಟ್ಟು ಸಂಶೋಧನೆಗೆ ಕೇಂದ್ರ ಮೂಲ ಆದಿವಾಸಿಗಳ ಶ್ರೇಯೋಭಿವೃದ್ಧಿಗೆ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲೆಂದೇ ಮೈಸೂರಿನಲ್ಲಿ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ 2016ರಲ್ಲಿ ‘ಮೂಲ ಆದಿವಾಸಿ ಅಧ್ಯಯನ ಕೇಂದ್ರ’ ಸ್ಥಾಪಿಸಲಾಗಿದೆ. ಕೇಂದ್ರವನ್ನು ಎರಡು ವರ್ಷ ನಡೆಸಿ ಮುಚ್ಚಲಾಗಿತ್ತು. ಅದರಿಂದ ಜೇನು ಕುರುಬ ಕೊರಗ ಇರುಳಿಗ ಸೋಲಿಗ ಬೆಟ್ಟ ಕುರುಬ ಗೌಡಲು ಸಿದ್ದಿ ಕುಡಿಯ ಎರವ ಪಣಿಯ ಮಲೆಕುಡಿಯ ಸಿದ್ದಿ ಪಣಿಯ ಹಸಲರು ಮೊದಲಾದ ಅರಣ್ಯ ಆಧಾರಿತ ಬುಡಕಟ್ಟು ಸಮುದಾಯಗಳಿಗೆ ಧ್ವನಿ ಇಲ್ಲದಂತಾಗಿದೆ. ಆದಿವಾಸಿಗಳಿಗೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಹೋದ ವರ್ಷವಷ್ಟೆ ಸಂಶೋಧನಾ ಅಧಿಕಾರಿಯನ್ನು ನೇಮಿಸಲಾಗಿದೆ. ರಾಜ್ಯದಲ್ಲಿ 6 ಲಕ್ಷಕ್ಕೂ ಹೆಚ್ಚು ಮೂಲ ಆದಿವಾಸಿಗಳಿದ್ದಾರೆ. ಮೈಸೂರು ಚಾಮರಾಜನಗರ ಕೊಡಗು ದಕ್ಷಿಣ ಕನ್ನಡ ಉಡುಪಿ ರಾಮನಗರ ಶಿವಮೊಗ್ಗ ಚಿಕ್ಕಮಗಳೂರು ಮೊದಲಾದ ಜಿಲ್ಲೆಗಳಲ್ಲಿರುವ 12 ಬುಡಕಟ್ಟು ಸಮುದಾಯಗಳ ಕುರಿತು ವರದಿ ತಯಾರಿಸಿ ಅವರಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸ್ಥಾಪಿಸಲಾಗಿದೆ.
ಅಗತ್ಯವಿದ್ದರೆ....
ರಕ್ತಹೀನತೆ ಸಮಸ್ಯೆ ಹಲವು ಕಾಯಿಲೆಗಳ ನಡುವೆ ಸಿಕಲ್‌ಸೆಲ್ ಅನೀಮಿಯಾ (ಕುಡುಗೋಲು ರಕ್ತ ಕಣ ಹೀನತೆ) ದೃಢಪಡುತ್ತಿರುವುದು ಆತಂಕಕ್ಕೆ ಹೆಚ್ಚಾಗಲು ಕಾರಣವಾಗಿದೆ. ಮೈಸೂರು ಕೊಡಗು ಉತ್ತರ ಕನ್ನಡ ಚಿಕ್ಕಮಗಳೂರು ಉಡುಪಿ ಚಾಮರಾಜನಗರ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಆರೋಗ್ಯ ತಪಾಸಣೆಗ ಒಳಗಾದ 55503 ಮಂದಿ ಪೈಕಿ 2018 ಮಂದಿಗೆ ರೋಗ ಲಕ್ಷಣವಿದೆ. ಮೈಸೂರಿನಲ್ಲಿ 86 ಚಾಮರಾಜನಗರದಲ್ಲಿ 75 ಹಾಗೂ ಕೊಡಗು ಜಿಲ್ಲೆಯಲ್ಲಿ 31 ಮಂದಿಯಲ್ಲಿ ಕಾಯಿಲೆ ದೃಢಪಟ್ಟಿದ್ದು ಕಳವಳಕ್ಕೆ ಕಾರಣವಾಗಿದೆ. ಈ ರಕ್ತಹೀನತೆಯು ಅನುವಂಶೀಯವಾಗಿ ಬರುವಂತಹ ಕಾಯಿಲೆಯಾಗಿದೆ. ಈ ರೋಗ ಬಂದವರಲ್ಲಿ ದುಂಡಾಗಿರುವ ಕೆಂಪುರಕ್ತ ಕಣಗಳ ಆಕಾರವು ಕುಡುಗೋಲಿನಂತೆ ಬದಲಾಗಿರುತ್ತದೆ. ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕವನ್ನು ಸಾಗಿಸುವ ಕೆಂಪುರಕ್ತ ಕಣಗಳ ಆಕಾರವೇ ಬದಲಾಗುವುದರಿಂದ ಆಮ್ಲಜನಕದ ಪೂರೈಕೆ ಅಂಗಾಂಗಗಳಿಗೆ ಕಡಿಮೆಯಾಗಲಿದೆ. ಇದರಿಂದ ಅಂಗಾಂಗ ವೈಫಲ್ಯ ಉಂಟಾಗುವ ಸಾಧ್ಯತೆ ಇರುತ್ತದೆ. ಮೂಳೆಗಳಲ್ಲಿ ನೋವು ಆಯಾಸ ರಕ್ತ ಹೀನತೆ ಇದರ ಲಕ್ಷಣಗಳಾಗಿವೆ.