ಟೆಲಿಗ್ರಾಂ ಆ್ಯಪ್ ನಿಷೇಧಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಕೇಂದ್ರ ಸರ್ಕಾರ ಚೀನಾ ಆ್ಯಪ್‌ಗಳನ್ನು ನಿಷೇಧಿಸಿದಂತೆ ಇಂತಹ ಆ್ಯಪ್ ನಿಯಂತ್ರಣಕ್ಕೆ ಸೂಕ್ತ ಮಾರ್ಗಸೂಚಿ ನೀಡಬೇಕು.
ಉಮೇಶ್ ಬಣಕಾರ್, ನಿರ್ಮಾಪಕರ ಸಂಘದ ಅಧ್ಯಕ್ಷ
ಪೈರಸಿ ಸಂಬಂಧ ಚಿತ್ರರಂಗದಿಂದ ಬರುತ್ತಿರುವ ದೂರುಗಳ ಸಂಖ್ಯೆಯೂ ಕಡಿಮೆ ಆಗಿದೆ. ದೂರು ಬಂದರೆ ಹಕ್ಕು ಸ್ವಾಮ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತೇವೆ.
ಬಿ.ದಯಾನಂದ, ಬೆಂಗಳೂರು ನಗರ ಪೊಲೀಸ್ ಕಮಿಷನರ್
ಸಿನಿಮಾ ಒಟಿಟಿಗೆ ಬಂದ ಮೇಲೆ ಹೆಚ್ಚಿನ ಪೈರಸಿ ಆಗಿದೆ. ನಾವು ಪೇ ಪರ್ ವ್ಯೂ ಆಧಾರದಲ್ಲಿ ಸಿನಿಮಾ ನೀಡಿರುವುದರಿಂದ ನಮ್ಮ ಆದಾಯವೂ ಇಳಿಕೆಯಾಗಿರುವುದನ್ನು ಗಮನಿಸಿದ್ದೇನೆ.
ಚಂದ್ರಜಿತ್ ಬೆಳ್ಯಪ್ಪ, ‘ಇಬ್ಬನಿ ತಬ್ಬಿದ ಇಳೆಯಲಿ’ ನಿರ್ದೇಶಕ
ಕನ್ನಡ ತೆಲುಗಿನಲ್ಲಿ ಪೈರಸಿ ನಿಯಂತ್ರಣಕ್ಕೆ ಎರಡು ಕಂಪನಿಗಳಿಗೆ ₹5 ಲಕ್ಷ ಖರ್ಚು ಮಾಡಿದ್ದೇನೆ. ಶೇ 75ರಷ್ಟು ಪೈರಸಿ ಲಿಂಕ್‌ಗಳನ್ನು ಅವರು ಬ್ಲಾಕ್ ಮಾಡಿದ್ದಾರೆ. ದೂರು ನೀಡಿದರೆ ಅದಕ್ಕೆ ಕ್ರಮವಾಗುವ ಸಮಯದಲ್ಲಿ ಎಲ್ಲರ ಕೈಗೆ ಪೈರಸಿಯಾದ ಸಿನಿಮಾ ತಲುಪಿರುತ್ತದೆ.
ನಿತಿನ್ ಕೃಷ್ಣಮೂರ್ತಿ, ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ನಿರ್ದೇಶಕ
ಪೈರಸಿ ತಡೆಯಲು ಪ್ರತಿ ಸಿನಿಮಾಗೂ ₹2–₹3 ಲಕ್ಷ ಖರ್ಚು ಮಾಡುತ್ತಿದ್ದೇವೆ. ಆದರೆ ಪೈರಸಿ ವಿರುದ್ಧ ದೂರು ನೀಡಿಲ್ಲ. ಜನರಿಂದಲೇ ಪೈರಸಿ ತಡೆಯಲು ಸಾಧ್ಯ. ಪೈರೇಟೆಡ್ ಕಾಪಿ ನೋಡಲ್ಲ ಎನ್ನುವುದನ್ನು ಜನರೇ ನಿರ್ಧರಿಸಬೇಕು. ಸಿನಿಮಾ ಎನ್ನುವುದು ಪ್ರತಿಯೊಬ್ಬರಿಗೂ ನಿಲುಕುವಂತಹ ದರದಲ್ಲಿ ಸಿಗುವಂತೆ ಮಾಡಲು ಚಿತ್ರರಂಗವೂ ಜೊತೆಯಾಗಿ ಯೋಚಿಸಬೇಕು.
ಕಾರ್ತಿಕ್ ಗೌಡ , ನಿರ್ಮಾಪಕ ವಿತರಕ– ಕೆಆರ್‌ಜಿ ಸ್ಟುಡಿಯೋಸ್