ಬೆಂಗಳೂರು: 'ಚನ್ನಪಟ್ಟಣದ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ ಸತ್ಯ ಮಾತಾಡಿಬಿಟ್ಟ. ಅವನು ರೈಲು ಹೋದ ಮೇಲೆ ಟಿಕೆಟ್ ತಗೊಂಡಿದ್ದ' ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದರು.

ಸುದ್ಧಿಗಾರರ ಜೊತೆಗೆ ಶನಿವಾರ ಮಾತನಾಡಿ, 'ಅವನು ನನಗೆ ತುಂಬಾ ಬೇಕಾದವನು. ಪ್ರತಿ ಬಾರಿ ತನ್ನ ಜೇಬಿನಿಂದ ಖರ್ಚು ಮಾಡದೇ ಚುನಾವಣೆ ನಡೆಸುತಿದ್ದ. ಈ ಬಾರಿ ಎಡವಟ್ಟು ಮಾಡ್ಕೊಂಡಿದ್ದಾನೆ' ಎಂದು ಹೇಳಿದರು.

ಚನ್ನಪಟ್ಟಣ, ಶಿಗ್ಗಾವಿ ನಾವು ಗೆದ್ದಾಗಿದೆ. ಸಂಡೂರು ತೀವ್ರ ಸ್ಪರ್ಧೆ ಇದ್ದರೂ ನಾವೇ ಗೆಲ್ಲುತ್ತೇವೆ. ಇದು ಕಾಂಗ್ರೆಸ್ಗೆ ಎಚ್ಚರಿಕೆಯ ಗಂಟೆ. ಆಡಳಿತ ನಡೆಸುವುದು ಬಿಟ್ಟು ಚುನಾವಣೆಯಲ್ಲಿ ಮುಳುಗಿದರು. ಜನರ ಸಂಕಷ್ಟಕ್ಕೆ ಸ್ಪಂದಿಸುವುದು ಬಿಟ್ಟು ಹಗರಣಗಳಲ್ಲಿ ಮುಳುಗಿದರು ಎಂದು ಟೀಕಿಸಿದರು.

ವಕ್ಫ್ ವಿವಾದ: ಬುದ್ಧಿವಂತರು ಜಾಸ್ತಿ ಇರುವಲ್ಲಿ ವಿವಾದ ಇರ್ತದೆ. ಆದರೆ ವಕ್ಫ್ ವಿರುದ್ಧದ ಹೋರಾಟ ಧ್ವನಿ ಒಂದೇ ಆಗಿದೆ. ಉಪ ಚುನಾವಣೆ ಫಲಿತಾಂಶ ಬಂದ ಮೇಲೆ ಎಲ್ಲ ಬಣ ಒಂದಾಗುತ್ತವೆ ಎಂದು ಪ್ರತಿಕ್ರಿಯಿಸಿದರು.
.ಸಚಿವ ಜಮೀರ್ ಮಾತಿನಿಂದ ಲಾಭ-ನಷ್ಟ ಎರಡೂ ಆಗಿದೆ: ಸಿ.ಪಿ. ಯೋಗೇಶ್ವರ್.ಪ್ರೀತಿಯಿಂದ ನಾನು ‘ಕರಿಯಣ್ಣ’ ಎಂದರೆ, ಅವರು ‘ಕುಳ್ಳ‘ ಅಂತಾರೆ: ಸಚಿವ ಜಮೀರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.