‘ಲೇಯ್, ಪೇಪರ್ ನೋಡುದ್ಯೇನೇ? ಇನ್ಮುಂದೆ ಗಂಡಸರಿಗೂ ಫ್ರೀ ಬಸ್ ಸೌಲಭ್ಯ ಕೊಡ್ತಾರಂತೆ’ ಎಂದ ಪರ್ಮೇಶಿ.

‘ಹೌದು, ಅದೊಂದು ಬೇರೆ ಕಮ್ಮಿಯಾಗಿತ್ತು. ಒಟ್ನಲ್ಲಿ ಹೆಂಗಸರು ಎಲ್ಲೂ ನೆಮ್ಮದಿಯಾಗಿ ಇರೋ ಹಾಗಿಲ್ಲ’ ಗೊಣಗಿದರು ಪದ್ದಮ್ಮ.

‘ಯಾಕೇ ಹೀಗಂತೀಯ? ನಮ್ಮನ್ನ ಮನೇಲಿ ಮುಸುರೆ, ಬಟ್ಟೆ ಅಂತ ಬಿಟ್ಟು ಊರೂರು ತಿರುಗ್ತಿದ್ರಿ. ನಾವೂ ಹಾಗ್ ತಿರುಗುದ್ರೆ ಏನ್ ಹೊಟ್ಟೆ ಉರಿನಾ?’

‘ನೀವು ಗಂಡಸರು ಮುಂಚೆ ಹೆಂಗಸರನ್ನ ಮನೆ ಕೆಲಸದೋರ ತರ ಬಿಟ್ ತಿಪ್ಪೆ ಅಲೆಯಕ್ಕೆ ಹೋಗ್ತಿರ್ಲಿಲ್ವಾ? ಮಾಡಿದ್ದುಣ್ಣೋ ಮಹರಾಯ ಅಂತ ಅದು ನಿಮಗೆ ರಿವರ್ಸ್ ಆಗಿತ್ತು ಅಷ್ಟೇ’.

‘ಅದು ತಪ್ಪು ಅಂತ ಸರ್ಕಾರಕ್ಕೆ ಅರ್ಥ ಆಗಿ, ಪುರುಷರಿಗೂ ಸಮಾನ ನ್ಯಾಯ ದೊರಕಿಸಿಕೊಡ್ತಿದಾರೆ’.

‘ಹಾಗಂತ ಎಲ್ಲ ಗಂಡಸರಿಗೂ ಪುಕ್ಕಟೆ ಬಸ್ ಸೌಲಭ್ಯ ಸಿಗುತ್ತೆ ಅಂತ ಹಿರಿ ಹಿರಿ ಹಿಗ್ಗಬೇಡಿ. ವಯಸ್ಸಿನ ಆಧಾರದ ಮೇಲೆ ಕೊಡ್ತೀವಿ ಅಂತ ಹೇಳಿರೋದು. ಆದ್ರೂ ಏನ್ ಪ್ರಯೋಜನ? ಬಸ್ಸಲ್ಲಿ ಲೇಡೀಸ್ ಫಸ್ಟ್ ಅಂತ ನಾವೇ ತುಂಬ್ಕೊಂಡಿರ್ತೀವಿ. ನಿಮಗೆ ಸ್ಟ್ಯಾಂಡಿಂಗೇ ಕಾಯಂ! ಈ ಸಂಪತ್ತಿಗೆ ಯಾಕ್ ಬೇಕು ಫ್ರೀ ಬಸ್ಸು?’

‘ಅಂದ್ರೆ ನೀನು ಗಂಡಸರಿಗೆ ಬಸ್ನಲ್ಲಿ ಫ್ರೀ ಸೌಲಭ್ಯ ಕೊಡ್ಲೇಬಾರದು ಅಂತೀಯಾ?’

‘ಅಯ್ಯೋ ನಾನ್ಯಾಕೆ ಹೇಳ್ಲಿ? ಒಬ್ರೇ ಲಗೇಜ್ ಹಿಡ್ಕೊಂಡ್ ಒದ್ದಾಡ್ತಿದ್ವಿ. ನೀವು ಲಗೇಜ್ ತಲೆ ಮೇಲೆ ಹೇರ್ಕಂಡು ಹರಕೆ ಹೊತ್ತೋರ ತರ ನಿಂತ್ಕೊತೀರ ಅಂದ್ರೆ ನಮಗೇನ್ ಕಷ್ಟ. ಮನೇಲಿ ಏನೇನು ಅಡಾವುಡಿ ಮಾಡ್ತೀರೊ ಅನ್ನೋ ಯೋಚನೇಲಿ ನಮಗೂ ನಿಮ್ಮನ್ನ ಒಬ್ಬೊಬ್ರನ್ನೇ ಮನೇಲಿ ಬಿಟ್ಟು ಹೋಗಕ್ಕೆ ಆತಂಕ ಆಗ್ತಿತ್ತು. ಗಂಡ, ಗಂಟು ಎರಡೂ ಒಟ್ಟಿಗೇ ಇರುತ್ವೆ ಅಂದ್ರೆ ಸಲೀಸಲ್ವಾ?’ ನಕ್ಕರು ಪದ್ದಮ್ಮ.

‘ಗಂಡಸರಿಗೆ ಫ್ರೀ ಬಸ್ ಸೌಲಭ್ಯ ಕೊಟ್ರೆ ಕಾಶಿ, ರಾಮೇಶ್ವರಕ್ಕೇ ಕೊಡ್ಬೇಕು. ಲೋಕಲ್ಗೆ ಲಾಯಕ್ಕಲ್ಲ ನಾವು. ನಮ್ಮದು ನಿಶ್ಶಕ್ತಿ ಯೋಜನೆ!’ ಪರ್ಮೇಶಿ ಮುಖ ಹಿಂಡಿದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.