ಬೆಂಗಳೂರು: ಅದ್ಧೂರಿ ಸಿನಿಮಾಗಳಿಗೆ ಹೆಸರುವಾಸಿಯಾಗಿರುವ ಕನ್ನಡದ ಹೊಂಬಾಳೆ ಫಿಲ್ಮ್ಸ್ ಮತ್ತೊಂದು ವಿಶೇಷ ಸಿನಿಮಾಕ್ಕೆ ಅಣಿಯಾಗಿದೆ.

ಈ ಕುರಿತ ಪೋಸ್ಟರ್ ಒಂದನ್ನು ಇಂದು ಹಂಚಿಕೊಂಡಿದ್ದು ತೀವ್ರ ಕುತೂಹಲ ಮೂಡಿದೆ. ಈ ಸಾರಿ ಹೊಂಬಾಳೆ ಫ್ಯಾಂಟಸಿ ಆಧಾರಿತ ಸಿನಿಮಾ ಮಾಡುತ್ತಿದೆ.

ನಾಳೆ (ನ.16) ಮಧ್ಯಾಹ್ನ 3.33 ಕ್ಕೆ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ ಎಂದು ಹೇಳಿದೆ. ಇದಷ್ಟು ಹೊರತುಪಡಿಸಿ ಇನ್ನೂ ಹೆಚ್ಚಿನ ಮಾಹಿತಿಯನ್ನು ಹೊಂಬಾಳೆ ಫಿಲ್ಮ್ಸ್ ಬಿಟ್ಟು ಕೊಟ್ಟಿಲ್ಲ.

ಪ್ರಭಾಸ್–ಪ್ರಶಾಂತ್ ನೀಲ್ ಕಾಂಬಿನೇಷನ್ನ ಬಹುನಿರೀಕ್ಷಿತ ‘ಸಲಾರ್’ ಸಿನಿಮಾದ ಎರಡನೇ ಭಾಗ 2026ರಲ್ಲಿ ತೆರೆಕಾಣಲಿದೆ. ಇದರ ಜೊತೆಗೆ ನಟ ಪ್ರಭಾಸ್ ಅವರ ಇನ್ನೆರಡು ಸಿನಿಮಾಗಳನ್ನು ಹೊಂಬಾಳೆ ಫಿಲ್ಮ್ಸ್ನಿರ್ಮಾಣ ಮಾಡಲಿದೆ. ಈ ಎರಡೂ ಸಿನಿಮಾಗಳು ಕ್ರಮವಾಗಿ 2027 ಹಾಗೂ 2028ರಲ್ಲಿ ಬಿಡುಗಡೆಯಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.