ಕರಾಚಿ: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಅಂತಿಮ ವೇಳಾಪಟ್ಟಿಯನ್ನು ಐಸಿಸಿ ಇನ್ನೂ ಪ್ರಕಟಿಸಿಲ್ಲ. ಆದರೆ, ಈ ಮಧ್ಯೆ ಟ್ರೋಫಿ ಪಾಕಿಸ್ತಾನ ತಲುಪಿದ್ದು, ದೇಶದ ವಿವಿಧೆಡೆ ಅದರ ಪ್ರದರ್ಶನ ನಡೆಯಲಿದೆ.

ಉತ್ತರ ಪಾಕಿಸ್ತಾನದ ಸ್ಕರ್ಡುನಿಂದ ಇದೇ 16ರಂದು ಟ್ರೋಫಿ ಪ್ರವಾಸ ಪ್ರಾರಂಭವಾಗುತ್ತದೆ. ಪಂದ್ಯಗಳು ನಡೆಯಲಿರುವ ಪ್ರಮುಖ ನಗರಗಳಲ್ಲಿ ಟ್ರೋಫಿಯ ಪ್ರದರ್ಶನ ನಡೆಯಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಲಾಹೋರ್ನಲ್ಲಿ ಟ್ರೋಫಿಯನ್ನು ಅನಾವರಣಗೊಳ್ಳಬೇಕಿತ್ತು. ಬಿಸಿಸಿಐ, ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸುವುದಿಲ್ಲ ಎಂದು ಐಸಿಸಿಗೆ ತಿಳಿಸಿದ ನಂತರ ಸಮಾರಂಭವನ್ನು ಮುಂದೂಡಲಾಗಿತ್ತು.

ಹೈಬ್ರಿಡ್ ಮಾದರಿಯಲ್ಲಿ ಟೂರ್ನಿಯನ್ನು ಆಯೋಜಿಸುವ ಕುರಿತು ಐಸಿಸಿಯು ಪಿಸಿಬಿಯಿಂದ ಪ್ರತಿಕ್ರಿಯೆ ಕೋರಿದ ಬೆನ್ನಲ್ಲೇ ಟ್ರೋಫಿ ಯನ್ನು ಗುರುವಾರ ದುಬೈನಿಂದ ಇಸ್ಲಾಮಾಬಾದ್ಗೆ ತರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.