ಬೆಂಗಳೂರು: 'ನನ್ನ ಮಗನ 10 ವರ್ಷಗಳ ಕ್ರಿಕೆಟ್ ಜೀವನವನ್ನು ಮಹೇಂದ್ರ ಸಿಂಗ್ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಹಾಳು ಮಾಡಿದರು' ಎಂದು ಕ್ರಿಕೆಟಿಗ ಸಂಜು ಸ್ಯಾಮ್ಸನ್ ಅವರ ತಂದೆ ಸ್ಯಾಮ್ಸನ್ ವಿಶ್ವನಾಥನ್ ಆರೋಪಿಸಿದ್ದಾರೆ.

ಈ ಕುರಿತು ಮಲಯಾಳಂ ಖಾಸಗಿ ಮಾಧ್ಯಮಕ್ಕೆ ಸಂಜು ಅವರ ತಂದೆ ನೀಡಿರುವ ಸಂದರ್ಶನವನ್ನು ಉಲ್ಲೇಖಿಸಿ 'ಎನ್ಡಿಟಿವಿ' ವರದಿ ಮಾಡಿದೆ.

'ಮೂರು-ನಾಲ್ಕು ಮಂದಿ ನನ್ನ ಮಗನ 10 ವರ್ಷಗಳ ಕ್ರಿಕೆಟ್ ವೃತ್ತಿ ಜೀವನವನ್ನು ಹಾಳು ಮಾಡಿದರು. ಧೋನಿ, ವಿರಾಟ್, ರೋಹಿತ್ ಈ ಮೂವರು ನಾಯಕರು ಹಾಗೂ ಕೋಚ್ ದ್ರಾವಿಡ್ ನನ್ನ ಮಗನ 10 ಅಮೂಲ್ಯ ವರ್ಷಗಳನ್ನು ಹಾಳು ಮಾಡಿದರು' ಎಂದು ಸ್ಯಾಮ್ಸನ್ ವಿಶ್ವನಾಥನ್ ಗಂಭೀರವಾದ ಆರೋಪ ಮಾಡಿದ್ದಾರೆ.

ಅದೇ ವೇಳೆ ಸಂಜುಗೆ ಬೆಂಬಲ ನೀಡಿರುವ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಕೋಚ್ ಗೌತಮ್ ಗಂಭೀರ್ ಅವರಿಗೆ ಸ್ಯಾಮ್ಸನ್ ವಿಶ್ವನಾಥನ್ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಸಂಜು ಸ್ಯಾಮ್ಸನ್, ಟ್ವೆಂಟಿ-20 ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಸತತ ಎರಡು ಶತಕಗಳನ್ನು ಗಳಿಸಿದ ಭಾರತದ ಮೊದಲ ಬ್ಯಾಟರ್ ಎನಿಸಿದ್ದರು. ಆದರೆ ಬಳಿಕದ ಎರಡೂ ಪಂದ್ಯಗಳಲ್ಲಿ ಶೂನ್ಯಕ್ಕೆ ಔಟ್ ಆಗಿದ್ದರು. ಅಲ್ಲದೆ ಪ್ರಸಕ್ತ ಸಾಲಿನಲ್ಲಿ ಐದನೇ ಸಲ ಸೊನ್ನೆ ಸುತ್ತಿದ್ದರು.

ಆ ಮೂಲಕ ಒಂದೇ ವರ್ಷದಲ್ಲಿ ಎರಡು ಶತಕ ಹಾಗೂ ಐದು ಬಾರಿ ಶೂನ್ಯಕ್ಕೆ ಔಟ್ ಆದ ಅಪಖ್ಯಾತಿಗೆ ಒಳಗಾಗಿದ್ದಾರೆ.
.2024ರಲ್ಲಿ 8ನೇ ಸಲ 200+ ರನ್, ದಾಖಲೆ ಬರೆದ ಭಾರತ; 5ನೇ ಸಲ ಸೊನ್ನೆ ಸುತ್ತಿದ ಸಂಜು.IND vs SA: ಚೊಚ್ಚಲ ಶತಕದ ಹಿಂದಿನ ರಹಸ್ಯ ಬಯಲು ಮಾಡಿದ ತಿಲಕ್ ವರ್ಮಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.