ನೊಯ್ಡಾ: ತೀವ್ರ ಕುತೂಹಲ ಕೆರಳಿಸಿದ ಗುಜರಾತ್ ಜೈಂಟ್ಸ್ ಮತ್ತು ದಬಾಂಗ್ ಡೆಲ್ಲಿ ನಡುವಣ ಪ್ರೊ ಕಬಡ್ಡಿ ಲೀಗ್ ಪಂದ್ಯ 39–39 ರಲ್ಲಿ ಬುಧವಾರ ರೋಚಕ ಟೈನೊಂದಿಗೆ ಅಂತ್ಯ ಕಂಡಿತು. ಉಭಯ ತಂಡಗಳು ತಲಾ ಮೂರು ಅಂಕ ಪಡೆದವು.

ನೊಯ್ಡಾ ಒಳಾಂಗಣ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಈ ಪಂದ್ಯದ ಕೊನೆಯ ನಿಮಿಷ ಅಶು ಮಲಿಕ್ ಡೆಲ್ಲಿ ತಂಡಕ್ಕೆ ಬೋನಸ್ ಅಂಕ ತಂದರಾದರೂ ಜಿತೇಂದರ್ ಯಾದವ್ ಅವರ ಟ್ಯಾಕಲ್ನಲ್ಲಿ ಬಂದಿಯಾದರು. ಹೀಗಾಗಿ ಉಭಯ ತಂಡಗಳು ತಲಾ ಒಂದು ಅಂಕ ಗಳಿಸಿ ಪಂದ್ಯ ಸಮಬಲದಲ್ಲಿ ಕೊನೆಗೊಂಡಿತು.

ಜೈಂಟ್ಸ್ ಪರ ಪ್ರತೀಕ್ ದಹಿಯಾ 20 ಅಂಕಗಳನ್ನು ಕಲೆಹಾಕಿದರು. ದಬಾಂಗ್ ಡೆಲ್ಲಿ ತಂಡದ ಪರ ಅಶು ಮಲಿಕ್ (11 ಅಂಕ) ಸೂಪರ್ ಟೆನ್ ಸಾಹಸ ಮಾಡಿದರೆ, ನವೀನ್ ಕುಮಾರ್ 9 ಅಂಕಗಳನ್ನು ಕಲೆಹಾಕಿದರು.

ದಿನದ ಎರಡನೇ ಪಂದ್ಯದಲ್ಲಿ ತೆಲುಗು ಟೈಟನ್ಸ್ 31–29 ಪಾಯಿಂಟ್ಗಳಿಂದ ಯು–ಮುಂಬಾ ತಂಡವನ್ನು ಮಣಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.