ಕಲಬುರಗಿ: ತಮಿಳುನಾಡಿನ ಆಟಗಾರ ಪ್ರಣವ್ ಕಾರ್ತಿಕ್ ಅವರು ಪಂದ್ಯದಲ್ಲಿ ಸೋತರೂ ಪ್ರೇಕ್ಷಕರ ಮನಗೆದ್ದರು. ‘ಅದ್ಭುತ ಆಟ’ ಎಂದು ಪ್ರೇಕ್ಷಕರು ಉದ್ಗಾರ ತೆಗೆದರು.

ಬುಧವಾರ ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಪುರುಷರ ಐಟಿಎಫ್ ಟೆನಿಸ್ ಟೂರ್ನಿಯಲ್ಲಿ ಪ್ರಣವ್ ಕಾರ್ತಿಕ್ ಅವರು, ಅಮೆರಿಕದ ನಿಕ್ ಚಾಪೆಲ್ ವಿರುದ್ಧ 2 ತಾಸು 21 ನಿಮಿಷಗಳ ಕಾಲ ಹೋರಾಟ ನಡೆಸಿದರು. ಪಂದ್ಯದಲ್ಲಿ ತಮ್ಮ ಕೌಶಲ ಮೆರೆದ ಪ್ರಣವ್, ಪ್ರೇಕ್ಷಕರಿಗೆ ಟೆನಿಸ್ ಆಟದ ರಸದೌತಣ ಬಡಿಸಿದರು. ಪ್ರಣವ್ ಅವರ, ಫೋರ್ಹ್ಯಾಂಡ್ ಮತ್ತು ಬ್ಯಾಕ್ಹ್ಯಾಂಡ್ ರಿವರ್ಸ್ಗಳಿಗೆ ಚಾಪೆಲ್ ಅವರಲ್ಲಿ ಉತ್ತರವೇ ಇರಲಿಲ್ಲ. ಎದುರಾಳಿಯನ್ನು ಮೈಮರೆಸುವ ಕಲೆಯನ್ನು ಕರಗತ ಮಾಡಿಕೊಂಡಿರುವ ಅವರು, ಒಂದು ಹಂತದಲ್ಲಿ ಎದುರಾಳಿ ಚಾಪೆಲ್ ಎದೆಯಲ್ಲಿ ಸೋಲಿನ ಭೀತಿ ಹುಟ್ಟಿಸಿದ್ದರು.

ಚಾಪೆಲ್ಗೆ ಮೊದಲ ಗೇಮ್ ಬಿಟ್ಟುಕೊಟ್ಟ ಪ್ರಣವ್, ನಂತರದ ಮೂರು ಗೇಮ್ಗಳನ್ನು ತಮ್ಮದಾಗಿಸಿಕೊಂಡು 3–1ರಿಂದ ಮುನ್ನಡೆ ಪಡೆದು, ಮೊದಲ ಸೆಟ್ ಅನ್ನು ತಮ್ಮದಾಗಿಸಿಕೊಂಡರು. ಚಾಪೆಲ್, ಎರಡನೇ ಸೆಟ್ನಲ್ಲಿ ಪ್ರಾಬಲ್ಯ ಮೆರೆದು ಸಮಬಲ ಸಾಧಿಸಿದರು. ನಿರ್ಣಾಯಕ ಸೆಟ್ನ ಆರಂಭದಲ್ಲಿ 2 ಗೇಮ್ಗಳಿಂದ ಮುನ್ನಡೆಯಲ್ಲಿದ್ದ ಪ್ರಣವ್ ಅವರ ಸ್ವಯಂಕೃತ ತಪ್ಪುಗಳಿಂದಾಗಿ ಎದುರಾಳಿಯು ಸಮಬಲ ಸಾಧಿಸುವಂತಾಯಿತು. ಅಂತಿಮ ಸೆಟ್ನಲ್ಲೂ ಮೇಲುಗೈ ಸಾಧಿಸಿದ ಚಾಪೆಲ್ ಅವರು ಪಂದ್ಯವನ್ನು 5–7, 6–3, 6–2ರಿಂದ ತಮ್ಮದಾಗಿಸಿಕೊಂಡರು. ಪ್ರಣವ್ ಸೋತರೂ ಪ್ರೇಕ್ಷಕರ ಮನಗೆದ್ದರು. 2ನೇ ಸುತ್ತಿನಲ್ಲಿ ಚಾಪೆಲ್ ಅವರು, ಅಂಥೋನಿ ಸುಸಾಂತೊ ಅವರನ್ನು ಎದುರಿಸಲಿದ್ದಾರೆ.

ಪ್ರಜ್ವಲ್ ದೇವ್ಗೆ ಬಾಬ್ರೋವ್ ಸವಾಲು: ಮೈಸೂರಿನ ಹುಡುಗ ಎಸ್.ಡಿ. ಪ್ರಜ್ವಲ್ ದೇವ್ ಅವರು, ಜಪಾನಿನ ಕಜುಕಿ ನಿಶಿವಾಕಿ ವಿರುದ್ಧ 6–2, 6–3ರ ನೇರ ಸೆಟ್ಗಳ ಅಂತರದಿಂದ ಗೆಲುವು ಸಾಧಿಸಿದರು.

ಮಿಂಚಿನ ಸರ್ವ್ ಹಾಗೂ ಬ್ಯಾಕ್ಹ್ಯಾಂಡ್ ಹೊಡೆತಗಳ ಮೂಲಕ ಆರಂಭದಿಂದಲೇ ಮುನ್ನಡೆ ಸಾಧಿಸಿದ ಪ್ರಜ್ವಲ್ ದೇವ್, ಮೊದಲ ಸೆಟ್ ಅನ್ನು ತಮ್ಮದಾಗಿಸಿಕೊಂಡರು. ಎರಡನೇ ಸೆಟ್ನಲ್ಲೂ ತಮ್ಮ ಎದುರಾಳಿ ಮೇಲೆ ಹಿಡಿತ ಸಾಧಿಸಿ, ಪಂದ್ಯವನ್ನು ತಮ್ಮದಾಗಿಸಿಕೊಂಡರು. 2ನೇ ಸುತ್ತಿನಲ್ಲಿ ಅವರು, 2ನೇ ಶ್ರೇಯಾಂಕಿತ ರಷ್ಯಾದ ಬಾಗ್ದಾನ್ ಬಾಬ್ರೋವ್ ಅವರನ್ನು ಎದುರಿಸಲಿದ್ದಾರೆ.

ಇನ್ನೊಂದು ಪಂದ್ಯದಲ್ಲಿ ಭಾರತದ ಆರ್ಯನ್ ಷಾ ಅವರು, ಕಬೀರ್ ಹನ್ಸ್ ಅವರನ್ನು 7–6, 2–6, 6–2ರಿಂದ ಪರಾಭವಗೊಳಿಸುವ ಮೂಲಕ 2ನೇ ಸುತ್ತಿಗೆ ಪ್ರವೇಶಿಸಿದರು. ಅಲ್ಲಿ ಅವರು ಮನೀಶ್ ಸುರೇಶ ಕುಮಾರ್ ಸವಾಲನ್ನು ಎದುರಿಸಲಿದ್ದಾರೆ.

ಕಳಪೆ ಅಂಪೈರಿಂಗ್: ಅಸಮಾಧಾನ

ಪಂದ್ಯದ ವೇಳೆ ತೋರಿದ ಕಳಪೆ ಅಂಪೈರಿಂಗ್ ವಿರುದ್ಧ ಹಲವು ಆಟಗಾರರು ಸೇರಿದಂತೆ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು. ಮಂಗಳವಾರವಷ್ಟೇ ಕೊರಿಯಾದ ಯುನ್ಸೆಕ್ ಜಾಂಗ್ ಅವರು ಅಂಪೈರಿಂಗ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಪಂದ್ಯದಿಂದ ವಾಕೌಟ್ ಮಾಡಿದ್ದರು. ಬುಧವಾರವೂ ಆಟಗಾರರ ಅಸಮಾಧಾನ ಮುಂದುವರಿಯಿತು. ಭಾರತದ ವಿಷ್ಣುವರ್ಧನ್ ಅವರು ಅಂಪೈರಿಂಗ್ ಕುರಿತು ಅಸಮಾಧಾನ ವ್ಯಕ್ತಪಡಿಸಿ ಮೂರು ಸರ್ವ್ಗಳನ್ನು ಅಂಗಳದಿಂದ ಆಚೆ ಬಾರಿಸಿ ಎದುರಾಳಿಗೆ ಒಂದು ಗೇಮ್ ಬಿಟ್ಟುಕೊಟ್ಟು ಅಸಮಾಧಾನ ವ್ಯಕ್ತಪಡಿಸಿದರು. ಇನ್ನೊಂದು ಪಂದ್ಯದಲ್ಲಿ ಅಮೆರಿಕದ ನಿಕ್ ಚಾಪೆಲ್ ಕೂಡ ಎರಡು ಚೆಂಡುಗಳನ್ನು ಅಂಗಳದಿಂದ ಆಚೆಗೆ ಬಾರಿಸಿದರು. ಬೆಳಿಗ್ಗಿನ ಪಂದ್ಯದಲ್ಲಿ ರಿಷಿ ರೆಡ್ಡಿ ಕೂಡ ಅಂಪೈರಿಂಗ್ ಕುರಿತು ಆಕ್ಷೇಪ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.