ಬುಧವಾರ, 13 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಒಳನೋಟ: ದಾಂಪತ್ಯ ಸಾಂಗತ್ಯಗಳ ಸುತ್ತ

Published : 10 ನವೆಂಬರ್ 2024, 0:05 IST
Last Updated : 10 ನವೆಂಬರ್ 2024, 0:05 IST
ಫಾಲೋ ಮಾಡಿ
Comments
ಇದು ಮಾನಸಿಕತೆಗೆ ಸಂಬಂಧಿಸಿದ್ದಲ್ಲ
ಸಲಿಂಗ ಬಾಂಧವ್ಯಗಳಿಗೆ ಮಾನ್ಯತೆ ಸಿಗದು ಎಂಬ ಆತಂಕವೇ ಬಹುತೇಕರಲ್ಲಿ ಉದ್ವೇಗ, ಖಿನ್ನತೆಗೆ ಕಾರಣವಾಗಿರುತ್ತದೆ. ಬಹಳಷ್ಟು ಜನ ಮುಕ್ತವಾಗಿ ತಮ್ಮ ಲೈಂಗಿಕಾಸಕ್ತಿ ಅಥವಾ ಆಕರ್ಷಣೆಗಳ ಕುರಿತು ಮಾತಾಡುವುದೇ ಇಲ್ಲ. ಸಮಾಜದಿಂದ ತಿರಸ್ಕೃತರಾಗುವ ಮತ್ತು ಕುಟುಂಬದವರಿಂದ ಅವಹೇಳನಕ್ಕೆ ಒಳಗಾಗುವ ಆತಂಕ ಹೊಂದಿರುತ್ತಾರೆ. ಒಬ್ಬ ವ್ಯಕ್ತಿಗೆ ತನ್ನ ಲೈಂಗಿಕತೆಯ ಕುರಿತು ಯಾವ ವಯಸ್ಸಿನಲ್ಲಿಯಾದರೂ ಅರಿವು ಮೂಡಬಹುದು. ಪುರುಷನಿಗೆ ಪುರುಷನತ್ತಲೂ, ಸ್ತ್ರೀಗೆ ಸ್ತ್ರೀಯತ್ತಲೂ ಯಾವ ಕ್ಷಣದಲ್ಲಾದರೂ ಆಕರ್ಷಣೆ ಮೂಡಬಹುದು. ಇದು ಹೀಗೆಯೇ ಎಂದು ಹೇಳಲಾಗುವುದಿಲ್ಲ. ಆದರೆ ಒಂದಂತೂ ಸ್ಪಷ್ಟ, ಇದು ಮಾನಸಿಕ ಅಸ್ವಸ್ಥತೆಗೆ ಸಂಬಂಧಿಸಿದ್ದು ಅಲ್ಲವೇ ಅಲ್ಲ. ಆದರೆ ಸಾಮಾಜಿಕ ಚೌಕಟ್ಟಿನಲ್ಲಿ ಬದುಕುವ ಅನಿವಾರ್ಯದಿಂದಾಗಿ ತಮ್ಮ ಸಲಿಂಗ ಆಕರ್ಷಣೆಯನ್ನು ಮುಚ್ಚಿಟ್ಟಿರಬಹುದು. ಡಾ. ಅಲೋಕ್‌ ಕುಲಕರ್ಣಿ, ಮನೋ ಚಿಕಿತ್ಸಕ, ಹುಬ್ಬಳ್ಳಿ
ಈವರೆಗೂ ಆಗಿದ್ದೇನು?
ಬ್ಯಾಂಕುಗಳ ವಹಿವಾಟಿನಲ್ಲಿ ಪರ್ಯಾಯ ವ್ಯವಸ್ಥೆಯನ್ನು ಸೂಚಿಸಲಾಗಿದೆ. ಖಾತೆ ತೆಗೆಯುವಾಗಲೇ ಜಂಟಿ ಖಾತೆಯನ್ನು ತೆಗೆಯಬಹುದು. ಆಗ ಸಂಗಾತಿಯ ಸಾವಿನ ನಂತರ ಇನ್ನೊಬ್ಬರಿಗೆ ಆ ಖಾತೆಯ ಹಣ ಸಿಗುತ್ತಿತ್ತು. ಪಡಿತರ ಚೀಟಿಯಲ್ಲಿಯೂ ಕುಟುಂಬಕ್ಕೆ ಎಂದು ಮಾತ್ರ ನಮೂದಿಸಲು ತಿಳಿಸಲಾಗಿದೆ. ಕ್ವೀರ್‌ ಸಮುದಾಯದವರಿಗೆ ಯಾವುದೇ ರೀತಿಯಲ್ಲಿಯೂ ತರತಮವಾಗಬಾರದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸ್ಪಷ್ಟಪಡಿಸಿದೆ. ಇನ್ನು ಸಾಂಗತ್ಯದಲ್ಲಿರುವ ಎರಡು ಜೀವಗಳಿಗೆ ಲೈಂಗಿಕ ಅಲ್ಪಸಂಖ್ಯಾತರ ದರ್ಜೆಯನ್ನೇ ನೀಡಬೇಕು ಎಂದು ತಮಿಳುನಾಡು ಸರ್ಕಾರವು ಶಿಫಾರಸು ಮಾಡಿದೆ. ಆದರೆ ಅದಿನ್ನೂ ಕಾಯ್ದೆಯಾಗಿ ಜಾರಿಯಾಗಿಲ್ಲ.
ಸಲಿಂಗ ಮದುವೆಗೆ 36 ದೇಶಗಳಲ್ಲಿ ಮಾನ್ಯತೆ
ಇಂಥ ಬಾಂದವ್ಯಗಳ ಕುರಿತು ಜಗತ್ತಿನಾದ್ಯಂತ ಪ್ರಗತಿ ಪರ ಧೋರಣೆಯನ್ನೇ ಹೊಂದಲಾಗಿದೆ. ಸಲಿಂಗ ಬಾಂಧವ್ಯ ಅಥವಾ ಒಟ್ಟಿಗೆ ಬದುಕಲು ಯುನೈಟೆಡ್‌ ಕಿಂಗ್ಡಮ್‌ನಲ್ಲಿ (ಯುಕೆ) ಸಲಿಂಗ ದಾಂಪತ್ಯಕ್ಕೆ 2013ರಲ್ಲಿ ಅವಕಾಶ ನೀಡಿದೆ. ಕೆನಡಾದಲ್ಲಿ 2005ರಲ್ಲಿಯೇ ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಲಾಗಿದೆ. ಆಸ್ಟ್ರೇಲಿಯಾ, ಆಸ್ಟ್ರಿಯಾ, ಬ್ರೆಜಿಲ್‌, ಬೆಲ್ಜಿಯಂ, ಕೆನಡಾ, ಕೊಸ್ಟರಿಕಾ, ಫಿನ್ಲೆಂಡ್‌, ಕೊಲಂಬಿಯಾ, ಡೆನ್ಮಾರ್ಕ್, ಫ್ರಾನ್ಸ್‌, ಜರ್ಮನಿ, ಗ್ರೀಕ್‌, ಐರ್ಲೆಂಡ್‌, ಮೆಕ್ಸಿಕೊ, ನ್ಯೂಜಿಲೆಂಡ್‌, ನಾರ್ವೆ, ಪೋರ್ಚುಗಲ್‌ ಮುಂತಾದ ವಿಶ್ವದಾದ್ಯಂತ ಒಟ್ಟು 36 ರಾಷ್ಟ್ರಗಳಲ್ಲಿ ಕ್ವೀರ್‌ ಸಮುದಾಯದ ಮದುವೆಗಳಿಗೆ ಮಾನ್ಯತೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT