ದಿನ ಭವಿಷ್ಯ: ಈ ರಾಶಿಯವರು ಉಪಕಾರ ಮಾಡದಿದ್ದರೂ ಕೆಡುಕು ಬಯಸದಿರಿ
Published 20 ನವೆಂಬರ್ 2024, 20:11 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ವ್ಯವಹಾರಗಳನ್ನು ಸರಿಯಾದ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳಲು ಈ ದಿನ ಪ್ರಯತ್ನ ಪಡುವುದು ಒಳ್ಳೆಯದು. ಬುದ್ಧಿಕೌಶಲ್ಯದಿಂದ ಕಾರ್ಯಕ್ಷೇತ್ರದಲ್ಲಿ ಮುನ್ನಡೆಯನ್ನು ಸಾಧಿಸಿ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣುವಿರಿ.
ವೃಷಭ
ಸಮಾನ ಮನಸ್ಕರಲ್ಲಿನ ಮಾತುಕತೆಗಳಿಂದ ಕೆಲಸ ಕಾರ್ಯಗಳು ಸುಗಮವಾಗುತ್ತವೆ. ಶಿಕ್ಷಕ ವೃತ್ತಿಯನ್ನು ಮಾಡುತ್ತಿರುವವರಿಗೆ ಅತ್ಯಂತ ಹೆಮ್ಮೆಯ ಸಂದರ್ಭವೊಂದು ಬರಲಿದೆ. ಆತ್ಮ ವಿಶ್ವಾಸವು ಹೆಚ್ಚುವುದು.
ಮಿಥುನ
ವೃತ್ತಿಯಲ್ಲಿ ಅನುಭವ ಹಾಗೂ ಪರಿಶ್ರಮ ಸೂಕ್ತ ಸಮಯದಲ್ಲಿ ಬೆಳಕಿಗೆ ಬಂದು ಉಪಯೋಗವಾಗುವುದು. ಅನೇಕ ದಿನಗಳಿಂದ ಕಾಡುತ್ತಿರುವ ಆರೋಗ್ಯ ಸಮಸ್ಯೆ ಉಪಶಮನವಾಗಲಿದೆ. ಮಾತಿನಲ್ಲಿ ವಿನಯ ಇರಲಿ.
ಕರ್ಕಾಟಕ
ಸಹವರ್ತಿಗಳು ಅವಿರೋಧ ಆಯ್ಕೆಗೆ ಒಲವು ತೋರಿದ್ದರಿಂದ ಸ್ಥಾನ ಗಳಿಸುವಿರಿ. ಮದುವೆಯ ಸಲುವಾಗಿ ವಸ್ತ್ರಾಭರಣದ ಖರೀದಿಯನ್ನು ನಡೆಸಬಹುದು. ಹೆಚ್ಚಿನ ಅಧ್ಯಯನಕ್ಕೆ ಇದು ಸಕಾಲ.
ಸಿಂಹ
ಗೊತ್ತಿಲ್ಲದ ವಿಷಯವನ್ನು ಗುರುಹಿರಿಯರ ಬಳಿಯಲ್ಲಿ ಕೇಳಿ ತಿಳಿಯುವುದು ಅಗೌರವವೆಂದು ಭಾವಿಸಬೇಡಿ. ವ್ಯವಹಾರದಲ್ಲಿ ಮಗನ ಸಹಾಯದಿಂದ ಅಭಿವೃದ್ಧಿ ಕಾಣುವಿರಿ.ಹಳೆ ಬಾಕಿ ಸಂದಾಯವಾಗುವುದು.
ಕನ್ಯಾ
ಮುಂದಾಲೋಚನೆ ಇಲ್ಲದೇ ಯಾರಿಗೂ ಯಾವುದೇ ತರಹದ ಭರವಸೆಯನ್ನೂ ನೀಡಬೇಡಿ. ಎಲ್ಲ ಕೆಲಸಗಳಲ್ಲೂ ಧೈರ್ಯದಿಂದ ಮುನ್ನಡೆ ಸಾಧಿಸುವಿರಿ. ಇತರರಿಗೆ ಉಪಕಾರ ಮಾಡದಿದ್ದರೂ ಕೆಡುಕು ಬಯಸದಿರಿ.
ತುಲಾ
ಕರಕುಶಲ ವಸ್ತು ತಯಾರಕರು ಉತ್ತಮ ಕೆಲಸಗಳಿಂದ ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ರಾಸಾಯನಿಕ ಪದಾರ್ಥಗಳ ವ್ಯಾಪಾರಸ್ಥರಿಗೆ ಅಧಿಕ ಲಾಭ ಬರುವುದು. ವಿವಾಹ ಅಪೇಕ್ಷಿಗಳಿಗೆ ಶುಭವಿರುತ್ತದೆ.
ವೃಶ್ಚಿಕ
ನೆರೆಯವರ ಸಹಕಾರ ಕೇಳುವ ಸಂದರ್ಭ ಬರಲಿದೆ. ಆದರೆ, ಸ್ವಯಂ ಸಾಮರ್ಥ್ಯದಿಂದ ಅವಕಾಶಗಳನ್ನು ಪಡೆದುಕೊಳ್ಳುವಿರಿ. ಆಟೋಮೊಬೈಲ್ಸ್ ಸಂಬಂಧಿತ ಕೆಲಸಗಾರರಿಗೆ ಹರ್ಷದಾಯಕ ದಿನ.
ಧನು
ಮಾನಸಿಕ ಒತ್ತಡ ಹೆಚ್ಚಿಸುವಂಥ ಕೆಲಸವನ್ನು ಮಾಡುವವರಿಗೆ ಸಹಾಯಕನ ಅವಶ್ಯಕತೆ, ಅನಿವಾರ್ಯತೆ ಹೆಚ್ಚುವುದು. ಈ ದಿನದ ಪರಿಸ್ಥಿತಿಗಳು ಸ್ವಲ್ಪ ಕಿರಿಕಿರಿ ಮೂಡಿಸಿದರೂ ಫಲಿತಾಂಶ ಸಕಾರಾತ್ಮಕವಾಗಿರುವುದು.
ಮಕರ
ಮಗಳ ಜೀವನದ ವಿಚಾರದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಬೇಕಾದ ಅನಿವಾರ್ಯತೆ ಉಂಟಾಗಲಿದೆ. ದುಡುಕು ನಿರ್ಧಾರಗಳಿಂದ ಮುಖಭಂಗ ವಾಗುವ ಲಕ್ಷಣಗಳಿವೆ. ಸಿವಿಲ್ ಎಂಜಿನಿಯರ್ಗಳಿಗೆ ಅವಕಾಶಗಳುಸಿಗುವುದು.
ಕುಂಭ
ನೂತನ ಕಾರ್ಯ ಅಥವಾ ಗೃಹ ನಿರ್ಮಾಣದಂತಹ ಕೆಲಸಗಳಿಗೆ ಕುಟುಂಬದಲ್ಲಿ ಚರ್ಚೆ ನಡೆಯುವುದು. ಅದಕ್ಕಾಗಿ ಹೆಚ್ಚು ಸಮಯ ವಿನಿಯೋಗಿಸುವಿರಿ. ಹೊಸ ಯೋಜನೆಗಳ ತಯಾರಿಗೆ ಒಳ್ಳೆಯ ಸಮಯ.
ಮೀನ
ಹಿಂದೆ ನಡೆದಿರುವ ವಿಚಾರದ ಬಗೆಗಿನ ಯೋಚನೆಗಿಂತ ಲಭ್ಯವಿರುವ ಅವಕಾಶಗಳ ಬಗ್ಗೆ ಯೋಚಿಸುವುದು ಉತ್ತಮ. ಪಾಲುದಾರಿಕೆಯಲ್ಲಿ ಒಮ್ಮತ ಮೂಡದೆ ಹಿಂದೆ ಸರಿಯುವಂತೆ ಆಗಲಿದೆ.