‘ಮುಂಬೈಗೆ ಹೋಗೋಣ ನಡೀರಿ…’ ಹೊಸ ವರಸೆ ಶುರುವಿಟ್ಟುಕೊಂಡಳು ಹೆಂಡತಿ.

‘ಮುಂಬೈಗಾ! ಇದ್ದಕ್ಕಿದ್ದಂತೆ ಅಲ್ಲಿಗೇಕೆ?’ ಅಚ್ಚರಿಯಿಂದ ಕೇಳಿದೆ.

‘ಮಹಾರಾಷ್ಟ್ರದಲ್ಲಿ ಎಲೆಕ್ಷನ್ ನಡೀತಿಲ್ವೇನ್ರೀ, ಕೋಟಿ ಕೋಟಿ ರೂಪಾಯಿ ದುಡ್ಡು ಹಂಚ್ತಿದ್ದಾ ರಂತೆ, ನಾವೂ ಇಸ್ಕೊಂಡು ಬರೋಣ’.

‘ಅಲ್ಲಿ ನಮ್ಮದೂ ವೋಟ್ ಇರಬೇಕು, ಸುಮ್ ಸುಮ್ನೆ ದುಡ್ಡು ಕೊಡೋಕೆ ಅವರೇನು ಹುಚ್ಚರಾ?’

‘ಅಲ್ಲೇ ನಮ್ ರಿಲೇಶನ್ಸ್ ಮನೇಲಿ ಇರೋಣ. ಮನೆಯಲ್ಲಿರೋ ಮಂದೀನ ಎಣಿಸಿ, ತಲೆಗೆ ಇಷ್ಟಿಷ್ಟು ಕೊಡ್ತಾರಂತೆ. ದುಡ್ಡು ಇಸ್ಕೊಂಡು ಬಸ್ ಹತ್ತಿಬಿಡೋಣ. ನಾವು ವೋಟ್ ಹಾಕಿದೆವೋ ಇಲ್ಲವೋ ಅನ್ನೋದು ಅವರಿಗೇನ್ ಗೊತ್ತಾಗುತ್ತೆ’ ಹೊಸ ಐಡಿಯಾ ಏನೋ ಎಂಬಂತೆ ಹೇಳಿದಳು.

‘ಅಲ್ಲಿ ಆಗಲೇ ವೋಟಿಂಗ್ ಮುಗಿದಾಯ್ತು. ಹಾಗೇನಾದರೂ ದುಡ್ಡು ಬೇಕು ಅಂದರೆ
ಚನ್ನಪಟ್ಟಣಕ್ಕೆ ಹೋಗು ನೀನು’ ಎಂದೆ ನಗುತ್ತಾ.

‘ಚನ್ನಪಟ್ಟಣಕ್ಕಾ, ಅಲ್ಲಿ ಇನ್ನೂ ಎಲೆಕ್ಷನ್ ನಡೀತಿದೆಯಾ’ ಅಚ್ಚರಿಯಿಂದ ಕೇಳಿದಳು.

‘ಎಲೆಕ್ಷನ್ ನಡೀತಿಲ್ಲ, ಬೆಟ್ಟಿಂಗ್ ಜೋರಾಗಿ ನಡೀತಿದೆ’.

‘ಓಹ್ ಹೌದಾ! ಹೇಗಿದೆ ಟ್ರೆಂಡ್?’

‘ಒಂದು ಪಕ್ಷದ ಅಭ್ಯರ್ಥಿಯೇ ಈಗಾಗಲೇ ಸೋಲು ಕಂಡಂತೆ ಮಾತನಾಡಿದ್ರಿಂದ ಇನ್ನೊಬ್ಬ ಅಭ್ಯರ್ಥಿ ಕಡೆ ವಾಲ್ತಿದೆ. ಹಂಗಂದ್ಕೊಂಡು ಯಾವುದೇ ಅಭ್ಯರ್ಥಿ ಪರ ಅಥವಾ ವಿರುದ್ಧ ಬಾಜಿ ಕಟ್ಟಿದರೆ, ಇರೋ ದುಡ್ಡು, ಜಮೀನನ್ನು ಕಳ್ಕೊಳ್ಳೋದು ಗ್ಯಾರಂಟಿ ನೀನು’.

‘ಅಯ್ಯೋ, ಹಾಗಾದರೆ ಚನ್ನಪಟ್ಟಣದ ಸಹವಾಸ ಬೇಡಪ್ಪ. ಬೇರೆ ಮಾರ್ಗ ಯಾವುದಿದೆ ರೀ, ದಿಢೀರ್ ದುಡ್ಡು ಮಾಡೋದಕ್ಕೆ’.

‘ಮಂಡ್ಯ ಮಾರ್ಗ ಇದೆ ನೋಡು’.

‘ಮಂಡ್ಯ ಮಾರ್ಗವಾ, ಹಂಗಂದ್ರೆ?’

‘ಅಲ್ಲಿ ನಡೆಯಲಿರೋ ಸಾಹಿತ್ಯ ಸಮ್ಮೇಳನದಲ್ಲಿ ಫ್ಲೆಕ್ಸ್, ಬ್ಯಾನರ್ ಹಾಕೋ ಆರ್ಡರ್ ತಗೊ. ಅದೊಂದೇ ಈಗ ದೊಡ್ಡ ಈವೆಂಟ್’.

‘ಕನ್ನಡ ಪುಸ್ತಕ ಮಾರು ಅನ್ನೋದು ಬಿಟ್ಟು, ಫ್ಲೆಕ್ಸ್, ಬ್ಯಾನರ್ ಹಾಕು ಅಂತೀರಲ್ರೀ’.

‘ಅಲ್ಲಿ ಪುಸ್ತಕಕ್ಕಿಂತ ಬ್ಯಾನರ್ಗೇ ಬೇಡಿಕೆ ಜಾಸ್ತಿ ಈಗ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.