ನವದೆಹಲಿ: ಐಪಿಎಲ್ ಮೆಗಾ ಹರಾಜಿನಲ್ಲಿ ಮೊಹಮ್ಮದ್ ಶಮಿ ಅವರ ಬಿಡ್ ಮೌಲ್ಯ ಕಡಿಮೆಯಾಗಬಹುದು ಎಂದು ಮಾಜಿ ಆಟಗಾರ– ವೀಕ್ಷಕ ವಿವರಣೆಗಾರ ಸಂಜಯ್ ಮಾಂಜ್ರೇಕರ್ ಭವಿಷ್ಯ ನುಡಿದಿರುವುದಕ್ಕೆ ಗರಂ ಆದ ವೇಗದ ಬೌಲರ್ ಜಾಲತಾಣದ ಮೂಲಕ ಜೋರಾಗಿಯೇ ತಿವಿದಿದ್ದಾರೆ.

‘ಬಾಬಾ ಕಿ ಜೈ ಹೋ. ಸಂಜಯ್ ಜಿ, ನಿಮ್ಮ ಭವಿಷ್ಯಕ್ಕಾಗಿಯಾದರೂ ಸ್ವಲ್ಪ ಜ್ಞಾನ ಉಳಿಸಿ. ಮುಂದೆ ಕೆಲಸಕ್ಕೆ ಬರಬಹುದು. ಯಾರಿಗಾದರೂ ತಮ್ಮ ಭವಿಷ್ಯ ತಿಳಿಯಲು ಆಸಕ್ತಿಯಿದ್ದಲ್ಲಿ ಸರ್ ಅವರನ್ನು ಭೇಟಿ ಮಾಡಿ’ ಎಂದು ಇನ್ಸ್ಟಾದಲ್ಲಿ ಲೇವಡಿ ಮಾಡಿದ್ದಾರೆ.

2022ರ ಆವೃತ್ತಿಯಲ್ಲಿ ಕೊನೆಯ ಬಾರಿ ಗುಜರಾತ್ ಟೈಟನ್ಸ್ಗೆ ಆಡಿದಾಗ ಶಮಿ 20 ವಿಕೆಟ್ ಪಡೆದಿದ್ದರು.

2023ರ ನವೆಂಬರ್ನಲ್ಲಿ ಏಕದಿನ ವಿಶ್ವಕಪ್ ವೇಳೆ ಶಮಿ ಪಾದದ ನೋವಿನಿಂದ ಬಳಲಿದ್ದರು. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಅವರು ಕ್ರಿಕೆಟ್ನಿಂದ ದೂರವಿದ್ದರು. ಇತ್ತೀಚೆಗೆ ಬಂಗಾಳ ಪರ ರಣಜಿ ಟ್ರೋಫಿ ಪಂದ್ಯದ ಮೂಲಕ ಪುನರಾಗಮನ ಮಾಡಿದ್ದಾರೆ. ಗುಜರಾತ್ ಟೈಟನ್ಸ್ ತಂಡದಲ್ಲಿದ್ದ ಶಮಿ ಅವರನ್ನು ಆ ಫ್ರಾಂಚೈಸಿ ಈ ಬಾರಿ ರೀಟೈನ್ ಮಾಡಿಲ್ಲ. ಜೆದ್ದಾದಲ್ಲಿ 24–25ರಂದು ನಡೆಯಲಿರುವ ಮೆಗಾ ಆಕ್ಷನ್ನಲ್ಲಿ ಅವರು ₹2 ಕೋಟಿ ಮೂಲ ಬೆಲೆ ಹೊಂದಿದ್ದಾರೆ.

‘ತಂಡಗಳಲ್ಲಿ ಶಮಿ ಬಗ್ಗೆ ಆಸಕ್ತಿಯಿದೆ. ಆದರೆ ಅವರ ಗಾಯಾದ ಇತಿಹಾಸ– ಚೇತರಿಸಿಕೊಳ್ಳಲು ತೆಗೆದುಕೊಂಡ ಸಮಯ– ಇವೆಲ್ಲಾ ನೋಡಿದರೆ ಅವರು ಋತುವಿನಲ್ಲಿ ಮತ್ತೊಮ್ಮೆ ಗಾಯಾಳಾಗುವ ಕಳವಳವಿದೆ. ಅವರ ಮೇಲೆ ಫ್ರಾಂಚೈಸಿ ದೊಡ್ಡ ಮೊತ್ತ ತೊಡಗಿಸಿ, ಅವರು ಅರ್ಧದಲ್ಲೇ ಹಿಂದೆಸರಿದರೆ ತಂಡದ ಮುಂದಿನ ಆಯ್ಕೆ ಸೀಮಿತಗೊಳ್ಳಲಿದೆ. ಇವೆಲ್ಲ ಕಾರಣದಿಂದ ಅವರ ಮೌಲ್ಯ ಇಳಿಯಬಹುದು’ ಎಂದು ಮಾಂಜ್ರೇಕರ್ ಸ್ಟಾರ್ಸ್ಪೋರ್ಟ್ಸ್ ವಾಹಿನಿಗೆ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.