ಶೆನ್ಝೆನ್ (ಚೀನಾ): ಭಾರತದ ಯುವ ತಾರೆ ಲಕ್ಷ್ಯ ಸೇನ್ ಅವರು ಚೀನಾ ಮಾಸ್ಟರ್ಸ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಗುರುವಾರ ಕ್ವಾರ್ಟರ್ ಫೈನಲ್ಗೆ ಲಗ್ಗೆ ಹಾಕಿದರು. ಆದರೆ, ಅನುಭವಿ ಆಟಗಾರ್ತಿ ಪಿ.ವಿ. ಸಿಂಧು ಎರಡನೇ ಸುತ್ತಿನಲ್ಲಿ ಹೊರಬಿದ್ದರು.

23 ವರ್ಷ ವಯಸ್ಸಿನ ಸೇನ್ ಪುರುಷರ ಸಿಂಗಲ್ಸ್ನ ಎರಡನೇ ಸುತ್ತಿನ ಪಂದ್ಯದಲ್ಲಿ 21-6, 21-18ರಿಂದ ಡೆನ್ಮಾರ್ಕ್ನ ರಾಸ್ಮಸ್ ಗೆಮ್ಕೆ ಅವರನ್ನು ಹಿಮ್ಮೆಟ್ಟಿಸಿದರು. ಸೇನ್ ಮುಂದಿನ ಸುತ್ತಿನಲ್ಲಿ ಮೂರನೇ ಶ್ರೇಯಾಂಕದ ಆಂಡರ್ಸ್ ಆಂಟೊನ್ಸೆನ್ (ಡೆನ್ಮಾರ್ಕ್) ಅವರನ್ನು ಎದುರಿಸಲಿದ್ದಾರೆ. ಆಂಡರ್ಸ್ ಎರಡನೇ ಸುತ್ತಿನಲ್ಲಿ 21-15, 21-18ರಿಂದ ಜಪಾನಿನ ಟಕುಮಾ ಒಬಯಾಶಿ ಅವರನ್ನು ಮಣಿಸಿದರು.

ವಿಶ್ವದ 19ನೇ ರ್ಯಾಂಕ್ನ ಸಿಂಧು, ಮಹಿಳೆಯರ ಸಿಂಗಲ್ಸ್ನಲ್ಲಿ ನಿರಾಸೆ ಅನುಭವಿಸಿದರು. ಮೊದಲ ಸುತ್ತಿನಲ್ಲಿ ತಮಗಿಂತ ಮೇಲಿನ ಕ್ರಮಾಂಕದ ಬುಸಾನನ್ ಒಂಗ್ಬಾಮ್ರುಂಗ್ಫಾನ್ ಅವರನ್ನು ಸೋಲಿಸಿದ್ದ 29 ವರ್ಷದ ಸಿಂಧು, ಪ್ರಿ ಕ್ವಾರ್ಟರ್ ಫೈನಲ್ನಲ್ಲಿ 16-21, 21-17, 21-23ರಿಂದ ಸಿಂಗಪುರದ ಯೋ ಜಿಯಾ ಮಿನ್ ಅವರಿಗೆ ಶರಣಾದರು.

ಭಾರತದ ಯುವ ಆಟಗಾರ್ತಿಯರಾದ ಅನುಪಮಾ ಉಪಾಧ್ಯಾಯ ಮತ್ತು ಮಾಳವಿಕಾ ಬನ್ಸೋಡ್ ಅವರೂ ಎರಡನೇ ಸುತ್ತಿನಲ್ಲಿ ನಿರ್ಗಮಿಸಿದರು. ಅನುಪಮಾ 7-21, 14-21ರಿಂದ ಜಪಾನ್ನ ನಟ್ಸುಕಿ ನಿಡೈರಾ ಅವರಿಗೆ ಮಣಿದರೆ, ಮಾಳವಿಕಾ 9-21, 9-21ರಿಂದ ಎಂಟನೇ ಶ್ರೇಯಾಂಕದ ಸುಪಾನಿಡಾ ಕಟೆಥಾಂಗ್ (ಥಾಯ್ಲೆಂಡ್) ಅವರಿಗೆ ಶರಣಾದರು.

ಮಹಿಳೆಯರ ಡಬಲ್ಸ್ನಲ್ಲಿ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿಯು ಎರಡನೇ ಶ್ರೇಯಾಂಕದ ಚೀನಾದ ಆಟಗಾರ್ತಿಯರಿಗೆ ಹೆಚ್ಚಿನ ಪೈಪೋಟಿ ನೀಡದೆ ಹೊರಬಿದ್ದಿತು. 28ನೇ ಕ್ರಮಾಂಕದ ಭಾರತದ ಆಟಗಾರ್ತಿಯರು 16-21, 11-21ರಿಂದ ಸೋತರು.

ಸಾತ್ವಿಕ್– ಚಿರಾಗ್ ಮುನ್ನಡೆ: ಹಾಲಿ ಚಾಂಪಿಯನ್ ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಪುರುಷರ ಡಬಲ್ಸ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಪ್ಯಾರಿಸ್ ಒಲಿಂಪಿಕ್ಸ್ ಬಳಿಕ ಸ್ಪರ್ಧಾ ಕಣಕ್ಕೆ ಇಳಿದಿರುವ ಅವರು ಎರಡನೇ ಸುತ್ತಿನಲ್ಲಿ 21–19, 21–15ರಿಂದ ಡೆನ್ಮಾರ್ಕ್ನ ರಾಸ್ಮಸ್ ಕ್ಜೇರ್ ಮತ್ತು ಫ್ರೆಡೆರಿಕ್ ಸೊಗಾರ್ಡ್ ಅವರನ್ನು ಮಣಿಸಿದರು.

ಮುಂದಿನ ಸುತ್ತಿನಲ್ಲಿ ಅವರು ಎರಡನೇ ಶ್ರೇಯಾಂಕದ ಡೆನ್ಮಾರ್ಕ್ನ ಕಿಮ್ ಅಸ್ಟ್ರಪ್ ಮತ್ತು ಆಂಡರ್ಸ್ ಸ್ಕಾರಪ್ ರಾಸ್ಮುಸ್ಸೆನ್ ಅವರ ಸವಾಲನ್ನು ಎದುರಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.