ರೋಹ್ಟಕ್: ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಹರಿಯಾಣದ ವೇಗದ ಬೌಲರ್ ಅಂಶುಲ್ ಕಂಬೋಜ್ ಒಂದೇ ಇನಿಂಗ್ಸ್ನಲ್ಲಿ 10 ವಿಕೆಟ್ ಗಳಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ.

ಆ ಮೂಲಕ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಭಾರತದ ಆರನೇ ಬೌಲರ್ ಎನಿಸಿದ್ದಾರೆ.

ಹಾಗೆಯೇ ರಣಜಿ ಟ್ರೋಫಿಯಲ್ಲಿ ಈ ವಿಶಿಷ್ಟ ಸಾಧನೆ ಮಾಡಿದ ಮೂರನೇ ಬೌಲರ್ ಆಗಿದ್ದಾರೆ.

ರೋಹ್ಟಕ್ನಲ್ಲಿ ಕೇರಳ ವಿರುದ್ಧ ನಡೆಯುತ್ತಿರುವ 'ಸಿ' ಗುಂಪಿನ ರಣಜಿ ಪಂದ್ಯದ ಮೂರನೇ ದಿನದಾಟದಲ್ಲಿ ಅಂಶುಲ್ 10 ವಿಕೆಟ್ ಗಳಿಸಿದ್ದಾರೆ.

30.1 ಓವರ್ಗಳಲ್ಲಿ 49 ರನ್ ತೆತ್ತು 10 ವಿಕೆಟ್ ಪಡೆದಿದ್ದಾರೆ. ಇದರಲ್ಲಿ ಒಂಬತ್ತು ಮೇಡನ್ ಓವರ್ಗಳು ಸೇರಿದ್ದವು.

ಪರಿಣಾಮ ಕೇರಳ ಮೊದಲ ಇನಿಂಗ್ಸ್ನಲ್ಲಿ 291 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿತು.

ರಣಜಿ ಟ್ರೋಫಿಯಲ್ಲಿ ಒಂದೇ ಇನಿಂಗ್ಸ್ನಲ್ಲಿ 10 ವಿಕೆಟ್ ಸಾಧಕರು:

1956ರಲ್ಲಿ ಬಂಗಾಳದ ಪ್ರೇಮಾಂಗ್ಶು ಚಟರ್ಜಿ (20 ರನ್ನಿಗೆ 10 ವಿಕೆಟ್), ಅಸ್ಸಾಂ ವಿರುದ್ಧ

1985ರಲ್ಲಿ ರಾಜಸ್ಥಾನದ ಪ್ರದೀಪ್ ಸುಂದರಂ (78 ರನ್ನಿಗೆ 10 ವಿಕೆಟ್), ವಿದರ್ಭ ವಿರುದ್ಧ

2024ರಲ್ಲಿ ಹರಿಯಾಣದ ಅಂಶುಲ್ ಕಂಬೋಜ್ (49 ರನ್ನಿಗೆ 10 ವಿಕೆಟ್), ಕೇರಳ ವಿರುದ್ಧ

ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ, ಸುಭಾಷ್ ಗುಪ್ಟೆ ಮತ್ತು ದೇಬಾಶಿಶ್ ಮೊಹಾಂತಿ ಒಂದೇ ಇನಿಂಗ್ಸ್ನಲ್ಲಿ ಎಲ್ಲ 10 ವಿಕೆಟ್ ಗಳಿಸಿದ ಭಾರತದ ಇತರೆ ಬೌಲರ್ಗಳಾಗಿದ್ದಾರೆ. ಈ ಪೈಕಿ ಅನಿಲ್ ಕುಂಬ್ಳೆ 1999ರಲ್ಲಿ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 10 ವಿಕೆಟ್ ಸಾಧನೆ ಮಾಡಿದ್ದರು. ಇನ್ನು 2000ನೇ ಇಸವಿಯಲ್ಲಿ ದುಲೀಪ್ ಟ್ರೋಫಿಯಲ್ಲಿ ಮೊಹಾಂತಿ 10 ವಿಕೆಟ್ ಗಳಿಸಿದ್ದರು.
.10 ವಿಕೆಟ್ ಪಡೆದ ಪಂದ್ಯದಲ್ಲಿ ಧರಿಸಿದ್ದ ‘ಟಿ–ಶರ್ಟ್’ ಹರಾಜಿಗಿಟ್ಟ ಎಜಾಜ್.2024ರಲ್ಲಿ 8ನೇ ಸಲ 200+ ರನ್, ದಾಖಲೆ ಬರೆದ ಭಾರತ; 5ನೇ ಸಲ ಸೊನ್ನೆ ಸುತ್ತಿದ ಸಂಜು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.