ಕಲಬುರಗಿ: ಭಾರತದ ಸಿದ್ಧಾಂತ್ ಬಾಂಥಿಯಾ–ವಿಷ್ಣುವರ್ಧನ್ ಹಾಗೂ ರಿಷಭ್ ಅಗರವಾಲ್–ಕಬೀರ್ ಹನ್ಸ್ ಜೋಡಿಗಳು, ಇಲ್ಲಿ ನಡೆಯುತ್ತಿರುವ ಪುರುಷರ ಐಟಿಎಫ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ನಲ್ಲಿ ಗೆಲುವು ಸಾಧಿಸುವ ಮೂಲಕ ಸೆಮಿಗೆ ಪ್ರವೇಶಿಸಿದರು.

ಗುರುವಾರ ನಡೆದ ಡಬಲ್ಸ್ ವಿಭಾಗದ ಪಂದ್ಯದಲ್ಲಿ ಭಾರತದ ಸಿದ್ಧಾಂತ್ ಬಾಂಥಿಯಾ–ವಿಷ್ಣುವರ್ಧನ್ ಜೋಡಿಯು ಇಂಡೋನೇಷ್ಯಾದ ಎಂ.ಆರ್. ಫಿತ್ರಿಯಾದಿ–ರಿಷಿ ರೆಡ್ಡಿ ಜೋಡಿಯನ್ನು 4–6, 6–2, 10–7ರಿಂದ ಮಣಿಸುವ ಮೂಲಕ ಸೆಮಿಫೈನಲ್ಗೆ ಪ್ರವೇಶಿಸಿತು. ಅಲ್ಲಿ ಈ ಜೋಡಿಯು ಅಗ್ರಶ್ರೇಯಾಂಕಿತ ರಷ್ಯಾದ ಅಗಾಫನೋವ್–ಬಾಬ್ರೋವ್ ಸವಾಲನ್ನು ಎದುರಿಸಲಿದೆ.

ರಷ್ಯಾದ ಜೋಡಿಯು ಕ್ವಾರ್ಟರ್ನಲ್ಲಿ ಆದಿತ್ಯ ಗಣೇಶನ್–ಆರ್ಯನ್ ಷಾ ಜೋಡಿಯನ್ನು 1–6, 7–6, 10–7ರಿಂದ ಪರಾಭವಗೊಳಿಸಿತ್ತು.

ಇನ್ನೊಂದು ಪಂದ್ಯದಲ್ಲಿ ಭಾರತದ ರಿಷಭ್ ಅಗರವಾಲ್–ಕಬೀರ್ ಹನ್ಸ್ ಜೋಡಿಯು ಪರೀಕ್ಷಿತ್ ಸೋಮಾನಿ–ಮನೀಶ್ ಸುರೇಶ್ಕುಮಾರ್ ಜೋಡಿಯನ್ನು 7–5, 6–3ರಿಂದ ಪರಾಭವಗೊಳಿಸುವ ಮೂಲಕ 4ರ ಘಟ್ಟಕ್ಕೆ ಲಗ್ಗೆಯಿಟ್ಟಿತು. ಸೆಮಿಯಲ್ಲಿ ಈ ಜೋಡಿಯು ಅಮೆರಿಕದ ನಿಕ್ ಚಾಪೆಲ್–ನಿತಿನ್ ಕುಮಾರ್ ಸಿನ್ಹಾ ಜೋಡಿಯನ್ನು ಎದುರಿಸಲಿದೆ. ಚಾಪೆಲ್–ನಿತಿನ್ ಜೋಡಿಯು ಕ್ವಾರ್ಟರ್ನಲ್ಲಿ ಯಶ್ ಚೌರಾಸಿಯಾ–ಕರಣ್ ಸಿಂಗ್ ಜೋಡಿಯನ್ನು 6–2, 7–5ರಿಂದ ಪರಾಭವಗೊಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.