ಪರ್ತ್: ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಪರ್ತ್ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಟೀಮ್ ಇಂಡಿಯಾ ಮೊದಲ ದಿನದಾಟದಲ್ಲೇ 49.4 ಓವರ್ಗಳಲ್ಲಿ 150 ರನ್ಗಳಿಗೆ ತನ್ನೆಲ್ಲ ವಿಕೆಟ್ಗಳನ್ನು ಕಳೆದುಕೊಂಡಿದೆ.

ಟಾಸ್ ಗೆದ್ದ ಟೀಮ್ ಇಂಡಿಯಾ ಉಸ್ತುವಾರಿ ನಾಯಕ ಜಸ್ಪ್ರೀತ್ ಬೂಮ್ರಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆದರೆ ತಂಡದ ಯೋಜನೆಗಳೆಲ್ಲ ತಲೆಕೆಳಗಾದವು.

ತಂಡದ ಪರ ನಿತೀಶ್ ಕುಮಾರ್ ರೆಡ್ಡಿ ಗರಿಷ್ಠ 41 ರನ್ ಗಳಿಸಿದರು. ರಿಷಭ್ ಪಂತ್ 37 ಹಾಗೂ ಕೆ.ಎಲ್. ರಾಹುಲ್ 26 ರನ್ ಗಳಿಸಿದರು. ವಿರಾಟ್ ಕೊಹ್ಲಿ, ದೇವದತ್ತ ಪಡಿಕ್ಕಲ್, ಧ್ರುವ್ ಜುರೇಲ್ ಹಾಗೂ ವಾಷಿಂಗ್ಟನ್ ಸುಂದರ್ ಸಹ ವೈಫಲ್ಯ ಅನುಭವಿಸಿದರು.

ಈ ಪೈಕಿ ಯಶಸ್ವಿ ಜೈಸ್ವಾಲ್ ಹಾಗೂ ದೇವದತ್ತ ಪಡಿಕ್ಕಲ್ ಖಾತೆ ತೆರೆಯುವಲ್ಲಿ ವಿಫಲರಾದರು. ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಐದು ರನ್ ಗಳಿಸಿ ಔಟ್ ಆದರು.

ಕೆ.ಎಲ್.ರಾಹುಲ್ ಸ್ವಲ್ಪ ಹೊತ್ತು ಪ್ರತಿರೋಧ ಒಡ್ಡಿದರೂ ಊಟದ ವಿರಾಮಕ್ಕೂ ಮೊದಲು ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಕೆ.ಎಲ್. ರಾಹುಲ್ 74 ಎಸೆತಗಳಲ್ಲಿ 26 ರನ್ ಗಳಿಸಿದರು.

ಚೊಚ್ಚಲ ಪಂದ್ಯ ಆಡುತ್ತಿರುವ ನಿತೀಶ್ 41 ರನ್ ಗಳಿಸಿದರು. ಇನ್ನುಳಿದಂತೆ ಧ್ರುವ್ ಜುರೇಲ್ 11, ವಾಷಿಂಗ್ಟನ್ ಸುಂದರ್ 4, ಹರ್ಷೀತ್ ರಾಣಾ 7 ಮತ್ತು ಜಸ್ಪ್ರೀತ್ ಬೂಮ್ರಾ 8 ರನ್ ಗಳಿಸಿ ನಿರ್ಗಮಿಸಿದರು.

ಆಸ್ಟ್ರೇಲಿಯಾದ ಪರ ಜೋಶ್ ಹ್ಯಾಜಲ್ವುಡ್ ನಾಲ್ಕು, ನಾಯಕ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಹಾಗೂ ಮಿಚೆಲ್ ಮಾರ್ಷ್ ತಲಾ ಎರಡು ವಿಕೆಟ್ಗಳನ್ನು ಹಂಚಿಕೊಂಡರು.
.ಕೊಹ್ಲಿ ಮತ್ತೆ ವೈಫಲ್ಯ, ಜೈಸ್ವಾಲ್-ದೇವದತ್ತ ಶೂನ್ಯ; ಅಶ್ವಿನ್, ಜಡೇಜಗೆ ಕೊಕ್.
ಭಾರತ ಬ್ಯಾಟಿಂಗ್; ನಿತೀಶ್,ಹರ್ಷೀತ್ ಪದಾರ್ಪಣೆ, ಪಡಿಕ್ಕಲ್ಗೆ ಸ್ಥಾನ

ಈ ಮೊದಲು ಟಾಸ್ ಗೆದ್ದ ಟೀಮ್ ಇಂಡಿಯಾದ ಉಸ್ತುವಾರಿ ನಾಯಕ ಜಸ್ಪ್ರೀತ್ ಬೂಮ್ರಾ ಮೊದಲು ಬ್ಯಾಟಿಂಗ್ ಆಯ್ದುಕೊಂಡರು.

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡವನ್ನು ಜಸ್ಪ್ರೀತ್ ಬೂಮ್ರಾ ಮುನ್ನಡೆಸುತ್ತಿದ್ದಾರೆ. ಭಾರತ ತಂಡದಲ್ಲಿ ಎರಡು ಹೊಸಮುಖಗಳಿದ್ದು, ನಿತೀಶ್ ಕುಮಾರ್ ರೆಡ್ಡಿ ಹಾಗೂ ಹರ್ಷೀತ್ ರಾಣಾ ಪದಾರ್ಪಣೆ ಮಾಡಿದ್ದಾರೆ.

ಗಾಯದ ಹಿನ್ನೆಲೆಯಲ್ಲಿ ಶುಭಮನ್ ಗಿಲ್ ಅವಕಾಶ ವಂಚಿತರಾಗಿದ್ದಾರೆ. ಕನ್ನಡಿಗರಾದ ಕೆ.ಎಲ್. ರಾಹುಲ್ ಹಾಗೂ ದೇವದತ್ತ ಪಡಿಕ್ಕಲ್ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.

ಆರ್.ಅಶ್ವಿನ್, ರವೀಂದ್ರ ಜಡೇಜ, ಸರ್ಫರಾಜ್ ಖಾನ್ ಮತ್ತು ಆಕಾಶ್ ದೀಪ್ ಅವರನ್ನು ಕೈಬಿಡಲಾಗಿದೆ.

ಭಾರತ ತಂಡ ಇಂತಿದೆ:

ಕೆ.ಎಲ್. ರಾಹುಲ್

ಯಶಸ್ವಿ ಜೈಸ್ವಾಲ್

ದೇವದತ್ತ ಪಡಿಕ್ಕಲ್

ವಿರಾಟ್ ಕೊಹ್ಲಿ,

ರಿಷಭ್ ಪಂತ್ (ವಿಕೆಟ್ ಕೀಪರ್),

ಧ್ರುವ್ ಜುರೇಲ್,

ವಾಷಿಂಗ್ಟನ್ ಸುಂದರ್,

ನಿತೀಶ್ ಕುಮಾರ್ ರೆಡ್ಡಿ,

ಹರ್ಷೀತ್ ರಾಣಾ,

ಜಸ್ಪ್ರೀತ್ ಬೂಮ್ರಾ (ನಾಯಕ)

ಮೊಹಮ್ಮದ್ ಸಿರಾಜ್

.IND vs AUS Test Series: ಬೂಮ್ರಾ ಪಡೆಗೆ ಕಠಿಣ ಸವಾಲು .IND vs AUS | ಮೊದಲ ಟೆಸ್ಟ್ಗೆ ಆಡುವ 11ರ ಬಳಗ ಅಂತಿಮಗೊಳಿಸಲಾಗಿದೆ: ಬೂಮ್ರಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.