ಭಾನುವಾರ, 7 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಕಿರು ನಾಟಕೋತ್ಸವ: 7 ನಾಟಕಗಳು ಆಯ್ಕೆ

Published 4 ಜುಲೈ 2024, 15:57 IST
Last Updated 4 ಜುಲೈ 2024, 15:57 IST
ಅಕ್ಷರ ಗಾತ್ರ

ಬೆಂಗಳೂರು: ಪ್ರವರ ಥಿಯೇಟರ್ ಮತ್ತು ಅಶ್ವಘೋಷ ಥಿಯೇಟರ್ ಟ್ರಸ್ಟ್ ಜಂಟಿಯಾಗಿ ಆಯೋಜಿಸಿದ್ದ ‘ಬೆಂಗಳೂರು ಕಿರು ನಾಟಕೋತ್ಸವ’ದ ಅಂತಿಮ ಹಂತಕ್ಕೆ ಏಳು ನಾಟಕಗಳು ಆಯ್ಕೆಯಾಗಿವೆ.

ಕಿರು ನಾಟಕೋತ್ಸವದ 2024ರ ಪ್ರಥಮ ಹಂತದ ಸ್ಪರ್ಧೆಯಲ್ಲಿ 15 ತಂಡಗಳು ಭಾಗವಹಿಸಿದ್ದವು. ಅವುಗಳಲ್ಲಿ ಕಲಾ ಕದಂಬ ಆರ್ಟ್‌ ಸೆಂಟರ್‌ನ ‘ಅದು’, ಧ್ವನಿ ತಂಡದ ‘ಹತ್ತು ನಾಲ್ಕು ಮೆಟ್ಟಿಲು’, ಹೆಜ್ಜೆ ಥಿಯೇಟರ್‌ನ ‘ನೀವಾ ಅಥವಾ ನಾವಾ’, ವೀಕೆಂಡ್ ಥಿಯೇಟರ್‌ನ ‘ರಾಮ ಇಸ್ ಈಕ್ವಲ್‌ ಟು ರಾಮ’, ಕಲಾರಾಧ್ಯ ತಂಡದ ‘ಸಮಾವಸರ’, ಸಮತಾರಂಗ ತಂಡದ ‘ಚವರಿ’ ಹಾಗೂ ಕಾಜಾಣ ತಂಡದ ‘ಅಲೆಮಾರಿ ಭಾರತ’ ನಾಟಕ ಅಂತಿಮ ಹಂತದ ಸ್ಪರ್ಧೆಗೆ ಆಯ್ಕೆಯಾಗಿವೆ.

ಅತ್ಯುತ್ತಮ ನಾಟಕ ಸೇರಿ ಎಂಟು ಪ್ರಶಸ್ತಿಗಳನ್ನು ಕಿರುನಾಟಕೋತ್ಸವ ಒಳಗೊಂಡಿದ್ದು, ₹2,500ರಿಂದ ₹10,000ದವರೆಗೆ ನಗದು ಬಹುಮಾನ ನೀಡಲಾಗುತ್ತದೆ.

ಜುಲೈ 13ರಂದು ಸಂಜೆ 5.45ರಿಂದ ಇಲ್ಲಿನ ಬಸವೇಶ್ವರನಗರದಲ್ಲಿ ಇರುವ ಕೆಇಎ ಪ್ರಭಾತ್ ರಂಗಮಂದಿರದಲ್ಲಿ ಅಂತಿಮ ಹಂತದ ಸ್ಪರ್ಧೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT