ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರೈತ–ಕಾರ್ಮಿಕ ಹಿತ ರಕ್ಷಣಾ ಸಮಿತಿ: ದುಂಡು ಮೇಜಿನ ಸಭೆ ಇಂದು

Published : 4 ಅಕ್ಟೋಬರ್ 2024, 23:35 IST
Last Updated : 4 ಅಕ್ಟೋಬರ್ 2024, 23:35 IST
ಫಾಲೋ ಮಾಡಿ
Comments

ಬೆಂಗಳೂರು: ರೈತ–ಕಾರ್ಮಿಕ ಹಿತ ರಕ್ಷಣಾ ಸಮಿತಿ ಮಲೆನಾಡು ವತಿಯಿಂದ ಅಕ್ಟೋಬರ್‌ 5ರಂದು (ಶನಿವಾರ) ಶಾಸಕರ ಭವನದಲ್ಲಿ ‘ಮಲೆನಾಡಿನ ಪ್ರಮುಖ ಬಿಕ್ಕಟ್ಟುಗಳು ಮತ್ತು ಪರಿಹಾರದ ಮಾರ್ಗೋಪಾಯಗಳು’ ಕುರಿತು ದುಂಡು ಮೇಜಿನ ಸಭೆ ನಡೆಯಲಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಸುಂದರೇಶ್ ಅತ್ತಿಕುಳಿ, ‘ಮಲೆನಾಡಿನ ಜನ ಸಾಗುವಳಿ ಮಾಡಿಕೊಂಡು ಬರುತ್ತಿರುವ ಜಮೀನುಗಳನ್ನು ಒತ್ತುವರಿಯ ಹಣೆಪಟ್ಟಿ ಕಟ್ಟಿ ತೆರವುಗೊಳಿಸಬಾರದು. ವೈಜ್ಞಾನಿಕ ಮಾನದಂಡಗಳನ್ನು ಹಕ್ಕು ಪತ್ರಗಳನ್ನು ವಿತರಿಸಬೇಕು. ಹಕ್ಕು ಪತ್ರಗಳ ವಿತರಣೆಗೆ ತಡೆಯಾಗಿರುವ ಅರಣ್ಯ ಕಾಯ್ದೆಗಳಿಗೆ ತಿದ್ದುಪಡಿ ಮಾಡಬೇಕು’ ಎಂದು ಆಗ್ರಹಿಸಿದರು. ‘ಅರಣ್ಯ ಕಾಯ್ದೆಗಳು, ಭೂಮಿತಿ ಕಾಯ್ದೆಗಳು ಇವೆಲ್ಲವುಗಳನ್ನು ಸಮಗ್ರವಾಗಿ ಅಧ್ಯಯನ ಮಾಡಲು ಸ್ಥಳೀಯ ಜನಪ್ರತಿನಿಧಿಗಳು, ಮಲೆನಾಡಿನ ಪರಿಸರ ತಜ್ಞರು, ಜನರನ್ನು ಒಳಗೊಂಡ ಒಂದು ಸಮಿತಿ ರಚಿಸಬೇಕು. ಭೌಗೋಳಿಕ ಪ್ರದೇಶ ಹಾಗೂ ಅತಿವೃಷ್ಟಿ, ಅನಾವೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ತಜ್ಞರ ಸಮಿತಿ ರಚಿಸಬೇಕೆಂದು ದುಂಡು ಮೇಜಿನ ಸಭೆಯಲ್ಲಿ ಒತ್ತಾಯಿಸಲಾಗುವುದು’ ಎಂದು ತಿಳಿಸಿದರು.

ಲೇಖನಗಳ ಆಹ್ವಾನ

ಬೆಂಗಳೂರು: ನಿರಾತಂಕ ಸಂಸ್ಥೆಯು ‘ಮಾನವ ಸಂಪನ್ಮೂಲ ಹಾಗೂ ಕಾರ್ಮಿಕ ಕಾನೂನು ಕ್ಷೇತ್ರಗಳಿಗೆ ಸಂಬಂಧಿಸಿ ಲೇಖನ’ಗಳಿಗೆ ಅರ್ಜಿ ಆಹ್ವಾನಿಸಿದೆ.

ಪ್ರಥಮ ಬಹುಮಾನ ಪಡೆದ ಲೇಖನಕ್ಕೆ ₹10 ಸಾವಿರ, ದ್ವಿತೀಯ ಬಹುಮಾನ ಪಡೆದ ಲೇಖನಕ್ಕೆ ₹ 5 ಸಾವಿರ, ತೃತೀಯ ಬಹುಮಾನ ಪಡೆದ ಲೇಖನಕ್ಕೆ ₹2,500 ನೀಡಲಾಗುವುದು. ತೀರ್ಪುಗಾರರಿಂದ ಆಯ್ಕೆಯಾದ ಬರಹಗಳನ್ನು ಐಎಸ್‌ಬಿಎನ್‌ ಸಂಖ್ಯೆಯೊಂದಿಗೆ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು. ಆಸಕ್ತರು ಅಕ್ಟೋಬರ್‌ 10ರೊಳಗೆ nirathankango@gmail.comಗೆ ಲೇಖನಗಳನ್ನು ಕಳುಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಮಾಹಿತಿಗೆ: 80884 33026, 80730 67542ಗೆ ಸಂಪರ್ಕಿಸಿ.

ವಾಟ್ಸ್‌ಆ್ಯಪ್‌ಗೆ ಅಶ್ಲೀಲ ಫೋಟೊ ಕಳುಹಿಸಿ ಬೆದರಿಕೆ

ಕನಕಪುರ: ಮಹಿಳೆಯೊಬ್ಬರ ಅಶ್ಲೀಲ ಫೋಟೊಗಳನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿಯೊಬ್ಬರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ.

ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ವ್ಯಕ್ತಿ ಬೆಂಗಳೂರಿನ ಅಬೀಬ್ ಉಲ್ಲಾಖಾನ್ ಎಂದು ಗುರುತಿಸಲಾಗಿದೆ. ತಿಮ್ಮಸಂದ್ರ ಗ್ರಾಮದ ಮಹಿಳೆಯೊಬ್ಬರ ಫೋಟೊ ಇಟ್ಟುಕೊಂಡು ಬೆದರಿಸುತ್ತಿದ್ದ. ಈ ಹಿಂದೆಯೂ ಇದೇ ರೀತಿ ಬ್ಲಾಕ್ ಮೇಲ್ ಮಾಡಿದ್ದು ಕರೆಸಿ ವಿಚಾರಣೆ ಮಾಡಿದಾಗ ದೂರುದಾರ ಮಹಿಳೆಯನ್ನು ವಿವಾಹವಾಗಿದ್ದಾಗಿ ಪೊಲೀಸರಿಗೆ ತಿಳಿಸಿದ್ದ. ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ ಎಂದು ತಪ್ಪೊಪ್ಪಿಗೆ ಬರೆದು ಕೊಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT