ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಿ.ಎಂ. ಕಪ್‌ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ: ಗಗನ್‌, ಜ್ಯೋತಿಕಾ ‘ಮಿಂಚಿನ ಓಟ’

Published : 4 ಅಕ್ಟೋಬರ್ 2024, 23:30 IST
Last Updated : 4 ಅಕ್ಟೋಬರ್ 2024, 23:30 IST
ಫಾಲೋ ಮಾಡಿ
Comments

ಮೈಸೂರು: ಬೆಂಗಳೂರು ನಗರದ ಅಥ್ಲೀಟ್‌ಗಳಾದ ಗಗನ್‌ ಗೌಡ ಹಾಗೂ ಜ್ಯೋತಿಕಾ ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿ.ಎಂ. ಕಪ್ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ 100 ಮೀ. ಓಟದ ಸ್ಪರ್ಧೆಯಲ್ಲಿ ಶುಕ್ರವಾರ ಮಿಂಚಿನ ಓಟದ ಮೂಲಕ ಕ್ರಮವಾಗಿ ಪುರುಷ ಹಾಗೂ ಮಹಿಳೆಯರ ವಿಭಾಗದ ಅಗ್ರ ಪ್ರಶಸ್ತಿ ಗೆದ್ದರು.

ಗಗನ್‌ ಕೇವಲ 10.85 ಸೆಕೆಂಡುಗಳಲ್ಲಿ ಗುರಿ ಕ್ರಮಿಸಿ ಕಳೆದ ವರ್ಷ ಬೆಂಗಳೂರು ಗ್ರಾಮಾಂತರ ವಿಭಾಗದ ಎಂ. ಗೌತಮ್‌ ನಿರ್ಮಿಸಿದ್ದ 11.14 ಸೆಕೆಂಡುಗಳ ದಾಖಲೆಯನ್ನು ಅಳಿಸಿದರು. ಜ್ಯೋತಿಕಾ 12.24 ಸೆಕೆಂಡುಗಳಲ್ಲಿ ಓಡಿ, ಮೈಸೂರಿನ ಎಚ್‌.ಆರ್. ನವಮಿ ಹೆಸರಿನಲ್ಲಿದ್ದ 12.48 ಸೆಕೆಂಡುಗಳ ದಾಖಲೆಯನ್ನು ಸರಿಗಟ್ಟಿದರು. ಪುರುಷರ 4X100 ಮೀ. ರಿಲೆನಲ್ಲಿ ಮೈಸೂರು ವಿಭಾಗ ತಂಡವು ಮೊದಲ ಸ್ಥಾನ ಪಡೆಯಿತು. 

ಕ್ರೀಡಾಕೂಟದ ಎರಡನೇ ದಿನವಾದ ಶುಕ್ರವಾರ ಅಥ್ಲೆಟಿಕ್ಸ್‌ನಲ್ಲಿ ಒಟ್ಟು 16 ಸ್ಪರ್ಧೆಗಳು ನಡೆದಿದ್ದು, 14ರಲ್ಲಿ ಹೊಸ ಕೂಟ ದಾಖಲೆ ನಿರ್ಮಾಣವಾದವು. ಕ್ರೀಡಾಕೂಟದಲ್ಲಿ ಕಳೆದ ಸಾಲಿನಿಂದ ಫೋಟೊ ಫಿನಿಶ್‌ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದು, ಸ್ಪರ್ಧೆಯ ಫಲಿತಾಂಶವನ್ನು ಡಿಜಿಟಲ್‌ ಉಪಕರಣಗಳ ಮೂಲಕ ಅಳೆಯಲಾಗುತ್ತಿದೆ. ಹೀಗಾಗಿ 2023ರ ದಾಖಲೆಗಳನ್ನು ಮಾತ್ರ ಪರಿಗಣಿಸಲಾಗಿದೆ.

ಇದೇ ವೇಳೆ ಗುಂಪು ವಿಭಾಗದಲ್ಲಿ ಲೀಗ್‌ ಹಂತದಲ್ಲಿ ವಿವಿಧ ಸ್ಪರ್ಧೆಗಳು ಆರಂಭಗೊಂಡವು.

ಎರಡನೇ ದಿನದ ಫಲಿತಾಂಶ:

ಅಥ್ಲೆಟಿಕ್ಸ್‌:

ಪುರುಷರು: 100 ಮೀ ಓಟ: ಗಗನ್ ಗೌಡ ( ಬೆಂಗಳೂರು ನಗರ. ಕಾಲ; 10.85 ಸೆಕೆಂಡ್‌), ಎಂ. ಗೌತಮ್‌ ( ಶಿವಮೊಗ್ಗ)–2, ಎಂ. ಮಂಜು ( ಮೈಸೂರು)–3; 400 ಮೀ. ಓಟ: ತುಷಾರ್‌ ( ಬೆಂಗಳೂರು. ಕಾಲ: 48.73 ಸೆಕೆಂಡ್‌), ದಯಾನಂದ್ ಹನುಮಂತ್‌ ( ದಕ್ಷಿಣ ಕನ್ನಡ)–2, ಎಂ. ನಿತಿನ್‌ ಗೌಡ ( ಬೆಂಗಳೂರು ಗ್ರಾಮೀಣ)–3; 1500 ಮೀ. ಓಟ: ಎಂ.ಎಸ್. ಆಶ್ರಿತ್‌ ( ಶಿವಮೊಗ್ಗ. ಕಾಲ; 4ನಿಮಿಷ, 3.57 ಸೆಕೆಂಡ್‌)–1, ಜೆ.ಆರ್. ಕಲ್ಯಾಣ್‌ ( ಬೆಂಗಳೂರು)–2, ಈ. ಸುದೀಪ್‌ ( ರಾಮನಗರ)–3.

ಹೈಜಂಪ್: ಬಿ. ಚೇತನ್‌ ( ಬೆಂಗಳೂರು. ಎತ್ತರ; 1.95 ಮೀಟರ್‌)–1, ಭವಿತ್ ಕುಮಾರ್ ( ದಕ್ಷಿಣ ಕನ್ನಡ)–2, ಸಿನಾನ್ ( ಉಡುಪಿ)–3; ಟ್ರಿಪಲ್ ಜಂಪ್: ಎಂ. ಜಫರ್‌ಖಾನ್ ( ಬೆಳಗಾವಿ. ಉದ್ದ; 14.98 ಮೀಟರ್‌)–1, ಯಶಸ್ ಗೌಡ ( ಮಂಡ್ಯ)–2, ಎಸ್. ಪುನೀತ್‌ ( ಕೊಡಗು)–3; ಡಿಸ್ಕಸ್ ಥ್ರೋ: ಮೊಹಮ್ಮದ್‌ ಸಕ್ಲೇನ್‌ ಅಹಮ್ಮದ್ ( ಮೈಸೂರು. ದೂರ; 50.52 ಮೀಟರ್‌)–1, ಮೋಹಿತ್ ರಾಜ್‌ ( ಮೈಸೂರು)–2, ಪ್ರೀತಂ ರಜಪೂತ್ ( ವಿಜಯಪುರ)–3; ಜಾವೆಲಿನ್ ಥ್ರೋ: ಶಶಾಂಕ್ ಪಾಟೀಲ ( ಬೆಳಗಾವಿ. 74.74 ಮೀಟರ್‌)–1, ಶಾರುಖ್‌ ತಾರಿಹಾಳ ( ಬೆಂಗಳೂರು)–2, ಸಿದ್ದಪ್ಪ ದಂಡಿನ್ ( ಉಡುಪಿ)–3.

ಮಹಿಳೆಯರು:


ಅಥ್ಲೆಟಿಕ್ಸ್‌: 100 ಮೀ ಓಟ: ಜ್ಯೋತಿಕಾ ( ಬೆಂಗಳೂರು. ಕಾಲ: 12.24 ಸೆಕೆಂಡ್‌)–1, ಸಿಂಧುಶ್ರೀ ( ಮೈಸೂರು)–2, ಮೋನಿಕಾ ( ಬೆಳಗಾವಿ)–3; 400 ಮೀ. ಓಟ: ಮೇಘಾ ಮುನವಳ್ಳಿಮಠ ( ಧಾರವಾಡ: ಕಾಲ: 55.57 ಸೆಕೆಂಡ್‌)–1, ಎನ್‌.ಸಿ. ಮಾನಸಾ ( ಬೆಂಗಳೂರು)–2, ಪ್ರತೀಕ್ಷಾ ( ಉಡುಪಿ)–3; 1500 ಮೀ. ಓಟ: ಪ್ರಣತಿ ( ಬೆಂಗಳೂರು ಗ್ರಾಮೀಣ. 4 ನಿಮಿಷ, 44.36 ಸೆಕೆಂಡ್‌)–1, ಶಿಲ್ಪಾ ಹೊಸಮನಿ (ಬೆಳಗಾವಿ)–2, ಎನ್‌.ಎಸ್. ರೂಪಶ್ರೀ ( ದಕ್ಷಿಣ ಕನ್ನಡ)–3;

ಹೈ ಜಂಪ್: ಫ್ಲರ್ವೀಶಾ ಮೊಂಟೆರೊ ( ದಕ್ಷಿಣ ಕನ್ನಡ. ಎತ್ತರ: 1.63 ಮೀಟರ್‌)–1, ಪಿ. ಹರ್ಷಿತಾ ( ಬೆಂಗಳೂರು)–2, ಅಕ್ಷತಾ ದೊಡ್ಡಮನಿ ( ಧಾರವಾಡ)–3; ಟ್ರಿಪಲ್ ಜಂಪ್: ಜಿ. ಪವಿತ್ರಾ ( ಉಡುಪಿ. ಉದ್ದ: 12.76 ಮೀಟರ್‌)–1, ಸಿ. ವರ್ಷಿತಾ ( ಬೆಂಗಳೂರು)–2, ಅಮೂಲ್ಯಾ ( ಶಿವಮೊಗ್ಗ)–3; ಡಿಸ್ಕಸ್‌ ಥ್ರೋ: ಎಂ.ಎನ್. ಸುಷ್ಮಾ ( ಮೈಸೂರು: ದೂರ; 42.17 ಮೀಟರ್)–1, ಬಿ. ಸುಷ್ಮಾ ( ದಕ್ಷಿಣ ಕನ್ನಡ)–2, ಕೆ.ವಿ. ಲಿಖಿತಾ ( ಬೆಂಗಳೂರು–3; ಜಾವೆಲಿನ್‌ ಥ್ರೋ: ಶೆಹೆಜಹಾನಿ ( ಹಾಸನ: ದೂರ: 40.40 ಮೀಟರ್‌)–1, ದೀಪಾ ಕೋಪಣಿ ( ಬೆಳಗಾವಿ)–2, ಸಿಂಚನಾ ( ದಕ್ಷಿಣ ಕನ್ನಡ)–3.

ದಸರಾ ಕ್ರೀಡಾಕೂಟದ ಪುರುಷರ 4x100 ಮೀಟರ್ಸ್‌ ರಿಲೆನಲ್ಲಿ ಮೊದಲಿಗರಾಗಿ ಮುನ್ನುಗ್ಗಿದ ಮೈಸೂರು ವಿಭಾಗ ತಂಡದ ಸ್ಪರ್ಧಿ ( ಎಡದಿಂದ ಎರಡನೆಯವರು) – ಪ್ರಜಾವಾಣಿ ಚಿತ್ರ: ಅನೂಪ್‌ ರಾಘ.ಟಿ.
ದಸರಾ ಕ್ರೀಡಾಕೂಟದ ಪುರುಷರ 4x100 ಮೀಟರ್ಸ್‌ ರಿಲೆನಲ್ಲಿ ಮೊದಲಿಗರಾಗಿ ಮುನ್ನುಗ್ಗಿದ ಮೈಸೂರು ವಿಭಾಗ ತಂಡದ ಸ್ಪರ್ಧಿ ( ಎಡದಿಂದ ಎರಡನೆಯವರು) – ಪ್ರಜಾವಾಣಿ ಚಿತ್ರ: ಅನೂಪ್‌ ರಾಘ.ಟಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT