ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಘಟನೆಯಾದರೆ ಸವಲತ್ತು: ಸೋಲೂರು ಶ್ರೀ

Published : 12 ಅಕ್ಟೋಬರ್ 2024, 19:14 IST
Last Updated : 12 ಅಕ್ಟೋಬರ್ 2024, 19:14 IST
ಫಾಲೋ ಮಾಡಿ
Comments

ರಾಜರಾಜೇಶ್ವರಿನಗರ: ಶೈಕ್ಷಣಿಕ, ಆರ್ಥಿಕ, ರಾಜಕೀಯ, ಸಾಮಾಜಿಕವಾಗಿ ಅಭಿವೃದ್ಧಿ ಸಾಧಿಸಲು ಈಡಿಗ ಸಮುದಾಯದವರು ಶ್ರಮಿಸಬೇಕು ಎಂದು ಸೋಲೂರು ಆರ್ಯ ಮಠದ ಪೀಠಾಧ್ಯಕ್ಷ ವಿಖ್ಯಾತನಂದ ಸ್ವಾಮೀಜಿ ಕರೆ ನೀಡಿದರು.

ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯ ಮೊದಲ ಹಂತದಲ್ಲಿ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ವತಿಯಿಂದ ನಿರ್ಮಿಸುತ್ತಿರುವ ಸಮುದಾಯ ಭವನ, ಉಚಿತ ವಿದ್ಯಾರ್ಥಿ ನಿಲಯ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಈಡಿಗ ಸಮುದಾಯದ ಎಲ್ಲಾ ಪಂಗಡಗಳ ಒಂದಾಗದಿದ್ದರೆ ರಾಜಕೀಯ ಪಕ್ಷಗಳು ಗುರುತಿಸುವುದಿಲ್ಲ. ಸಂಘಟನೆಯಾದರೇ ಸಮಾಜಕ್ಕೆ ಸವಲತ್ತುಗಳು ಸಿಗಲಿವೆ ಎಂದರು.‌

ನಿಟ್ಟೂರು ನಾರಾಯಣಗುರು ಮಠದ ಪೀಠಾಧ್ಯಕ್ಷ ರೇಣುಕಾನಂದ ಸ್ವಾಮೀಜಿ ಮಾತನಾಡಿ,  ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿ ಉಚಿತ ವಿದ್ಯಾರ್ಥಿ ನಿಲಯ ಪ್ರಾರಂಭಿಸಿ, ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳಿಗೆ ಉನ್ನತ ಶಿಕ್ಷಣ ಹಾಗೂ ಉದ್ಯೋಗ ದೊರಕಿಸಿಕೊಡುವ ಮೂಲಕ ಸಮಾಜದ ಪ್ರಗತಿಗೆ ಶ್ರಮಿಸಿ ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ತಿಮ್ಮೇಗೌಡ, ನಗರದ ಕೇಂದ್ರ ಸ್ಥಳದಲ್ಲಿ ಅತ್ಯಾಧುನಿಕ ವಿದ್ಯಾರ್ಥಿ ನಿಲಯ, ಸಮುದಾಯ ನಿರ್ಮಿಸಲಾಗುತ್ತಿದೆ.  ಸಮಾಜದ ಅಭಿವೃದ್ಧಿಗೆ ಅಧಿಕಾರಿಗಳು, ಉದ್ಯಮಿಗಳು, ಸಿರಿವಂತರು ಆರ್ಥಿಕ ಸಹಾಯ ಮಾಡಬೇಕು. ದೇಶ ಪ್ರಗತಿ ಕಾಣುತ್ತಿದ್ದರೂ ಈಡಿಗ ಸಮಾಜದವರು ಇಂದಿಗೂ ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿದೆ ಎಂದರು.

ಪ್ರಧಾನ ಕಾರ್ಯದರ್ಶಿ ಆರ್.ಪಿ. ಪ್ರಕಾಶ್ ಅವರು, ಐದು ಅಂತಸ್ತಿನ ಬೃಹತ್ ಸಮುದಾಯ ಭವನ, ಉಚಿತ ವಿದ್ಯಾರ್ಥಿ ನಿಲಯ ತಲೆ ಎತ್ತಲಿದ್ದು. ಆರ್ಥಿಕ ಸಂಕಷ್ಟದಲ್ಲಿರುವ ಈಡಿಗ, ಹಿಂದುಳಿದ ವರ್ಗಗಳ ಜನಾಂಗದವರು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವವರಿಗೆ, ವೈದ್ಯ, ಎಂಜಿನಿಯರಿಂಗ್, ಪದವಿ ಪಡೆದುಕೊಳ್ಳಲು ಸಹಕಾರಿಯಾಗಿದೆ ಎಂದರು.

ದೇವರಾಜು ಅರಸು ವೈದ್ಯಕೀಯ ಮಹಾವಿದ್ಯಾಲಯ ಅಧ್ಯಕ್ಷ ಜಿ.ಎಚ್. ನಾಗರಾಜು, ಸಮುದಾಯದ ಮುಖಂಡರಾದ ಟಿ.ಶಿವಕುಮಾರ್, ಪೋತರಾಜ್, ಮೋಹನ್ ದಾಸ್‌, ಟಿ. ಮುತ್ತರಾಜು, ಪದ್ಮರವೀಂದ್ರ, ಕೃಷ್ಣಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT