ಬೆಂಗಳೂರು: ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ 200ಕ್ಕೂ ಹೆಚ್ಚು ಭೌತಿಕ, ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಗಳನ್ನು ತನಿಖಾಧಿಕಾರಿಗಳು ಸಂಗ್ರಹಿಸಿದ್ಧಾರೆ ಎಂದು ಗೊತ್ತಾಗಿದೆ.

‘ಸಾಕ್ಷಿದಾರರ ಹೇಳಿಕೆ ದಾಖಲು ಮಾಡಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದವರ ವಿಚಾರಣೆ ಮುಂದುವರಿಸಲಾಗಿದೆ. ಶುಕ್ರವಾರ ಇಬ್ಬರ ವಿಚಾರಣೆ ನಡೆಸಲಾಗಿದ್ದು ಮತ್ತೆ ಇಬ್ಬರಿಗೆ ನೋಟಿಸ್ ನೀಡಲಾಗಿದೆ. ಆರೋಪಿಗಳಿಗೆ ಶಿಕ್ಷೆ ಆಗುವ ನಿಟ್ಟಿನಲ್ಲಿ ತನಿಖೆ ಬಿಗಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
.ರೇಣುಕಸ್ವಾಮಿ ಕೊಲೆ ಪ್ರಕರಣ: ನಿಖಿಲ್ ನಾಯಕ್ ಜಾಮೀನು ಅರ್ಜಿ- ಆಕ್ಷೇಪಣೆ ಸಲ್ಲಿಕೆ.
‘ಸಂಗ್ರಹಿಸಿದ ಎಲ್ಲ ವಸ್ತುಗಳು ಹಾಗೂ ಮಾದರಿಗಳನ್ನು ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿದೆ. ವರದಿಯ ನಿರೀಕ್ಷೆಯಲ್ಲಿದ್ದೇವೆ’ ಎಂದು ಪೊಲೀಸರು ಹೇಳಿದರು.

ವಿಚಾರಣೆ ಮುಂದೂಡಿಕೆ: ಕೊಲೆ ಪ್ರಕರಣದ ಎ–17 ನಿಖಿಲ್ ನಾಯಕ್ ಜಾಮೀನು ಕೋರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ವಿಚಾರಣೆಯನ್ನು ನ್ಯಾಯಾಧೀಶರು ಸೋಮವಾರಕ್ಕೆ ಮುಂದೂಡಿದರು.

ನ್ಯಾಯಾಧೀಶ ಜಯಶಂಕರ್ ಅವರ ಪೀಠದಲ್ಲಿ ವಿಚಾರಣೆ ನಡೆಯಿತು. ಆರೋಪಿ ಪರ ರಂಗನಾಥ ರೆಡ್ಡಿ ಹಾಜರಿದ್ದರು.

ಪ್ರಕರಣವು ತನಿಖಾ ಹಂತದಲ್ಲಿದೆ ಎಂಬುದು ತಿಳಿದಿದ್ದರೂ ತರಾತುರಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈಗ ವಾದ ಮಾಡಲು ಸಾಧ್ಯ ಆಗದಿದ್ದರೆ ಅರ್ಜಿಯನ್ನೇ ವಜಾ ಮಾಡಿ ಎಂದು ಪ್ರಕರಣದ ವಿಶೇಷ ಪ್ರಾಸಿಕ್ಯೂಟರ್ ಪಿ.ಪ್ರಸನ್ನ ಕುಮಾರ್ ಅವರು ನ್ಯಾಯಾಧೀಶರನ್ನು ಕೋರಿದರು.
.ರೇಣುಕಸ್ವಾಮಿ ಕೊಲೆ ಪ್ರಕರಣ: ಸ್ವಂತ ಸಿಮ್ ಬಳಸದ ನಟ ದರ್ಶನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.