ಮಂಡ್ಯ: ಕಾಯಕ ಮಹತ್ವ, ವೃತ್ತಿ ಗೌರವ, ಜಾತ್ಯತೀತ ತತ್ವ, ಮಾನವಪರವಾದದಲ್ಲಿ ದೃಢವಿಶ್ವಾಸದಂಥ ಮೌಲಿಕ ವಿಚಾರಗಳನ್ನು ವಚನ ಮೂಲಕ ಹರಡುವಲ್ಲಿ ಕ್ರಾಂತಿಕಾರಿ ಬಸವಣ್ಣ ಮಾಡಿದ ಆಂದೋಲನ ಇಂದಿಗೂ ಪ್ರಸ್ತುತ ಎಂದು ಹುಣಸೂರಿನ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ತ್ರಿವೇಣಿ ಅಭಿಪ್ರಾಯಪಟ್ಟರು.

ಜಿಲ್ಲಾ ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ವಿವಿಧ ಸಂಘಟನೆಗಳ ಜೊತೆಗೂಡಿ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ಬಸವೇಶ್ವರ ಅವರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು.
ಮಹಾನ್ ಮಾನವತಾವಾದಿ, ಜಗಜ್ಯೋತಿ ಭಂಡಾರಿ ಎಂದೆಲ್ಲಾ ಕರೆಯುವ ಬಸವಣ್ಣನವರಿಗೆ ಉಳಿದೆಲ್ಲಾ ವಚನಕಾರರಿಗಿಂತ ಮಹತ್ವದ ಸ್ಥಾನವಿದೆ. ಏಕೆಂದರೆ, ಬಸವಣ್ಣ ಅವರು ಜನರ ನಡುವೆಯೇ ಇದ್ದವರು. ತಮ್ಮ ವಿಭಿನ್ನ ವ್ಯಕ್ತಿತ್ವದಿಂದ, ಎಲ್ಲವನ್ನೂ ಮೀರಿದ್ದರು ಎಂದು ಕೊಂಡಾಡಿದರು.

ಬಸವಣ್ಣ ಅವರು ಬದುಕಿನುದ್ದಕ್ಕೂ ಸಾರ್ವಕಾಲಿಕ ಸತ್ಯವನ್ನೇ ಹೇಳುತ್ತಾ, ಪ್ರತಿಪಾದಿಸುತ್ತಾ ಅಂದರಂತೆ ಬದುಕಿದರು. ಅವರೆಂದೂ ಒಂದು ಸಮುದಾಯಕ್ಕೆ ಸೀಮಿತಗೊಳ್ಳದೆ, ಇಡೀ ಮನುಕುಲದ ಅಭ್ಯುದಯಕ್ಕಾಗಿ ಶ್ರಮಿಸಿದರು. ಹಾಗಾಗಿಯೇ ಅವರು ವಿಶ್ವಮಾನ್ಯರಾದರು ಎಂದು ಬಣ್ಣಿಸಿದರು.

ಇಂದಿನ ಜಾಗತಿಕ ನಾಗಲೋಟದಲ್ಲಿ ನಮ್ಮೆಲ್ಲಾ ಆಲೋಚನ ಕ್ರಮಗಳು ಸಂಪೂರ್ಣ ಬದಲಾಗಿದೆ. ಇಂಥ ಸಂದರ್ಭದಲ್ಲಿ ಬಸವಣ್ಣ ಅವರ ಚಿಂತನೆ-ಆಲೋಚನೆಗಳನ್ನು ಮತ್ತೆ ಕಟ್ಟಿಕೊಳ್ಳಬೇಕಾದ ಅವಶ್ಯಕತೆ ಹೆಚ್ಚಾಗಿದೆ ಎಂದು ಸಲಹೆ ನೀಡಿದರು.

ಬಸವಣ್ಣ ಅವರು ಪ್ರತಿಪಾದಿಸಿದ ವೃತ್ತಿ ಗೌರವ, ಸ್ತ್ರೀ ಸಮಾನತೆ, ದುಡಿಮೆ ಮಹತ್ವ, ತಳವರ್ಗದ ಪರ ಮಾನವಪರ ಧೋರಣೆ ಹಾಗೂ ಜಾತ್ಯತೀತ ತತ್ವ ಪ್ರತಿಪಾದನೆ ಎಲ್ಲವೂ ಪ್ರಸ್ತುತ ದಿನಗಳಲ್ಲಿ ಎಷ್ಟರಮಟ್ಟಿಗೆ ಪಾಲನೆಯಾಗುತ್ತಿದೆ ಎನ್ನುವ ಬಗೆಗೆ ಆತ್ಮಾವಲೋಕನ ಆಗಬೇಕಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ. ಎಂ.ಎನ್.ಅಜಯ್ ನಾಗಭೂಷಣ್ ಮಾತನಾಡಿ, ಪ್ರತಿಯೊಬ್ಬರೂ ಜವಾಬ್ದಾರಿ ಅರಿತು, ಸಮರ್ಥವಾಗಿ ತಮ್ಮ ಕಾಯಕವನ್ನು ನಿಭಾಯಿಸಿದರೇ, ಇಡೀ ಜಗತ್ತೇ ಸುಂದರವಾಗಿ ಕಾಣುತ್ತದೆ ಎಂದು ಕಿವಿಮಾತು ಹೇಳಿದರು.

ಬೇಬಿ ಬೆಟ್ಟದ ರಾಮಯೋಗೀಶ್ವರ ಮಠದ ಸದಾಶಿವ ಸ್ವಾಮೀಜಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ ಜಿ.ಬೊರಸೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಸಿ.ಜಯಣ್ಣ, ಹೆಚ್ಚುವರಿ ಜಿಲ್ಲಾಧಿಕಾರಿ ಶಂಕರಪ್ಪ, ಕಸಪಾ ಜಿಲ್ಲಾ ಘಟಕ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಮೈಷುಗರ್ ಮಾಜಿ ಅಧ್ಯಕ್ಷ ನಾಗರಾಜಪ್ಪ, ದಸಂಸ ಮುಖಂಡ ಎಂ.ಬಿ.ಶ್ರೀನಿವಾಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ.ಪುಟ್ಟಸ್ವಾಮಿ, ಕಾಯಕಯೋಗಿ ಪ್ರತಿಷ್ಠಾನದ ಶಿವಕುಮಾರ್, ಎಲ್.ಸಂದೇಶ್ ಮತ್ತಿತರರು ಉಪಸ್ಥಿತರಿದ್ದರು.

ಸಮಾರಂಭಕ್ಕೂ ಮುನ್ನ ವಿವಿಧ ಜಾನಪದ ಕಲಾ ತಂಡಗಳು ಮತ್ತು ಶರಣರ ಸ್ತಬ್ಧ ಚಿತ್ರಗಳೊಂದಿಗೆ ಬಸವೇಶ್ವರರ ಭಾವಚಿತ್ರವನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

`ಬಸವೇಶ್ವರರ ಆದರ್ಶ ಪಾಲಿಸಿ'
ಹಲಗೂರು ವರದಿ: ಸಮಾಜ ಸುಧಾರಣೆಯಲ್ಲಿ ಕ್ರಾಂತಿಕಾರಿ ಬೆಳವಣಿಗೆಯ ಛಾಪು ಮೂಡಿಸಿದ ಬಸವಣ್ಣನವರ ತತ್ವವನ್ನು ಇಂದಿನ ಯುವಪೀಳಿಗೆ ಪಾಲಿಸಬೇಕು ಎಂದು ಆರಕ್ಷಕ ಉಪನಿರೀಕ್ಷಕ ಬಿ.ಎಸ್.ವೆಂಕಟೇಶ್ ಹೇಳಿದರು.

ಹಲಗೂರು ಸಮೀಪದ ಬಾಳೆಹೊನ್ನಿಗ ಗ್ರಾಮದಲ್ಲಿ ಗಗನಚುಕ್ಕಿ ಸಾಂಸ್ಕೃತಿಕ ಕಲಾ ವೃಂದ ಮತ್ತು ತರು ಟ್ರಸ್ಟ್ ವತಿಯಿಂದ ಬಸವ ಜಯಂತಿ ಅಂಗವಾಗಿ ಸೋಮವಾರ ನಡೆದ ಹಳ್ಳಿ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಾಮಾಜಿಕ ಕ್ರಾಂತಿಯ ಜೊತೆಜೊತೆಗೆ ವಚನಗಳ ಮೂಲಕ ಸಾಹಿತ್ಯ ಕ್ರಾಂತಿಯನ್ನು ಮಾಡಿದರು. ನುಡಿದಂತೆ ನಡೆ ಎಂಬ ಘೋಷ ವ್ಯಾಕ್ಯದಂತೆ ಬದುಕಿದರು ಎಂದರು.

ನಾಗರಾಜಪ್ಪ ಅವರು ವೀರಗಾಸೆ ನೃತ್ಯ ಪ್ರದರ್ಶಿಸಿದರು. ಸಾಕಮ್ಮ ಅವರಿಂದ ಸೋಬಾನೆ ಪದ, ಪುಟ್ಟಮಾದಯ್ಯ ಮತ್ತು ತಂಡದವರಿಂದ ಜಾನಪದ ಗೀತೆ ಗಾಯನ, ಕನ್ನಲಿ ಮುತ್ತು ತಂಡದಿಂದ ತಮಟೆ ನೃತ್ಯ, ಬುಯ್ಯನದೊಡ್ಡಿ ರೇವಣ್ಣ ತಂಡದಿಂದ ಪೂಜಾಕುಣಿತ ಪ್ರದರ್ಶನ ನಡೆಯಿತು.

ತರು ಟ್ರಸ್ಟ್ ಅಧ್ಯಕ್ಷ ಪಿ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಕೃಷ್ಣಪ್ಪ, ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷರಾದ ಬಿ.ವಿ.ಪ್ರಕಾಶ್, ಕೃಷ್ಣೇಗೌಡ, ಸಹ ಜೀವಿಕ ರಾಜ್ಯ ಘಟಕದ ಸಂಚಾಲಕ ಬಾ.ಗೋ.ಕುಮಾರ್, ಮುಖಂಡ ನಾಗರಾಜು, ಬಿ.ಎಸ್.ಪಿ ತಾಲ್ಲೂಕು ಘಟಕದ ಖಜಾಂಚಿ ಚೆಲುವರಾಜು, ಯಜಮಾನ್ ಬೋರಯ್ಯ, ಪುಟ್ಟಯ್ಯ ಇದ್ದರು.

`ಸಮಾಜವಾದದ ಪ್ರತಿಪಾದಕ ಬಸವಣ್ಣ'
ಶ್ರೀರಂಗಪಟ್ಟಣ ವರದಿ: ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ತತ್ವವನ್ನು ಜಗತ್ತಿಗೆ ಮೊದಲು ಸಾರಿದ, ಆ ಮೂಲಕ ಸಮಾಜವಾದದ ತತ್ವವನ್ನು ಪ್ರತಿಪಾದಿಸಿದ ಕೀರ್ತಿ ಬಸವಣ್ಣ ಅವರಿಗೆ ಸಲ್ಲುತ್ತದೆ ಎಂದು ಶಾಸಕ ರಮೇಶ ಬಂಡಿಸಿದ್ದೇಗೌಡ ಹೇಳಿದರು.

ಇಲ್ಲಿನ ಮಿನಿ ವಿಧಾನಸೌಧದಲ್ಲಿ ತಾಲ್ಲೂಕು ಆಡಳಿತದ ವತಿಯಿಂದ ಸೋಮವಾರ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 12ನೇ ಶತಮಾನದಲ್ಲಿಯೇ ಕಾಯಕದ ಮಹತ್ವವನ್ನು ತಿಳಿಸಿಕೊಟ್ಟ ಬಸವಣ್ಣ ಅವರು ಶ್ರಮದ ಬದುಕೇ ಶ್ರೇಷ್ಠ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ನಿರಕ್ಷರಕುಕ್ಷಿಗಳಿಗೂ ಅರ್ಥವಾಗುವ ಸರಳ ವಚನಗಳ ಮೂಲಕ ಮೂಢ ನಂಬಿಕೆ, ಕಂದಾಚಾರಗಳ ವಿರುದ್ಧ ಜನ ಜಾಗೃತಿ ಮೂಡಿಸಿದರು. ಶರಣರ ಸಂಗಮವಾಗಿದ್ದ ಅನುಭವ ಮಂಟಪ ಸಂಸತ್ನ ಪ್ರತೀಕವಾಗಿತ್ತು ಎಂದು ಬಣ್ಣಿಸಿದರು.

ಜಾತಿ ವ್ಯವಸ್ಥೆಯ ನಿರ್ಮೂಲನೆಗೆ ಬಸವಣ್ಣ ಅವರು ಸಾಂಘಿ ಕ ಪ್ರಯತ್ನ ನಡೆಸಿದರು. ಸಮಾಜದ ಸ್ವಾಸ್ಥ್ಯಕ್ಕಾಗಿ ಅವಿರತ ಶ್ರಮಿಸಿದ ಬಸವಣ್ಣ ಅವರ ಜೀವನ ವಿಧಾನ ಎಲ್ಲ ಕಾಲಕ್ಕೂ ಅನುಕರಣೀಯ ಎಂದರು.

ತಹಶೀಲ್ದಾರ್ ಎಂ.ಸಿ.ಮಹದೇವು, ವೀರಶೈವ ಮಹಾಸಭಾದ ತಾಲ್ಲೂಕು ಅಧ್ಯಕ್ಷ ಮರಿಬಸವಯ್ಯ, ನಗರಾಧ್ಯಕ್ಷ ಎಸ್.ಕುಮಾರ್, ಪ್ರಸನ್ನಕುಮಾರ್, ಉಪತಹಶೀಲ್ದಾರ್ ಸಿದ್ದಪ್ಪ, ಆರ್ಐ ಸಿದ್ದಪ್ಪ, ಕರಾದಸಂಸ ಮುಖಂಡ ಕುಬೇರಪ್ಪ ಇತರರು ಇದ್ದರು.

`ವಚನ ತತ್ವ ಪಾಲಿಸಿ'
ಕಿಕ್ಕೇರಿ ವರದಿ: ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಭಕ್ತಿಭಂಡಾರಿ ಬಸವಣ್ಣ ಅವರ ಜಯಂತಿಯನ್ನು ಸೋಮವಾರ ಸರಳವಾಗಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಬಸವಣ್ಣ ಅವರ ಭಾವಚಿತ್ರಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಮ್ಮರಾಮು ಪುಷ್ಪಾರ್ಚನೆ ಮಾಡಿದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎನ್.ಕುಮಾರ್ ದೇಶ ಶ್ರೀಮಂತವಾಗಲು ಬಸವಣ್ಣನವರ ವಚನಧಾರೆಯನ್ನು ಪಾಲಿಸಿದಾಗ ಮಾತ್ರ ಸಾಧ್ಯ ಎಂದು ನುಡಿ ನಮನ ಸಲ್ಲಿಸಿದರು.

ಕಾರ್ಯದರ್ಶಿ ಪೂರ್ಣಿಮ, ಮಧುಕರ್, ಶ್ರೀಕಾಂತ್, ಪ್ರದೀಪ್, ರಾಮೇಗೌಡ, ಕಿರಣ್ ಇದ್ದರು.
ಯುವಕರಾದ ರಾಕೇಶ್, ಗಗನ್, ಸಂದೇಶ್, ಶ್ರೀಕಾಂತ್ ಬ್ರಹ್ಮೇಶ್ವರ ದೇಗುಲದ ಬಸವಣ್ಣನ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದರು.

`ಕಾಯಕಯೋಗಿ ಧರ್ಮಕ್ಕೆ ಸೀಮಿತರಲ್ಲ'
ಮಳವಳ್ಳಿ ವರದಿ: ಕ್ರಾಂತಿಯೋಗಿ ಬಸವಣ್ಣ ಕೇವಲ ಧರ್ಮಕ್ಕೆ ಸೀಮಿತವಾದ ವ್ಯಕ್ತಿಯಲ್ಲ, ವಿಶ್ವದ ಮಹಾಮಾನವತಾವಾದಿ ಎಂದು ತಹಶೀಲ್ದಾರ್ ಎಂ.ಆರ್. ರಾಜೇಶ್ ಅಭಿಪ್ರಾಯಪಟ್ಟರು.

ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ತಾಲ್ಲೂಕು ಆಡಳಿತದ ವತಿಯಿಂದ ಸರಳವಾಗಿ ಬಸವಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಾನವನ ಉತ್ತಮ ವ್ಯಕ್ತಿತ್ವ ರೂಪಿಸಲು ಹೋರಾಟ ಮಾಡಿದ ಜ್ಞಾನಿ. ಬಸವಣ್ಣನವರ ಕಲ್ಪನೆ ರೀತಿ ಮನುಷ್ಯ ಜೀವನ ನಡೆಸಿದ್ದರೆ ಇಂದು ಸಮಾಜದ ಅಭಿವೃದ್ಧಿಯಲ್ಲಲಿ ಹಿನ್ನಡೆಯಾಗುತ್ತಿರಲಿಲ್ಲ ಎಂದರು.

ಶಿಕ್ಷಕ ಪ್ರಭುಸ್ವಾಮಿ ಬಸವಣ್ಣವರ ಬಗ್ಗೆ ಉಪನ್ಯಾಸ ನೀಡಿ ಸತ್ಯ, ನ್ಯಾಯ ನೀತಿಯಲ್ಲಿ ಬಸವಣ್ಣ ಅವರು ಪಾಲಿಸಿದ ರೀತಿಯಲ್ಲಿ ಮತ್ತೊಬ್ಬ ವ್ಯಕ್ತಿ ಪಾಲಿಸಲು ಸಾಧ್ಯವಿಲ್ಲ. ಬಸವಣ್ಣನವರ ವಚನಗಳನ್ನು ಇಂಗ್ಲೀಷ್ ಭಾಷೆಗೆ ಅನುವಾದ ಮಾಡಿ ವಿದೇಶದಲ್ಲಿ ಬಳಕೆ ಮಾಡಿದ್ದರೆ ಪ್ರಪಂಚದ ಆಸ್ತಿಯಾಗುತ್ತಿದ್ದರು ಎಂದು ಅಭಿಪ್ರಾಯಪಟ್ಟರು.

ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಕುಂದೂರುಮೂರ್ತಿ, ಬಸವೇಶ್ವರಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಬಿ.ಶಿವಸ್ವಾಮಿ, ಉಪಾಧ್ಯಕ್ಷ ಜಗದೀಶ್, ವೀರಶೈವ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎ.ಎಸ್.ನಟರಾಜಮೂರ್ತಿ, ವೀರಶೈವ ಯುವ ಬಳಗದ ಅಧ್ಯಕ್ಷ ಬಿ.ಎನ್.ರಮೇಶ, ಮಾಜಿ ಅಧ್ಯಕ್ಷ ಎವಿಟಿ ಕುಮಾರ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಎಸ್.ದಯಾಶಂಕರ್, ಎಚ್.ಸಿ.ಮಹೇಶ್, ಅಂಬರೀಶ್, ಪುಟ್ಟಮಾದಪ್ಪ, ಗಂಗಾಧರಸ್ವಾಮಿ, ಪ್ರಸಾದ್, ಗ್ರೇಡ್2 ತಹಶೀಲ್ದಾರ್ ಸಿದ್ದು, ಶಿರಸ್ತೇದಾರ್ ಮಹದೇವು ಹಾಗೂ ಸಿಬ್ಬಂದಿವರ್ಗದವರು ಇದ್ದರು.

`ಕಾಯಕ ತತ್ವ ಅಳವಡಿಸಿಕೊಳ್ಳಿ'
ಕೃಷ್ಣರಾಜಪೇಟೆ ವರದಿ: ಜಗಜ್ಯೋತಿ ಬಸವೇಶ್ವರರ ಜಯಂತಿಯನ್ನು ತಾಲ್ಲೂಕಿನ ವಿವಿಧೆಡೆ ಸೋಮವಾರ ಸಡಗರ, ಸಂಭ್ರಮಗಳಿಂದ ಆಚರಿಸಲಾಯಿತು.

ತಾಲ್ಲೂಕು ಆಡಳಿತದ ವತಿಯಿಂದ ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ತಹಶೀಲ್ದಾರ್ ಅಹೋಬಲಯ್ಯ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಜಸ್ವ ನಿರೀಕ್ಷಕರಾದ ಗೋಪಾಲಕೃಷ್ಣ, ಮಹದೇವೇಗೌಡ, ಗ್ರಾಮಲೆಕ್ಕಾಧಿಕಾರಿ ಮರಿಸಿದ್ದೇಗೌಡ, ಆಹಾರ ಶಿರಸ್ತೇದಾರ್ ಚಂದ್ರೇಗೌಡ, ವೀರಶೈವ ಸಮಾಜದ ಮುಖಂಡರಾದ ಕೆ.ಎನ್. ಪರಮೇಶ್ವರ್, ಶಿವಸ್ವಾಮಿ, ಕೆ.ಎಸ್.ನಾಗೇಶ್ಬಾಬು, ತಾಲ್ಲೂಕು ಕಚೇರಿಯ ಗಂಗಾಧರ್, ಹಿರಿಯಣ್ಣ ಇದ್ದರು.

ಪಟ್ಟಣದ ಪುಟ್ಟಮ್ಮ ಚಿಕ್ಕೇಗೌಡ ನಾಗರಿಕ ಟ್ರಸ್ಟ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಟ್ರಸ್ಟ್ನ ಅಧ್ಯಕ್ಷ ಹಾಗೂ ನೂತನ ಶಾಸಕ ಕೆ.ಸಿ.ನಾರಾಯಣಗೌಡ, ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಮಹಾನ್ ಮಾನವತಾವಾದಿಯಾದ ಬಸವಣ್ಣ, ಕಾಯಕವೇ ಕೈಲಾಸ ಎಂದು ಸಾರುವ ಮೂಲಕ ಪ್ರತಿಯೊಬ್ಬ ಕಾಯಕಯೋಗಿಯನ್ನು ಗೌರವದಿಂದ ಕಾಣಬೇಕು ಎಂದು ಸಂದೇಶ ನೀಡಿದ್ದಾರೆ. ಅವರ ಆದರ್ಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಪಟ್ಟಣದ ಚನ್ನಬಸವೇಶ್ವರ ದೇಗುಲದ ವಿರೂಪಾಕ್ಷ ರಾಜಯೋಗಿಗಳು , ವೀರಶೈವ ಸಮಾಜದ ಮುಖಂಡರು ಭಾಗವಹಿಸಿದ್ದರು.

ಅಘಲಯ ಗ್ರಾಮ ಪಂಚಾಯಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಜುಳಮ್ಮ ಕೃಷ್ಣೇಗೌಡ ಬಸವೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಮಾಜಿ ಅಧ್ಯಕ್ಷ ಲೋಕೇಶ್, ವಿಎಸ್ಎಸ್ಎನ್ ಬ್ಯಾಂಕ್ ಮಾಜಿ ಅಧ್ಯಕ್ಷ ಮಹದೇವ್, ಗ್ರಾಮದ ಮುಖಂಡರಾದ ಕೃಷ್ಣೇಗೌಡ, ತಮ್ಮಣ್ಣನಾಯಕ ಭಾಗವಹಿಸಿದ್ದರು.

ಅಕ್ಕಿಹೆಬ್ಬಾಳು ಗ್ರಾಮ ಪಂಚಾಯಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರ್ವತಮ್ಮ ಕೃಷ್ಣೇಗೌಡ ಬಸವೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಉಪಾಧ್ಯಕ್ಷ ಎ.ಎಸ್.ನಾಗರಾಜು, ಪಿಡಿಒ ಎನ್.ರಾಜು, ಸದಸ್ಯರಾದ ರಮೇಶ್, ಚಿಕ್ಕೇಗೌಡ, ರಾಜನಾಯಕ, ಮುಖಂಡರಾದ ಎ.ಎಸ್.ಕಿಟ್ಟು, ಮಂಜು ಭಾಗವಹಿದ್ದರು.

ಭಾರತೀಪುರ ಕ್ರಾಸ್ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಮಂಜುನಾಥ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಪಿಡಿಒ ಡಾ.ಟಿ.ನರಸಿಂಹರಾಜು, ಕಾರ್ಯದರ್ಶಿ ಮಹದೇವ್, ವೀರಶೈವ ಮುಖಂಡ ನಾಗರಾಜು ಭಾಗವಹಿಸಿದ್ದರು.

`ಸಮಾನತೆಯ ಹರಿಕಾರ ಬಸವಣ್ಣ'
ಮದ್ದೂರು ವರದಿ: ವರ್ಗ ಅಸಮಾನತೆ ವಿರುದ್ಧ 12ನೇ ಶತಮಾನದಲ್ಲಿಯೇ ಹೋರಾಟ ನಡೆಸಿದ ಕ್ರಾಂತಿ ಪುರುಷ ಬಸವಣ್ಣ ಜಗತ್ತು ಕಂಡ ಮಹಾನ್ ಮಾನವತಾವಾದಿ ಎಂದು ರಾಮನಗರದ ಆದಿಚುಂಚನಗಿರಿ ಅಂಧರ ಶಾಲೆಯ ಆಡಳಿತಾಧಿಕಾರಿ ಅನ್ನದಾನಿ ಸ್ವಾಮೀಜಿ ಬಣ್ಣಿಸಿದರು.

ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಭಾನುವಾರ ತಾಲ್ಲೂಕು ಆಡಳಿತ ಆಯೋಜಿಸಿದ್ದ ಬಸವೇಶ್ವರರ ಜಯಂತಿ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಅಂದಿನ ಕಾಲದಲ್ಲಿಯೇ ಎಲ್ಲ ವರ್ಗದ ಜನರನ್ನು ಒಂದೂಗೂಡಿಸಿ ಲಿಂಗಧಾರಣೆ ಮಾಡಿಸಿದ ಬಸವಣ್ಣ, ಅವರಲ್ಲಿ ಕಾಯಕ ತತ್ವ ಹಾಗೂ ನಿಷ್ಠೆಯ ಪರಿಕಲ್ಪನೆ ಮೂಡಿಸಿದ ಮಹಾನ್ ಕ್ರಾಂತಿಕಾರ. ಅವರ ಕಾಯಕ ತತ್ವ ಇಂದಿಗೂ ಅನುಕರಣೀಯ ಎಂದು ಹೇಳಿದರು.

ಗವಿಮಠದ ಬಸಲಿಂಗಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿ ಮಾತನಾಡಿ ಬಸವಣ್ಣ ಅವರ ವಚನಗಳು ಸಾಮಾಜಿಕ ಬದಲಾವಣೆಗೆ ನೀಡಿದ ಕೊಡುಗೆ ಅನನ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಪಟ್ಟಣದ ಉಗ್ರನರಸಿಂಹಸ್ವಾಮಿ ದೇಗುಲದ ಆವರಣದಿಂದ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ನಡೆಯಿತು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ತಹಶೀಲ್ದಾರ್. ಡಾ.ಎಚ್.ಎಲ್.ನಾಗರಾಜು, ಕಸಾಪ ಅಧ್ಯಕ್ಷ ಅಪೂರ್ವಚಂದ್ರ, ಎಂ.ಎಚ್.ಚನ್ನೇಗೌಡ ವಿದ್ಯಾನಿಲಯದ ಕಾರ್ಯದರ್ಶಿ ಕೆ.ಟಿ.ಚಂದು, ವಿಶ್ರಾಂತ ಪ್ರಾಂಶುಪಾಲ ಡಾ.ಎಸ್.ಬಿ.ಅಪ್ಪಾಜಿಗೌಡ, ವೀರಶೈವ ಅಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ದರಾಮು, ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಮಹದೇವು, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಕಾಂತರಾಜು, ಗ್ರೇಡ್ 2 ತಹಶೀಲ್ದಾರ್ ರಾಮಪ್ಪ, ಪುರಸಭಾ ಮುಖ್ಯಾಧಿಕಾರಿ ಚಿಕ್ಕನಂಜಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

`ಬಸವಣ್ಣ ವಚನ ಕಾಂತ್ರಿಯ ಹರಿಕಾರ'
ನಾಗಮಂಗಲ ವರದಿ: ಸಾಮಾಜಿಕ ಕ್ರಾಂತಿಯ ಹರಿಕಾರ ಬಸವಣ್ಣ ಅವರನ್ನು ಕೇವಲ ಒಂದು ಸಮುದಾಯಕ್ಕೆ ಸೀಮಿತಗೊಳಿಸುವದು ಸರಿಯಲ್ಲ ಎಂದು ತಹಶೀಲ್ದಾರ್ ವೆಂಕಟರಾಮಯ್ಯ ಬೇಸರವ್ಯಕ್ತಪಡಿಸಿದರು.

ಪಟ್ಟಣದ ಮಿನಿವಿಧಾನಸೌಧದ ಆವರಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ ಮತ್ತು ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಗತ್ತು ಕಂಡ ಸಮಾಜ ಸುಧಾರಣೆಯ ಆಂದೋಲನಗಳಲ್ಲಿ 12ನೇ ಶತಮಾನದಲ್ಲಿ ಕ್ರಾಂತಿ ಮೂಡಿಸಿದ ಯೋಗಿ ಬಸವಣ್ಣ. ಸಮಾನತೆಯ ತತ್ವ ಬೋಧಿಸಿದ ಬಸವಣ್ಣ ಅವರ ತತ್ವಗಳನ್ನು ಎಲ್ಲರೂ ಪಾಲಿಸಬೇಕು ಎಂದು ಅಭಿಪ್ರಾಯಪಟ್ಟರು.

ಉಪನ್ಯಾಸಕ ಎ.ರಘುನಾಥ್ ಸಿಂಗ್ ಮಾತನಾಡಿ, ಸಮಾಜದಲ್ಲಿನ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಲು ಬಸವಣ್ಣ ಶ್ರಮಿಸಿದರ. ಸಾಮಾಜಿಕ, ಸಾಹಿತ್ಯಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಕ್ರಾಂತಿ ಮಾಡಿದವರಲ್ಲಿ ಅವರು ಅಗ್ರಗಣ್ಯರು ಎಂದರು.

ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಗರಾಜಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಆರ್.ಅನಂತರಾಜು, ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಂ.ನಾಗರಾಜಯ್ಯ, ಶಿರಸ್ತೆದಾರ್ ಶಿವಲಿಂಗಮೂರ್ತಿ, ಪಟ್ಟಣ ಪೋಲೀಸ್ ಠಾಣೆಯ ಪಿಎಸ್ಐ ಜಿ.ಜೆ.ಸತೀಶ್, ವೀರಶೈವ ಸಮುದಾಯದ ತಾಲ್ಲೂಕು ಘಟಕದ ಅಧ್ಯಕ್ಷ ಜಿ.ಎಸ್. ರಾಜಶೇಖರ್, ಪಟ್ಟಣ ಸಮಿತಿಯ ಅಧ್ಯಕ್ಷ ಜಿತೇಂದ್ರ, ಗೌರವಾಧ್ಯಕ್ಷ ಎನ್.ಆರ್.ಸತೀಶ್, ಉಪಾಧ್ಯಕ್ಷ ಅಲ್ಲಮಪ್ರಭು, ಪದಾಧಿಕಾರಿ ಎನ್.ಸಿ.ರಾಜೇಂದ್ರಪ್ರಸಾದ್, ಖಜಾಂಚಿ ಶಶಿಧರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.